Advertisement

ವೈಜಾಗ್‌ ಕಡಲ ತಡಿಯಲ್ಲಿ “ಐಲವ್‌ಯು’ಹವಾ

12:28 PM Jun 11, 2019 | Lakshmi GovindaRaj |

ಅದೊಂದು ಸಾಗರ. ಆ ಕಡಲತಡಿಯಲ್ಲಿ ಅಲೆಗಳದ್ದೇ ಸದ್ದು. ಅಷ್ಟೇ ಜೋರಾಗಿ ಬೀಸುವ ತಣ್ಣನೆ ಗಾಳಿ.ಅಷ್ಟೇ ಸೊಗಸಾಗಿ ಕಣ್ಮನ ಸೆಳೆಯುತ್ತಿದ್ದ ವರ್ಣರಂಜಿತ ವೇದಿಕೆ. ಆ ರಂಗುರಂಗಿನ ವೇದಿಕೆ ಮೇಲೆ ಹಾಡು, ಕುಣಿತ ಮಾತು, ತಮಾಷೆ, ನಗು ಇತ್ಯಾದಿ…

Advertisement

ಇದೆಲ್ಲಾ ಕಂಡುಬಂದದ್ದು ವಿಶಾಖ ಪಟ್ಟಣದಲ್ಲಿ . ಕಾರಣ “ಐ ಲವ್‌ ಯು’ ಚಿತ್ರದ ತೆಲುಗು ಟ್ರೇಲರ್‌ ಬಿಡುಗಡೆ. ನಿರ್ದೇಶಕ ಆರ್‌.ಚಂದ್ರು “ಐ ಲವ್‌ ಯು’ ಚಿತ್ರವನ್ನು ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಮಾಡಿದ್ದಾರೆ. ಕನ್ನಡದಲ್ಲಿ ಈಗಾಗಲೇ ಸಿಕ್ಕಾಪಟ್ಟೆ ಕುತೂಹಲ ಹುಟ್ಟಿಸಿದ್ದ “ಐ ಲವ್‌ ಯು’ ಟ್ರೇಲರ್‌, ಈಗ ತೆಲುಗು ಅಭಿಮಾನಿಗಳನ್ನೂ ಹುಚ್ಚೆದ್ದು ಕುಣಿಸಿದೆ.

ತೆಲುಗು ಚಿತ್ರರಂಗದಲ್ಲಿ ಉಪೇಂದ್ರ ಅವರಿಗೆ ತಮ್ಮದೇ ಆದ ಅಭಿಮಾನಿ ಬಳಗವಿದೆ. ತಮ್ಮ ಪ್ರೀತಿಯ ಹೀರೋ ಉಪೇಂದ್ರ ನಟನೆಯ “ಐ ಲವ್‌ ಯು’ ಚಿತ್ರದ ಹಾಡು ಮತ್ತು ಟ್ರೇಲರ್‌ ನೋಡಿದ ಕೂಡಲೇ ಆ ತೆಲುಗು ಅಭಿಮಾನಿಗಳ ಖುಷಿಗೆ ಪಾರವೇ ಇರಲಿಲ್ಲ. ಶಿಳ್ಳೆ, ಚಪ್ಪಾಳೆ, ಕೇಕೆಗಳ ನಡುವೆ ಅದ್ಧೂರಿಯಾಗಿ ವರ್ಣರಂಜಿತವಾಗಿ “ಐ ಲವ್‌ ಯು’ ಚಿತ್ರದ ಟ್ರೇಲರ್‌ ಹೊರಬಂತು.

“ಐ ಲವ್‌ ಯು’ ಚಿತ್ರ ಒಂದು ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಇದೇ ಜೂ.14 ರಂದು ತೆರೆಗೆ ಬರುತ್ತಿರುವ ಹಿನ್ನೆಲೆಯಲ್ಲಿ ನಿರ್ದೇಶಕ ಕಮ್‌ ನಿರ್ಮಾಪಕ ಆರ್‌.ಚಂದ್ರು, ವಿಶಾಖಪಟ್ಟದಲ್ಲಿ ತೆಲುಗು ಟ್ರೇಲರ್‌ ಬಿಡುಗಡೆ ಮಾಡು ಜೋರು ಸದ್ದು ಮಾಡಿದರು.

