Advertisement

ಚಂದ್ರುಯಾನ: ಕಬ್ಜ ಮಾಡಲು ಹೊರಟ ಐ ಲವ್ ಯು ಜೋಡಿ

09:40 AM Nov 23, 2019 | mahesh |

“ನಾನು ಮಾತನಾಡೋದಕ್ಕಿಂತ ಸಿನಿಮಾ ಮಾತನಾಡಿದೆರೆ ಚೆಂದ. ಎಲ್ಲವನ್ನು ಈಗಲೇ ಹೇಳುವ ಬದಲು ಅಂತಿಮವಾದ ಮೇಲೆ ಮಾತನಾಡುತ್ತೇನೆ …’

Advertisement

-ಹೀಗೆ ನಿರ್ದೇಶಕ ಕಂ ನಿರ್ಮಾಪಕ ಆರ್‌.ಚಂದ್ರು ಹೇಳಿ ವಿಧೇಯ ವಿದ್ಯಾರ್ಥಿಯಂತೆ ಕುಳಿತರು. ಅವರ ಹಿಂದೆ ರಗಡ್‌ ಲುಕ್‌ನಲ್ಲಿ ಉಪೇಂದ್ರ ಇರುವ ಪೋಸ್ಟರ್‌ ಇತ್ತು. ಜೊತೆಗೆ “ಎ ನ್ಯೂ ವಿಶನ್‌ ಆಫ್ ಅಂಡರ್‌ವರ್ಲ್ಡ್’ ಎಂಬ ಟ್ಯಾಗ್‌ಲೈನ್‌ ಕೂಡಾ ಇತ್ತು. ಈ ಟ್ಯಾಗ್‌ ಲೈನ್‌ಗೆ ಕಾರಣವಾಗಿರೋದು “ಕಬ್ಜ’ ಚಿತ್ರ. ಇದು ಆರ್‌.ಚಂದ್ರು ನಿರ್ಮಾಣ, ನಿರ್ದೇಶನದ ಹೊಸ ಚಿತ್ರ. “ಬ್ರಹ್ಮ’, “ಐ ಲವ್‌ ಯು’ ಚಿತ್ರದ ನಂತರ ಚಂದ್ರು ಹಾಗೂ ಉಪೇಂದ್ರ ಕಾಂಬಿನೇಶನ್‌ನಲ್ಲಿ “ಕಬ್ಜ’ ಚಿತ್ರ ಆರಂಭವಾಗಿದ್ದು, ಇತ್ತೀಚೆಗೆ ಕಂಠೀರವ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ಮುಹೂರ್ತ ನಡೆಯಿತು. ನಟ ಶಿವರಾಜಕುಮಾರ್‌ ಚಿತ್ರಕ್ಕೆ ಕ್ಲಾಪ್‌ ಮಾಡಿ ಶುಭ ಹಾರೈಸಿದರು.

