“ಬದುಕನ್ನು’ ರಾಯರು ಇಲ್ಲಿ ಬರೆದುಕೊಂಡಿದ್ದಾರೆ. ಪೋಸ್ಟ್- ಕೊರಿಯರ್ ಇಲ್ಲದ ಈ ಸಮಯದಲ್ಲಿ “ಪತ್ರಿಕೆಯ ಮೂಲಕವೇ’ ತಮ್ಮ “ಮನದ ಮಾತುಗಳನ್ನು’ ಮನದನ್ನೆಗೆ
ದಾಟಿಸಿದ್ದಾರೆ…
Advertisement
ಪ್ರೀತಿಯ ಸರೂ,ಹತ್ತು ವರ್ಷದಿಂದ ನಾವು ಮಾತಾಡುತ್ತಲೇ ಇದ್ದೇವೆ. ನೀನೀಗ ಅಮ್ಮನ ಮನೆಗೆ ಹೋಗಿರುವಾಗಲೂ, ದಿನಾ ಮಾತಾಡುತ್ತೇವೆ. ಅದೇ ಊಟ, ತಿಂಡಿ, ಮುನಿಸು- ದಿನದ ಮಾತಷ್ಟೇ, ಎದುರಾಬದುರಾ ಮನದ ಮಾತು, ಹೊರಬರುವುದೇ ಇಲ್ಲ ನೋಡು. ಅದಕ್ಕೇ ಈ ಪತ್ರ ಬರೆಯಲು ಕುಳಿತಿದ್ದೇನೆ, ಇದನ್ನು ನೀನೆಂದೂ ನೋಡಲಾರೆಯೆಂಬ ಭರವಸೆಯೇ ಇದಕ್ಕೆ ಸ್ಫೂರ್ತಿ. ಅಕಸ್ಮಾತ್ ನೋಡಿದೆಯೋ, ನಾನಲ್ಲೇ ನಾಚಿಕೆಗೇ ಸತ್ತೆ! ಅದ್ಯಾವುದೋ ಹಳೆಯಕಾಲದ ಯಕ್ಷ, ಪತ್ನಿಗೆ ಮೇಘ ಸಂದೇಶ ಕಳಿಸಿದನಂತೆ. ಮೋಡಕ್ಕೆ ಮಾತು ಬರುವುದಿಲ್ಲವೆಂಬುದು ಅವನಿಗೂ ಗೊತ್ತು ನೋಡು. ನೀನು ಮಕ್ಕಳನ್ನೂ ಕರಕೊಂಡು, ಇವತ್ತು ಹೋಗಿ ನಾಳೆ ಬರುತ್ತೇನೆಂದು ತೌರಿಗೆ ಹೋದೆ. ನಿಮ್ಮನ್ನು ಬಸ್ಸು ಹತ್ತಿಸಿ ಬಂದು ಟಿವಿ ಹಾಕಿದರೆ, ಪ್ರಧಾನಿಗಳ ಭಾಷಣ ಮೊಳಗುತ್ತಿತ್ತು. ಇಪ್ಪತ್ತೂಂದು ದಿನಗಳ ಲಾಕ್‌ಡೌನ್! “ಅಯ್ಯೋ ಶಿವನೇ…’ ತಲೆಗೆ ಕೈಹೊತ್ತು ಕುಳಿತೆ. ಇಪ್ಪತ್ತೂಂದು ದಿನಕ್ಕೆ ನೀನೂ ತಯಾರಿರಲಿಲ್ಲ, ನಾನೂ! ಓಡಿ ಹೋಗಿವಾಪಸ್ ಕರೆದುಕೊಂಡು ಬಂದುಬಿಡಲಾ ಅಂತ ಹುಚ್ಚುಯೋಚನೆ. ಪಾಪ, “ತೌರಸುಖ’ಕ್ಕೆ ನಾನೇಕೆ ಕಲ್ಲು ಹಾಕಲಿ, ಅಲ್ವಾ? ನಾಳೆಯಿಂದ ಆಫಿಸೂ ಇಲ್ಲ. ನಿನ್ನ ಕಲಕಲ, ದಡಬಡ, ವಟವಟ ಏನೂ ಇಲ್ಲ; ಇಡೀ ಮನೆಯಲ್ಲಿ ಒಬ್ಬನೆಂದರೆ ಒಬ್ಬನೇ – ಇದ್ದಕ್ಕಿದ್ದಂತೆ ಖುಷಿಯಿಂದ “ಹುರ್ರೆ…’ ಎಂದು ಕೂಗಬೇಕೆನಿಸಿ ಕ್ಷಣ ತಡೆದೆ, ಮರುಕ್ಷಣವೇ ಯಾರೂ ಇಲ್ಲವೆಂಬುದು ಗಮನಕ್ಕೆ ಬಂದು ಕೂಗಿಯೂ ಬಿಟ್ಟೆ. ಏನಾಯಿತ್ರೀ ಮುಕುಂದ್ ರಾವ್? ಅಂತ ಎದುರುಮನೆಯ ಮುದುಕ ಬಾಗಿಲು ತಟ್ಟುತ್ತಾನೆಂದು ಕಾದೆ. ಯಾರೂ ಬರಲಿಲ್ಲ!
