Advertisement

ದ್ವಿಭಾಷಾ ಐ ಲವ್‌ ಯು

08:28 PM May 23, 2019 | mahesh |

ಎಲ್ಲ ಅಂದುಕೊಂಡಂತೆ ಆಗಿದ್ದರೆ, ಇಷ್ಟೊತ್ತಿಗಾಗಲೇ “ಐ ಲವ್‌ ಯು’ ಚಿತ್ರ ಬಿಡುಗಡೆಯಾಗಿ ತೆರೆಗೆ ಬಂದಿರಬೇಕಿತ್ತು. ಆದರೆ ಚುನಾವಣೆ, ಐಪಿಎಲ್‌, ಎಕ್ಸಾಂ .. ಹೀಗೆ ಹಲವು ಅಡೆತಡೆಗಳು ಎದುರಾದ ಕಾರಣ ರಿಯಲ್‌ ಸ್ಟಾರ್‌ ಉಪೇಂದ್ರ, ನಿರ್ದೇಶಕ ಆರ್‌. ಚಂದ್ರು ಕಾಂಬಿನೇಷನ್‌ನ “ಐ ಲವ್‌ ಯು’ ಚಿತ್ರ ತೆರೆಗೆ ಬರೋದಕ್ಕೆ ತಡವಾಗಿದೆ ಅನ್ನೋದು ವಾಸ್ತವ ಕಾರಣ. ಅಂತಿಮವಾಗಿ ಈಗ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಜೂನ್‌ 14 ರಂದು “ಐ ಲವ್‌ ಯು’ ಚಿತ್ರ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಏಕಕಾಲಕ್ಕೆ ಅದ್ಧೂರಿಯಾಗಿ ತೆರೆಕಾಣುತ್ತಿದೆ.ಐ ಲವ್‌ ಯು’ ಚಿತ್ರದ ಬಿಡುಗಡೆ ತಡವಾದರೂ ಚಿತ್ರವನ್ನು ಪಕ್ಕಾ ಯೋಜನಾ ಬದ್ಧವಾಗಿ ಬಿಡುಗಡೆ ಮಾಡಲು ಚಿತ್ರದ ನಿರ್ಮಾಪಕ ಕಂ ನಿರ್ದೇಶಕ ಆರ್‌. ಚಂದ್ರು ತಯಾರಿ ಮಾಡಿಕೊಂಡಿದ್ದಾರೆ. ಕಳೆದ ಮೂರ್‍ನಾಲ್ಕು ತಿಂಗಳಿನಿಂದ ಕನ್ನಡ ಮತ್ತು ತೆಲುಗಿನಲ್ಲಿ ಭರ್ಜರಿಯಾಗಿ “ಐ ಲವ್‌ ಯು’ ಚಿತ್ರದ ಪ್ರಮೋಷನ್‌ ಕೆಲಸಗಳನ್ನು ನಡೆಸುತ್ತಿರುವ ಚಿತ್ರತಂಡ, ಇದೇ ಜೂನ್‌ 14ರಂದು “ಐ ಲವ್‌ ಯು’ ಚಿತ್ರವನ್ನು ಕನ್ನಡ ಮತ್ತು ತೆಲುಗು ಸೇರಿದಂತೆ ಎರಡೂ ಭಾಷೆಗಳಲ್ಲಿ ಏಕಕಾಲಕ್ಕೆ ಸುಮಾರು 1000ಕ್ಕೂ ಹೆಚ್ಚಿನ ಸ್ಕ್ರೀನ್‌ಗಳಲ್ಲಿ ಬಿಡುಗಡೆಗೊಳಿಸಲು ಸಿದ್ಧತೆ ಮಾಡಿ­ಕೊಂಡಿದೆ. ಇನ್ನು ಉಪೇಂದ್ರ ಈಗಾಗಲೇ ತೆಲುಗಿನ ಹಲವು ಚಿತ್ರಗಳಲ್ಲಿ ನಟಿಸಿದ್ದು, ಟಾಲಿವುಡ್‌ನ‌ಲ್ಲಿ ಕೂಡ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಹೀಗಾಗಿ ಕನ್ನಡದಂತೆ, ತೆಲುಗಿನಲ್ಲೂ ಕೂಡ “ಐ ಲವ್‌ ಯು’ ಚಿತ್ರಕ್ಕೆ ಬಿಗ್‌ ಓಪನಿಂಗ್‌ ಸಿಗಲಿದೆ ಎನ್ನುವ ವಿಶ್ವಾಸ ನಿರ್ದೇಶಕ ಆರ್‌. ಚಂದ್ರು ಅವರದ್ದು.

Advertisement

ನಿರ್ದೇಶಕ ಆರ್‌.ಚಂದ್ರು ಹೇಳುವಂತೆ, ಪ್ರೇಕ್ಷಕರು ಒಂದು ಸಿನಿಮಾದಲ್ಲಿ ಏನೇನು ಇರಬೇಕು ಎಂಬ ನಿರೀಕ್ಷೆ ಇಟ್ಟುಕೊಂಡು ಚಿತ್ರಮಂದಿರಕ್ಕೆ ಬರುತ್ತಾರೋ, ಆ ಎಲ್ಲಾ ನಿರೀಕ್ಷೆಗಳನ್ನ ಚಿತ್ರ ಈಡೇರಿಸಿದರೆ, ಆ ಚಿತ್ರ ಗೆದ್ದಂತೆ. “ಐ ಲವ್‌ ಯು’ ಚಿತ್ರದಲ್ಲಿ ಅಂಥ ಎಲ್ಲಾ ಅಂಶಗಳಿವೆ. ಒಂದೇ ಮಾತಿನಲ್ಲಿ ಹೇಳ್ಳೋದಾದ್ರೆ, “ಐ ಲವ್‌ ಯು’ ಮಾಸ್‌ ಎಲಿಮೆಂಟ್‌, ಮಸ್ತ್ ಎಂಟರ್‌ಟೈನ್ಮೆಂಟ್‌ ಚಿತ್ರ ಅನ್ನೋದು ಆರ್‌. ಚಂದ್ರು ಅವರ ಮಾತು. ಇದು ರಿಯಲ್‌ ಸ್ಟಾರ್‌ ಉಪೇಂದ್ರ ಅವರ “ಎ’, “ಉಪೇಂದ್ರ’ ಹಾಗೂ “ಪ್ರೀತ್ಸೆ’ ಶೈಲಿಯ ಲವ್‌ಸ್ಟೋರಿಯ ಸಿನಿಮಾ. ಆ ಸಿನಿಮಾಗಳಲ್ಲಿರುವಂತೆ ಉಪೇಂದ್ರ ಅವರ ಪಾತ್ರ ಕೂಡ ವಿಭಿನ್ನವಾಗಿರಲಿದೆ. ಹೊಸ ರೂಪದಲ್ಲಿ ಉಪ್ಪಿಯ ದರ್ಶನವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next