ತುಂಬಾ ದಿನಗಳ ನಂತರ ಕಂಠೀರವ ಸ್ಟುಡಿಯೋ ಅದೂಟಛಿರಿ ಮುಹೂರ್ತವೊಂದಕ್ಕೆ ಸಾಕ್ಷಿಯಾಯಿತು.
ಸಿನಿಮಾವನ್ನು ತುಂಬಾನೇ ಪ್ರೀತಿಸುವ ಆರ್‌. ಚಂದ್ರು ಸಾಮಾನ್ಯವಾಗಿ ಸಿನಿಮಾದ ಆರಂಭದಲ್ಲೇ ಆ ಚಿತ್ರದ ಬಗ್ಗೆ ಹೆಚ್ಚು ಹೆಚ್ಚು ವಿವರ ಕೊಡುತ್ತಾ ಬಂದವರು. ಆದರೆ, ಈ ಬಾರಿ ಚಂದ್ರು ಬದಲಾಗಿದ್ದಾರೆ. ಮಾತಿಗಿಂತ ಕೃತಿ ಮೇಲು ಎಂಬ ಸಿದಾಟಛಿಂತವನ್ನು ನಂಬಿದ್ದಾರೆ. ಹಾಗಾಗಿಯೇ, ತಾನು
ಮಾತನಾಡುವುಕ್ಕಿಂತ ಸಿನಿಮಾ ಮಾತನಾಡಬೇಕು ಎನ್ನುವ ನಿಲುವಿಗೆ ಬಂದಿದ್ದಾರೆ. ಈ ನಿಲುವಿನ ನಡುವೆಯೂ ಪತ್ರಕರ್ತರ ಪ್ರಶ್ನೆಗಳಿಗೆ ಚಂದ್ರು ಸ್ವೀಟ್‌ ಅಂಡ್‌ ಶಾರ್ಟ್‌ ಆಗಿಯೇ ಉತ್ತರಿಸಿದರು. ಚಂದ್ರು ನಿರ್ದೇಶನದ “ಕಬ್ಜ’ ಚಿತ್ರ ಪ್ಯಾನ್‌ ಇಂಡಿಯಾ ಚಿತ್ರವಾಗಿ ಮೂಡಿಬರುತ್ತಿದೆ. ಒಟ್ಟು ಏಳು ಭಾಷೆಗಳಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ. ಕನ್ನಡ, ತಮಿಳು ಹಾಗೂ ತೆಲುಗಿನಲ್ಲಿ ನೇರವಾಗಿ ಚಿತ್ರೀಕರಣವಾದರೆ
ಇತರ ಭಾಷೆಗಳಿಗೆ ಡಬ್‌ ಮಾಡಿ ಬಿಡುಗಡೆ ಮಾಡುವ ಯೋಚನೆ ಚಿತ್ರತಂಡಕ್ಕಿದೆ. ಅಂದಹಾಗೆ, ಈ ಚಿತ್ರದಲ್ಲಿ ಉಪೇಂದ್ರ ಡಾನ್‌ ಆಗಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದ ಕಥೆ 80ರ ದಶಕದಲ್ಲಿ ಸಾಗಲಿದ್ದು, ಇಡೀ ಸಿನಿಮಾ ರೆಟ್ರೋ ಶೈಲಿಯಲ್ಲಿ ಮೂಡಿಬರಲಿದೆ.

“ಇದೊಂದು ಅಂಡರ್‌ ವರ್ಲ್ಡ್ ಸಿನಿಮಾ. ಉಪೇಂದ್ರ ಅವರು ಈಗಾಗಲೇ “ಓಂ’ ಚಿತ್ರ ಮಾಡಿದ್ದಾರೆ. ಈಗಾಗಲೇ ಸಾಕಷ್ಟು ಭೂಗತ ಲೋಕದ ಸಿನಿಮಾಗಳು ಬಂದಿರಬಹುದು. ಆದರೆ, ಈ ಚಿತ್ರದಲ್ಲಿ ನಮ್ಮದೇ ಶೈಲಿಯ ಹೊಸ ನಿರೂಪಣೆ ಹಾಗೂ ಕಥೆ ಇದೆ. ಅದನ್ನು ನಾನು ಈಗಲೇ ಹೇಳುವುದಕ್ಕಿಂತ ಸಿನಿಮಾ ನೋಡೋದು ಒಳ್ಳೆಯದು’ ಎಂದಷ್ಟೇ ಹೇಳಿದರು. ಚಿತ್ರದಲ್ಲಿ ಏಳು ಜನ ವಿಲನ್‌ಗಳಾಗಿ ನಟಿಸಲಿದ್ದು,
ಬೇರೆ ಬೇರೆ ಭಾಷೆಗಳಲ್ಲಿ ದೊಡ್ಡ ಹೆಸರು ಮಾಡಿರುವ ವಿಲನ್‌ಗಳನ್ನೇ ಕರೆಸಲು ಚಂದ್ರು ಪ್ಲ್ರಾನ್‌ ಮಾಡಿಕೊಂಡಿದ್ದಾರೆ. ನಾಯಕಿಯಾಗಿ ಕಾಜಲ್‌ ಅಗರ್‌ವಾಲ್‌ ಅವರನ್ನು ಕರೆಸಲು ಪ್ರಯತ್ನಿಸುತ್ತಿದ್ದು, ಈಗಾಗಲೇ ಮಾತುಕತೆ ನಡೆದಿದೆ. ಚಿತ್ರ ತಮಿಳು, ತೆಲುಗಿನಲ್ಲೂ ತಯಾರಾಗುತ್ತಿರುವುದರಿಂದ ಆಯಾಯ ಭಾಷೆಗೆ ಹೋಗಿ ಚಿತ್ರದ ಮುಹೂರ್ತ ಮಾಡುವ ಉದ್ದೇಶ ಕೂಡಾ ಚಂದ್ರು ಅವರಿಗಿದೆ.