ಹೊನ್ನಾಡನಾಡುವಳು ಬೆಳಗುಗೆನ್ನೆಯ ಚೆಲುವೆ ನನ್ನ ಮಡದಿ…’ ನನಗೆ ಧಿಗ್ಗನೆ ಎಚ್ಚರ. ಆಗಲೇ ಬೆಳಗ್ಗೆ ಏಳೂಮುಕ್ಕಾಲು. ಲೇಟಾಯ್ತು ಅಂತ ಒಂದು ಕ್ಷಣ ಗಾಬರಿಯಾದರೂ, ಲಾಕ್ ಡೌನ್, ಬೇಗ ಎದ್ದೇಳುವ ಕೆಲಸವಿಲ್ಲ ಅಂತ ನೆನಪಾಗಿ ಮಗ್ಗುಲು ಬದಲಿಸಿದೆ. ಅಭ್ಯಾಸ ಬಲದಿಂದೆಂಬಂತೆ ಹಾಗೇ ಪಕ್ಕಕ್ಕೆ ಕೈ ಚಾಚಿದೆ- ಎಂದಿನ ನಿನ್ನ ಚಿರಪರಿಚಿತವಾದ ಸ್ಪರ್ಶ ಕೈಗೆಟುಕಲಿಲ್ಲ (ಎಂಥಾ ಹಿತವಿತ್ತೇ ಅದರಲ್ಲಿ!). ದಿನಾ ಇಷ್ಟುಹೊತ್ತಿಗೆ ದೊಡ್ಡ ಮಗ್ಗಿನ ತುಂಬ ಟೀ ತುಂಬಿಕೊಂಡು ನನ್ನನ್ನು ಎಚ್ಚರಿಸುತ್ತಿದ್ದಿ, ಇಬ್ಬರೂ ಒಟ್ಟಿಗೇ ಕುಳಿತು ಒಂದೇ ಮಗ್ಗಿನಲ್ಲಿ ಟೀ ಹೀರುತ್ತಿದ್ದೆವು (ನೀನೂ ಮಳ್ಳಿಯೇ ಇದ್ದೀಯೆ ಬಿಡು. ದಿನಾ ಜಗಳ ಕಾದರೂ, ಇದೊಂದು ಮಾತ್ರ ಹಕ್ಕಿನಂತೆ ಉಳಿಸಿಕೊಂಡು ಬಂದಿದ್ದೀ ಇಷ್ಟು ವರ್ಷವಾದರೂ! ನಾನೂ ದಿನಾ ಇದಕ್ಕಾಗೇ ಎದುರು ನೋಡ್ತೀನಿ). ಇವತ್ತು ಈ ಕ್ರಮ ತಪ್ಪಿಹೋಗಿ, ದಿನವೇ ಶುರುವಾಗಲಿಲ್ಲವೇ ಸರೂ! ಕೊನೆಗೊಮ್ಮೆ ಹೊಟ್ಟೆ ಚುರುಗುಟ್ಟತೊಡಗಿದಾಗ ಹೇಗೋ ಎದ್ದೆ. ಸ್ನಾನ ಸುರುವಿಕೊಂಡು, ನಿನ್ನೆಯದೇ ಉಳಿದ ಅಡುಗೆ ತಿಂದೆ. ಮಧ್ಯಾಹ್ನದ ಊಟದ ಚಿಂತೆ ಆಗಲೇ ಕಾಡತೊಡಗಿತು.
Related Articles
Advertisement
ಇಂತಿ ನಿನ್ನಮುಕುಂದ ಪತ್ರ ಬರೆದು ದಿಂಬಿನಡಿಯಿಟ್ಟ ಮುಕುಂದ, ಟಿವಿ ಹಚ್ಚಿದ.
ಪ್ರಧಾನಿಗಳು ಮತ್ತೂಮ್ಮೆ ಹೇಳುತ್ತಿದ್ದರು: “ದೇಸ್
ವಾಸಿಯೋಂ, ತೀನ್ ಮೈ ತಕ್ ಲಾಕ್ ಡೌನ್ ಔರ್ ಬಢಾನಾ
ಪಡೇಗಾ…’ ದಸಕ್ಕನೆ ಕುಸಿದು ಕುಳಿತ ಮುಕುಂದ.
ಮುಂದಿನದು ಕೇಳಲಾಗಲಿಲ್ಲ. ತಲೆಕೊಡವಿ ರೇಡಿಯೊ
ಹಚ್ಚಿದ. ಮಿರ್ಜಾ ಘಾಲಿಬ್‌ನ ಗೀತೆಯೊಂದು ತೇಲಿ
ಬರುತ್ತಿತ್ತು: ಏ ನ ಥೀ ಹಮಾರಿ ಕಿಸ್ಮತ್ ಕಿ
ವಿಸಾಲ್-ಏ-ಯಾರ್ ಹೋತಾ
ಅಗರ್ ಔರ್ ಜೀತೇ ರೆಹತೇ
ಯಹೀ ಇಂತೆಜಾರ್ ಹೋತಾ… ಮಂಜುನಾಥ ಕೊಳ್ಳೇಗಾಲ