Advertisement

ಈಕೆಯ ನೀಳ ಕಾಲುಗಳಿಗೆ ಗಿನ್ನೆಸ್‌ ಗರಿ

05:11 PM Oct 09, 2020 | Nagendra Trasi |

ವಾಷಿಂಗ್ಟನ್‌: ವಿಶ್ವದ ಅತಿ ಉದ್ದದ ಕಾಲುಗಳಿರುವ ಹೆಗ್ಗಳಿಕೆಯೊಂದಿಗೆ ಅಮೆರಿಕದ ಟೆಕ್ಸಾಸ್‌ನಲ್ಲಿರುವ ಮ್ಯಾಸಿ ಕುರಿನ್‌, ಗಿನ್ನೆಸ್‌ ದಾಖಲೆಗೆ ಸೇರ್ಪಡೆಗೊಂಡಿದ್ದಾರೆ. ಗಿನ್ನೆಸ್‌ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನ ಪ್ರಕಾರ, ಆಕೆಯ ಎಡಗಾಲು 4.43 ಅಡಿಯಿದ್ದು, ಬಲಗಾಲು 4.40 ಅಡಿಯಿದೆ ಎಂದು ವಿವರಿಸಲಾಗಿದೆ.

Advertisement

ಇಷ್ಟು ಉದ್ದದ ಕಾಲುಗಳಿಂದಾಗಿ ಮ್ಯಾಸಿಯವರ ಎತ್ತರ 6 ಅಡಿ 10 ಅಂಗುಲವಿದ್ದು, ಈಕೆಯ ವಂಶಸ್ಥರೆಲ್ಲರೂ ಉದ್ದನೆಯ ಕಾಲುಗಳುಳ್ಳವರಾಗಿದ್ದಾರೆ.ಆದರೆ, ಈಕೆಯಷ್ಟು ಉದ್ದದ ಕಾಲುಗಳು ಅವರ ಕುಟುಂಬಸ್ಥರಲ್ಲಿ, ಸಂಬಂಧಿಕರಲ್ಲಿ ಯಾರೂ ಹೊಂದಿಲ್ಲ.

ಅಂದಹಾಗೆ, ಅತಿ ಉದ್ದದ ಕಾಲುಗಳಿರುವ ಯುವತಿಯೆಂಬ ಹೆಗ್ಗಳಿಕೆ ಈ ಹಿಂದೆ ರಷ್ಯಾದ ರೂಪದರ್ಶಿಯಾದ ಎಕಟೆರಿನಾ ಲಿಸಿನಾ ಅವರ ಪಾಲಿಗಿತ್ತು. 2017ರಲ್ಲಿ ಅವರು ಗಿನ್ನೆಸ್‌ ದಾಖಲೆಗೆ ಭಾಜನರಾಗಿದ್ದರು.

ಆಸ್ಪತ್ರೆಯಿಂದ ಮಾತ್ರ ಡಿಸ್ಚಾರ್ಜ್‌
ಕೋವಿಡ್ ಸೋಂಕು ಪೀಡಿತರಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮಿಲಿಟರಿ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ. ಶೀಘ್ರವೇ ಚುನಾವಣೆ ಪ್ರಚಾರಕ್ಕೆ ಮರಳುವುದಾಗಿ ಬೆಂಬಲಿಗರಿಗೆ ಆಶ್ವಾಸನೆ ನೀಡಿದ್ದಾರೆ. ಇದರ ನಡುವೆಯೇ ವಿವಾದವೊಂದನ್ನೂ ಅವರು ಮೈಮೇಲೆ ಎಳೆದುಕೊಂಡಿದ್ದಾರೆ. ಶ್ವೇತಭವನ ಪ್ರವೇಶ ಮಾಡುತ್ತಿದ್ದಂತೆಯೇ ಅವರು ಮಾಸ್ಕ್ ತೆಗೆದಿದ್ದಾರೆ ಮತ್ತು ತಮಗೆ ಸೋಂಕು ಇದ್ದರೂ ಅಮೆರಿಕದ ನಾಗರಿಕರು ಯಾವುದೇ ಭೀತಿಗೆ ಒಳಗಾಗುವ ಅಗತ್ಯವಿಲ್ಲ ಎಂದಿದ್ದಾರೆ.

ಅಪರೂಪವೆಂಬಂತೆ ಶ್ವೇತಭವನದ ದಕ್ಷಿಣ ಭಾಗದ ಮೆಟ್ಟಿಲುಗಳನ್ನೇರಿದ ಟ್ರಂಪ್‌ ತಾವು ಸದೃಢರಾಗಿದ್ದಾರೆ  ಎಂಬ ಅಂಶವನ್ನು ತೋರ್ಪಡಿಸಲು ಮುಂದಾದರು. ನಂತರ ಬಾಲ್ಕನಿ ಪ್ರವೇಶಿಸುತ್ತಿದ್ದಂತೆಯೇ ಮಾಸ್ಕ್ ತೆಗೆದು ಬೆಂಬಲಿಗರತ್ತ ಕೈಬೀಸಿದರು.

Advertisement

ಕೆಲ ಮಾಧ್ಯಮಗಳ ವರದಿ ಪ್ರಕಾರ, ಸಂಪೂರ್ಣ ಗುಣವಾಗುವ ಮೊದಲೇ ಟ್ರಂಪ್‌ರನ್ನು ಡಿಸ್ಚಾರ್ಜ್‌ ಮಾಡಲಾಗಿದೆ. ಇದಕ್ಕೂ ಮುನ್ನ ಬೆಂಬಲಿಗರಿಗೆ
ಸಾಮೂಹಿಕವಾಗಿ ಇ-ಮೇಲ್‌, ಟ್ವೀಟ್‌ ಮಾಡಿದ್ದ ಟ್ರಂಪ್‌ “ಕೋವಿಡ್ ಗೆ ಹೆದರುವ ಅಗತ್ಯವಿಲ್ಲ. ಸೋಂಕು ನಿಮ್ಮ ಜೀವನದ ಮೇಲೆ ನಿಯಂತ್ರಣ ಸಾಧಿಸಲು ಬಿಡಬೇಡಿ. ಟ್ರಂಪ್‌ ಆಡಳಿತ ದಲ್ಲಿ ಇದೊಂದು ಅದ್ಭುತ ದೇಶ. ನಾವೆಲ್ಲರೂ ಸೇರಿಕೊಂಡು ಕೋವಿಡ್ ಸೋಲಿಸೋಣ’ ಎಂದು ಬರೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next