ಇಸ್ಲಮಬಾದ್: ಪಾಕಿಸ್ಥಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಉಗ್ರರ ಪರವಾದ ತಮ್ಮ ನಿಲುವನ್ನು ಮತ್ತೆ ಬಹಿರಂಗವಾಗಿ ಹೇಳಿಕೊಂಡಿದ್ದು,’ಉಗ್ರ ಹಫೀಜ್ ಸಯೀದ್, ಜಮಾತ್ ಉದ್ ದಾವಾ ಮತ್ತು ಲಷ್ಕರ್ ಇ ತೋಯ್ಬಾ ಉಗ್ರ ಸಂಘಟನೆಗಳನ್ನು ನಾನು ಬೆಂಬಲಿಸುತ್ತೇನೆ’ ಎಂದು ಉದ್ಧಟತನದ ಹೇಳಿಕೆ ನೀಡಿದ್ದಾರೆ
ಪಾಕ್‌ನ ಎಆರ್‌ಐ ಸುದ್ದಿಸಂಸ್ಥೆಯಲ್ಲಿ ಮಾತನಾಡುವ ವೇಳೆ ಮುಷರಫ್ ಈ ಹೇಳಿಕೆಗಳನ್ನು ನೀಡಿದ್ದು,’ಕಾಶ್ಮೀರದಲ್ಲಿ ಜಿಹಾದ್ ಮಾಡುವ ಜೆಯುಡಿ , ಎಲ್‌ಇಟಿಯನ್ನು ನಾನ್ನು ಇಷ್ಟಪಡುತ್ತೇನೆ, ಅವರಿಗೆ ನನ್ನ ಸಂಪೂರ್ಣ ಬೆಂಬಲ ಇದೆ’ ಎಂದಿದ್ದಾರೆ.
‘ಹಲವು ಬಾರಿ ನಾನು ಜೆಯುಡಿ ಸಂಸ್ಥಾಪಕ ಹಫೀಜ್ ಸಯೀದ್‌ನನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇನೆ’ ಎಂದೂ ಹೇಳಿಕೊಂಡಿದ್ದಾರೆ.
168 ಜನರ ಸಾವಿಗೆ ಕಾರಣವಾಗಿದ್ದ 26/11 ರ ಮುಂಬಯಿ ದಾಳಿಯ ಲ್ಲಿ ಹಫೀಜ್ ಸಯೀದ್ ಪಾತ್ರವನ್ನು ಅಲ್ಲಗಳೆದ 73 ರ ಹರೆಯದ ಮುಷ್‌ರಫ್ ‘ಹಫೀಜ್‌ನನ್ನುಉಗ್ರ ಎಂದು ಕರೆಯುವುದು ತಪ್ಪು’ ಎಂದಿದ್ದಾರೆ.
‘ಹಫೀಜ್ ಸಯೀದ್ ವಿಷಯ ಭಾರತದಲ್ಲಿ ಮಾತ್ರ ಒಂದು ಸಮಸ್ಯೆ ಅಮೆರಿಕದಲ್ಲಿ ಅದು ಸಮಸ್ಯೆಯೇ ಅಲ್ಲ’ ಎಂದರು.