Advertisement

Mollywood: ದುಲ್ಕರ್‌ ಸಲ್ಮಾನ್‌ ಗೆ ಅನಾರೋಗ್ಯ?; ವಿಡಿಯೋ ಪೋಸ್ಟ್‌ ಮಾಡಿ ಡಿಲೀಟ್‌ ಮಾಡಿದ ನಟ

04:14 PM Jul 03, 2023 | Team Udayavani |

ಕೊಚ್ಚಿ: ಮಾಲಿವುಡ್‌ ಸ್ಟಾರ್‌ ನಟ ದುಲ್ಕರ್ ಸಲ್ಮಾನ್ ಅವರ ʼ ಕಿಂಗ್ ಆಫ್ ಕೋಥಾʼ ಸಿನಿಮಾದ ಟೀಸರ್ ಇತ್ತೀಚೆಗೆ ರಿಲೀಸ್‌ ಆಗಿ ಸದ್ದು ಮಾಡುತ್ತಿದೆ. ಈ ನಡುವೆ ನಟ ದುಲ್ಕರ್ ಸಲ್ಮಾನ್ ಅವರು ಪೋಸ್ಟ್‌ ಮಾಡಿ ಡಿಲೀಟ್‌ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ವಿಷಯವಾಗಿದೆ.

Advertisement

ಭಾನುವಾರ ನಟ ದುಲ್ಕರ್ ಸಲ್ಮಾನ್ ಗೊಂದಲ ಹಾಗೂ ಚಿಂತೆಗೀಡು ಮಾಡುವ ವಿಡಿಯೋ ಪೋಸ್ಟ್‌ ವೊಂದನ್ನು ಹಾಕಿದ್ದರು. ಬಳಿಕ ಆ ಪೋಸ್ಟನ್ನು ಕೆಲವೇ ನಿಮಿಷದಲ್ಲಿ ಡಿಲೀಟ್‌ ಮಾಡಿದ್ದಾರೆ.

“ನಾನು ಕಳೆದ ಕೆಲ ಸಮಯದಿಂದ ಸರಿಯಾಗಿ ಮಲಗಿಲ್ಲ. ಮೊದಲ ಬಾರಿ ನನಗೆ ಏನೋ ಆಗುತ್ತಿರುವ ಅನುಭವವಾಗಿದೆ. ವಿಷಯಗಳು ಒಂದೇ ಆಗಿಲ್ಲ. ಇದು ನನ್ನ ಮನಸ್ಸಿನಿಂದ ಹೊರಬರಲು ಸಾಧ್ಯವಾಗದ ಹಂತವನ್ನು ತಲುಪಿದೆ. ಇದರ ಬಗ್ಗೆ ನಾನು ಹೆಚ್ಚು ಹೇಳಲು ಬಯಸುತ್ತೇನೆ. ಆದರೆ ಹೇಳಬೇಕೋ ಬೇಡ್ವೋ ಎನ್ನುವುದರ ಬಗ್ಗೆ ನನಗೆ ಖಚಿತತೆಯಿಲ್ಲ” ಎಂದು ಹೇಳುವ ವಿಡಿಯೋವನ್ನು ಇನ್ಸ್ಟಾಗ್ರಾಮ್‌ ನಲ್ಲಿ ಹಾಕಿಕೊಂಡಿದ್ದರು.

ಆದರೆ ಅದೇನೋ ಗೊತ್ತಿಲ್ಲ. ಫ್ಯಾನ್ಸ್‌ ಗಳು ತನ್ನ ನೆಚ್ಚಿನ ನಟನಿಗೆ ಏನಾಯಿತು ಎನ್ನುವುದರ ಬಗ್ಗೆ ಯೋಚನೆ ಮಾಡುತ್ತಿರುವಾಗಲೇ ಕೆಲವೇ ನಿಮಿಷಗಳಲ್ಲಿ ದುಲ್ಕರ್‌ ಈ ಪೋಸ್ಟನ್ನು ಡಿಲೀಟ್‌ ಮಾಡಿದ್ದಾರೆ.

ಪೋಸ್ಟ್‌ ಡಿಲೀಟ್‌ ಆದ ಬಳಿಕ ಅಭಿಮಾನಿಗಳಿಗೆ ಚಿಂತೆ ಶುರುವಾಗಿದೆ. ದುಲ್ಕರ್‌ ಅವರಿಗೆ ಏನಾಗಿದೆ. ಯಾವ ಸಮಸ್ಯೆಯಿದೆ ಎನ್ನುವುದರ ಬಗ್ಗೆ ಚಿಂತೆ ಮಾಡಿ ಟ್ವಿಟರ್‌ ನಲ್ಲಿ ಟ್ವೀಟ್‌ ಮಾಡುತ್ತಿದ್ದಾರೆ. ಆದರೆ ಇದುವರೆಗೆ ಈ ಬಗ್ಗೆ ನಟನಿಂದ ಸ್ಪಷ್ಟನೆ ಸಿಕ್ಕಿಲ್ಲ. ‌

Advertisement

ಅಭಿಲಾಷ್‌ ಜೋಶಿ ನಿರ್ದೇಶನದ ʼಕಿಂಗ್ ಆಫ್ ಕೋಥಾʼ ಸಿನಿಮಾ ಆಗಸ್ಟ್‌ ನಲ್ಲಿ ತೆರೆಗೆ ಬರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next