Advertisement

ರಾಜ್ಯಸಭೆ ಚುನಾವಣೆ ವಿಚಾರವಾಗಿ ಕಾಂಗ್ರೆಸ್ ಪಕ್ಷದೊಂದಿಗೆ ನಾನು ಮಾತನಾಡಿಲ್ಲ: ಕುಮಾರಸ್ವಾಮಿ

03:48 PM Jun 04, 2022 | Team Udayavani |

ಹುಬ್ಬಳ್ಳಿ: ರಾಜ್ಯಸಭೆ ಚುನಾವಣೆಗೆ ನಾಲ್ಕನೇ ಅಭ್ಯರ್ಥಿ ಆಯ್ಕೆ ‌ವಿಚಾರವಾಗಿ ಕಾಂಗ್ರೆಸ್ ಪಕ್ಷದ ಯಾವ ನಾಯಕರೊಂದಿಗೂ ನಾನು ಮಾತನಾಡಿಲ್ಲ. ಇದೆಲ್ಲ ವದಂತಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.‌ ಕುಮಾರಸ್ವಾಮಿ ಹೇಳಿದರು.

Advertisement

ನಗರದಲ್ಲಿ ಸುದ್ದಿಗಾರೊಂದಿಗೆ ಶನಿವಾರ ಮಾತನಾಡಿದ ಅವರು, ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಗುನ್ನಾ, ತಳಮಳ ಎಂಬ ಚರ್ಚೆಗಳಾಗುತ್ತಿವೆ. ಆದರೆ ಯಾವುದೇ ರೀತಿಯ ತಳಮಳ, ನಡುಕ ಪಕ್ಷಕ್ಕಿಲ್ಲ. ಅದಕ್ಕಾಗಿಯೇ ನಾನು ರಾಜ್ಯಸಭಾ ಚುನಾವಣೆ ಜಂಜಾಟದಿಂದ ದೂರ ಉಳಿದಿದ್ದೆ. ಆದರೆ ಕಾಂಗ್ರೆಸ್ ನಾಯಕರು ಜೆಡಿಎಸ್ ಪಕ್ಷವನ್ನು ಅವಮಾನ ಮಾಡಲು ಹಲವಾರು ಹೇಳಿಕೆ ಕೊಡುತ್ತಿದ್ದಾರೆ. ಪಕ್ಷವನ್ನು ನಿರ್ನಾಮ ಮಾಡುವ ಕೆಲಸ ಮಾಡಲಾಗುತ್ತಿದೆ. ಆದರೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರರಂತಹ ನೂರಾರು ಜನರು ಬಂದರು ಅದು ಸಾಧ್ಯವಿಲ್ಲ ಎಂದರು.

ರಾಜಕಾರಣದಲ್ಲಿ ಆಶಾವಾದ ಇರಬೇಕು. ಹಾಗಾಗಿ ನಮ್ಮ ಪಕ್ಷದಿಂದ ರಾಜ್ಯಸಭೆಗೆ ಅಭ್ಯರ್ಥಿಗಳನ್ನು ನಿಲ್ಲಿಸಿದ್ದೇವೆ. ನಮ್ಮಲ್ಲಿ 32 ಮತಗಳಿವೆ. 3-4 ಜನರಲ್ಲಿ ಅಸಮಾಧಾನ ಇರುವುದು ನಿಜ, ಅವರನ್ನು ವಿಶ್ವಾಸಕ್ಕೆ ಪಡೆಯುವ ಕೆಲಸ ನಡೆಯುತ್ತಿದೆ. ಎಲ್ಲರ ಮತಗಳು ಪಕ್ಷದ ಅಭ್ಯರ್ಥಿಗಳ ಪರ ಬೀಳಲಿವೆ. ಈ ಬಾರಿ ಅಡ್ಡ ಮತಗಳು ಬರುವುದು ಸಾಧ್ಯವಿಲ್ಲ ಎಂದರು.

ಇದುವರೆಗೆ ಜೆಡಿಎಸ್ ಪಕ್ಷವನ್ನು ಬಿಜೆಪಿಯ ಬಿ ಟೀಮ್ ಎಂದು ಆರೋಪಿಸಲಾಗುತ್ತಿತ್ತು. ಆದರೆ ಬರುವ ಜು. 10ರ ರಾಜ್ಯಸಭೆಯ ಫಲಿತಾಂಶದ ನಂತರ ಯಾರು ಬಿಜೆಪಿಯ ಬಿ ಟೀಮ್ ಹಾಗೂ ನಾಯಕ ಯಾರೆಂದು ಗೊತ್ತಾಗುತ್ತದೆ ಎಂದರು.

ಇದನ್ನೂ ಓದಿ:ರೋಹಿತ್ ಚಕ್ರತೀರ್ಥ ಮತ್ತು ಬರಗೂರು ರಾಮಚಂದ್ರಪ್ಪರ ತುಲಾಭಾರ ಮಾಡಿ: ಪ್ರಿಯಾಂಕ್ ಖರ್ಗೆ

Advertisement

ರಾಜ್ಯಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಬಹುದು ಎಂದು ತಿಳಿದು ಕೊಂಡಿದ್ದಾರೆ. ಆದರೆ ಅವರೇ ತಮ್ಮ ಕಲ್ಲನ್ನು ತಾವೇ ಹೊಡೆದುಕೊಳ್ಳುತ್ತಾರೆ ನೋಡಿ ಎಂದರು.

ನನಗೆ ರಾಜ್ಯಸಭೆ ಚುನಾವಣೆ ಮುಖ್ಯವಲ್ಲ. ಮುಂಬರುವ 2023ರ ಚುನಾವಣೆಯಲ್ಲಿ 123 ಸ್ಥಾನಗಳ ಗುರಿ ಹೊಂದಿದ್ದು, ಆ ನಿಟ್ಟಿನಲ್ಲಿ ರಾಜ್ಯಾದ್ಯಂತ ಮುಂದಿನ 8-10 ತಿಂಗಳು ಸಂಚರಿಸಿ ಪಕ್ಷ ಸಂಘಟಿಸುವೆ. ಪಕ್ಷವು ಅಧಿಕಾರಕ್ಕೆ ಬರುವುದು ನಿಶ್ಚಿತವೆಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next