Advertisement

ಇಲ್ಲೇ ಎಲ್ಲೋ ಹೋಗಿದ್ದಾನೆ ಎನಿಸುತ್ತಿದೆ.. ನನ್ನ ಮಗನನ್ನೇ ಕಳೆದುಕೊಂಡೆ..: ಶಿವಣ್ಣನ ಕಣ್ಣೀರು

10:05 AM Oct 31, 2021 | Team Udayavani |

ಬೆಂಗಳೂರು: ಪುನೀತ್ ರಾಜ್ ಕುಮಾರ್ ಅವರ ಪಾರ್ಥೀವ ಶರೀರದ ಅಂತಿಮ ಯಾತ್ರೆ ನಡೆದು, ಇಂದು ಬೆಳಗ್ಗೆ ಕಂಠೀರವ ಸ್ಟುಡಿಯೋದಲ್ಲಿ ಅಂತ್ಯ ಸಂಸ್ಕಾರ ನಡೆಯಿತು. ತಂದೆ ತಾಯಿ ಸಮಾಧಿಯ ಸಮೀಪವೇ ಅಪ್ಪು ಮಣ್ಣಲ್ಲಿ ಮಣ್ಣಾದರು. ದೇವರ ಪಾದ ಸೇರಿದ ಬೆಟ್ಟದ ಹೂವು ಅಪ್ಪುವನ್ನು ಬೀಳ್ಕೊಡಲು ಸಾವಿರಾರು ಜನರು ಇಂದೂ ಸೇರಿದ್ದರು.

Advertisement

ಕಂಠೀರವ ಸ್ಟುಡಿಯೋ ಒಳಗಡೆ ರಾಜ್ ಕುಟುಂಬದ ಆತ್ಮೀಯರು, ರಾಜಕೀಯ ಗಣ್ಯರು, ಚಿತ್ರರಂಗದ ಗಣ್ಯರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಚಿತ್ರರಂಗದಿಂದ ಸುದೀಪ್, ಗಣೇಶ್, ಯಶ್, ರಚಿತಾ ರಾಮ್, ರಶ್ಮಿಕಾ ಮಂಧನಾ, ಶ್ರುತಿ, ಸಾಧು ಕೋಕಿಲಾ ಸೇರಿದಂತೆ ಹಲವರು ಭಾಗವಹಿಸಿದ್ದರು.

ಇದನ್ನೂ ಓದಿ:ಅಪ್ಪು ಅಂತಿಮಯಾತ್ರೆ ಶಾಂತಿಯುತ : ಗೃಹ ಸಚಿವರ ಧನ್ಯವಾದ

ಅಂತ್ಯಕ್ರಿಯೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪುನೀತ್ ಹಿರಿಯ ಸಹೋದರ, ನಟ ಶಿವರಾಜ್ ಕುಮಾರ್, “ಅಪ್ಪು ಇಲ್ಲವೆಂದು ಹೇಳಲು ಕಷ್ಟವಾಗುತ್ತಿದೆ. ಅವನು ಇಲ್ಲೇ ಎಲ್ಲೋ ಹೋಗಿದ್ದಾನೆ, ಮತ್ತೆ ಬರುತ್ತಾನೆ ಎಂದೆನಿಸುತ್ತಿದೆ. ದೇವರು ಅನನನ್ನು ಅವಸರವಾಗಿ ಕರೆಸಿಕೊಂಡ..” ಎಂದರು.

Advertisement

“ ನಾನು ಅವನಿಗಿಂತ 13 ವರ್ಷ ದೊಡ್ಡವನು. ಮಗುವಿನಿಂದ ಅವನನ್ನು ನೋಡಿಕೊಂಡಿದ್ದೇನೆ. ನನ್ನ ಮಗುವನ್ನು ಕಳೆದುಕೊಂಡ ಹಾಗೆ ಆಗಿದೆ ನನಗೆ. ನಾವು ಅವರ ಕುಟುಂಬದ ಜೊತೆಗಿದ್ದೇವೆ. ಅಪ್ಪು ನಮ್ಮ ಜೊತೆಗಿದ್ದಾನೆ, ಚಿತ್ರರಂಗದಲ್ಲಿದ್ದಾನೆ, ನಮ್ಮ ಹೃದಯದಲ್ಲಿದ್ದಾನೆ” ಎಂದು ಶಿವಣ್ಣ ಹೇಳಿದರು.

ಸರಿಯಾದ ವ್ಯವಸ್ಥೆ ಮಾಡಿದ ಸರ್ಕಾರ, ಪೊಲೀಸರಿಗೆ ಧನ್ಯವಾದಗಳು. ಬೊಮ್ಮಾಯಿ ಸರ್ ಗೆ ಧನ್ಯವಾದಗಳು ಎಂದರು.

ಹಾಲು ತುಪ್ಪ ಆಗುವವರೆಗೂ ಯಾರಿಗೂ ಬಿಡಲಾಗುವುದಿಲ್ಲ. ನಂತರ ಅಭಿಮಾನಿಗಳಿಗೆ ಅವಕಾಶ ನೀಡಲಾಗುತ್ತದೆ. ಜನರ ಪ್ರೀತಿ ವಿಶ್ವಾಸಕ್ಕೆ ಏನು ಬೆಲೆ ಕಟ್ಟಲಾಗದು. ಅಭಿಮಾನಿಗಳು ಆತುರದ ನಿರ್ಧಾರ ಮಾಡಬಾರದು. ನೀವು ನಿಮ್ಮ ಕುಟುಂಬಕ್ಕೆ ಬೇಕಾಗಿ ಇರಿ, ನೋವು ನುಂಗಿ ಬದುಕಬೇಕು. ನಿಮ್ಮ ಕುಟುಂಬದ ಜೊತೆಗಿರಿ ಎಂದು ಶಿವರಾಜ್ ಕುಮಾರ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next