ಅಂದು ವೇದಿಕೆಯಲ್ಲಿ ಚಿತ್ರದ ಬಗ್ಗೆ ಹೇಳಿಕೊಂಡ ನಿರ್ದೇಶಕ ಆರ್‌.ಚಂದ್ರು, ಉಪೇಂದ್ರ ನಟರಷ್ಟೇ ಅಲ್ಲ, ಒಳ್ಳೆಯ ನಿರ್ದೇಶಕರೂ ಹೌದು. ಇದೊಂದು ಸಂದೇಶ ಇರುವ ಚಿತ್ರ. ಇಂದು ನಾನೊಬ್ಬ ಯಶಸ್ವಿ ನಿರ್ದೇಶಕನಾಗಲು ಕನ್ನಡ ಜನ ಮತ್ತು ಕನ್ನಡ ಮಾಧ್ಯಮ ಕಾರಣ. ಉಪೇಂದ್ರ ಅವರೊಂದಿಗೆ ಇದು ಎರಡನೇ ಚಿತ್ರ. ಮುಂದಿನ ದಿನಗಳಲ್ಲೂ ಉಪೇಂದ್ರ ಅವರೊಂದಿಗೆ ಚಿತ್ರ ಮಾಡುತ್ತೇನೆ’ ಎಂಬ ಭರವಸೆ ಕೊಟ್ಟರು ಆರ್‌.ಚಂದ್ರು.

Advertisement

ಉಪೇಂದ್ರ ಕೂಡ “ನಿಮ್ಮೆಲ್ಲರ ಪ್ರೀತಿಗೆ ನಾನು ಚಿರಋಣಿ. ಈ ಪ್ರೀತಿ, ಅಭಿಮಾನ ಹೀಗೆ ಇರಲಿ. ಗಂಡ ಮತ್ತು ಹೆಂಡತಿ ಕೂಡ ಈ ಚಿತ್ರ ನೋಡಬೇಕು. ಇಲ್ಲಿರುವ ಪ್ರತಿ ದೃಶ್ಯ, ಡೈಲಾಗ್‌, ಹಾಡು ಎಲ್ಲರಿಗೂ ಇಷ್ಟವಾಗಲಿವೆ ಎಂಬುದು ಉಪೇಂದ್ರ ಮಾತು.

ಮೊದಲ ಸಲ ತೆಲುಗು ಸಿನಿಮಾ ಹಾಗು ಉಪೇಂದ್ರ ಜೊತೆ ನಟಿಸಿದ್ದು ನನ್ನ ಅದೃಷ್ಟ ಎನ್ನುತ್ತಲೇ ಮಾತು ಮುಗಿಸಿದರು ಸೋನುಗೌಡ. ಸಂಗೀತ ನಿರ್ದೇಶಕ ಡಾ.ಕಿರಣ್‌ ತಮ್ಮ ಮೊದಲ ಅನುಭವ ಹಂಚಿಕೊಳ್ಳುವ ಹೊತ್ತಿಗೆ ಕಲರ್‌ಫ‌ುಲ್‌ ಕಾರ್ಯಕ್ರಮಕ್ಕೆ ತೆರೆಬಿತ್ತು.

ಕನ್ನಡ-ತೆಲುಗಿನಲ್ಲಿ ಉಪ್ಪಿ ನಿರ್ದೇಶನ: ವಿಶಾಖಪಟ್ಟಣದಲ್ಲಿ ನಡೆದ “ಐ ಲವ್‌ ಯು’ ಟ್ರೇಲರ್‌ ಬಿಡುಗಡೆ ವೇಳೆ ಉಪೇಂದ್ರ ಅವರು ಮುಂದಿನ ದಿನಗಳಲ್ಲಿ ನಾನು ಪುನಃ ನಿರ್ದೇಶನದತ್ತ ಗಮನಹರಿಸುತ್ತೇನೆ. ಕನ್ನಡ ಮತ್ತು ತೆಲುಗು ಭಾಷೆಯಲ್ಲೇ ನಾನು ನಿರ್ದೇಶನ ಮಾಡ್ತೀನಿ ಎಂದು ಪ್ರಕಟಿಸಿದರು. ಕನ್ನಡ ಮತ್ತು ತೆಲುಗು ಭಾಷೆ ಅಣ್ಣ-ತಮ್ಮಂದಿರು ಇದ್ದಂತೆ.

“ಐ ಲವ್‌ ಯು’ ಚಿತ್ರಕ್ಕೆ ಬೆಂಬಲ ಇರಲಿ’ ಅನ್ನುತ್ತಿದ್ದಂತೆಯೇ, ಅತ್ತ ತೆಲುಗು ಅಭಿಮಾನಿಗಳ ಮೊಗದಲ್ಲಿ ಮಂದಹಾಸ ಹೆಚ್ಚಾಗಿ, ಜೋರು ಚಪ್ಪಾಳೆ ತಟ್ಟುತ್ತಲೇ, ಉಪೇಂದ್ರ ಹೊರಗೊಂದು, ಒಳಗೊಂದು ಮಾತಾಡಲ್ಲ, ಒಳಗಡೆ ಏನಿದೆಯೋ ಅದನ್ನೇ ಮಾತಾಡುವ ರಿಯಲ್‌ಸ್ಟಾರ್‌ ಎಂದು ಬಣ್ಣಿಸುತ್ತಿದ್ದದ್ದು ಸಹಜವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next