ನಾಯಕ ಉಪೇಂದ್ರ ಕೂಡಾ “ಕಬ್ಜ’ ಮೇಲೆ ನಿರೀಕ್ಷೆ ಇಟ್ಟಿದ್ದಾರೆ. ಅದಕ್ಕೆ ಕಾರಣ ಕಥೆ ಹಾಗೂ ಚಂದ್ರು ಅವರ ಕಲ್ಪನೆ. “ಚಂದ್ರು ಒಂಥರಾ ಹನುಮಂತ ಇದ್ದಂತೆ. ಏನೂ ಗೊತ್ತಿಲ್ಲ ಎನ್ನುತ್ತಲೇ ಎಲ್ಲಾ ಮಾಡುತ್ತಾರೆ. ಒಳ್ಳೆಯ ಸಿನಿಮಾ ಮಾಡುತ್ತಾರೆ, ಅಷ್ಟೇ ಚೆನ್ನಾಗಿ ಬಿಝಿನೆಸ್‌ ಮಾಡುತ್ತಾರೆ. ಈ ಚಿತ್ರದ ಅವರ ಕಲ್ಪನೆ ಅದ್ಭುತವಾಗಿದೆ. ಇತ್ತೀಚೆಗೆ ಚಿತ್ರದ ಫೋಟೋಶೂಟ್‌ ನೋಡಿಯೇ ನನಗೆ ಖುಷಿಯಾಯಿತು. ಅಷ್ಟೊಂದು ನೀಟಾಗಿ ಎಲ್ಲವನ್ನು ಪ್ಲ್ರಾನ್‌ ಮಾಡಿಕೊಂಡಿದ್ದಾರೆ. ಈಗ ಅವರ ಸಿನಿಮಾ ಬಗ್ಗೆ ಏನೂ ಹೇಳದೇ ಸಿನಿಮಾವೇ ಮಾತನಾಡಬೇಕು ಎಂಬ ನಿಲುವಿಗೆ ಬಂದಿದ್ದಾರೆ. ಹಾಗಾಗಿ, ನನಗೂ ಸಿನಿಮಾ ಬಗ್ಗೆ ಹೆಚ್ಚು ಮಾತನಾಡಬೇಡಿ ಎಂದಿದ್ದಾರೆ.

Advertisement

ಒಂದಂತೂ ಹೇಳುತ್ತೇನೆ, ಒಂದೊಳ್ಳೆಯ ಸಿನಿಮಾ ಕೊಡಲು ನಾವು ಶ್ರಮಿಸುತ್ತೇವೆ’ ಎಂದರು ಉಪೇಂದ್ರ. ಚಿತ್ರಕ್ಕೆ ಎ.ಜೆ.ಶೆಟ್ಟಿ ಛಾಯಾಗ್ರಹಣವಿದೆ. ಈ ಹಿಂದೆ “ಕಿಸ್‌’ ಸಿನಿಮಾ ಮಾಡಿದ ಎ.ಜೆಗೆ ಇದು ಎರಡನೇ ಸಿನಿಮಾ. ಈ ಹಿಂದೆ “ಐ ಲವ್‌ ಯು’ ಚಿತ್ರದಲ್ಲಿ ಲವ್‌ ಸ್ಟೋರಿ ಹೇಳಿ ಯಶಸ್ಸು ಕಂಡಿದ್ದ ಉಪೇಂದ್ರ- ಚಂದ್ರು ಜೋಡಿ ಈಗ ಆ್ಯಕ್ಷನ್‌ ಸಿನಿಮಾ ಮೂಲಕ ಮತ್ತೂಮ್ಮೆ ಪ್ರೇಕ್ಷಕರ ಮುಂದೆ ಬರಲು ಅಣಿಯಾಗಿದೆ. ಈ ಬಾರಿ ಯಾವ ರೀತಿ ಮೋಡಿ ಮಾಡುತ್ತೋ ಕಾದು ನೋಡಬೇಕು.

– ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next