Advertisement
ಬಡವರ ಬಂಧು ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ವೇದಿಕೆ ಮೇಲೆ ಎಷ್ಟು ಮಾತನಾಡುತ್ತೇನೋ ಅಷ್ಟನ್ನೇ ಬರೆದುಕೊಳ್ಳಿ, ಬೇಡವಾದರೆ ಬಿಡಿ. ನಾನು ಏನೇ ಮಾತನಾಡಿದರೂ ಎಲ್ಲವನ್ನೂ ತಪ್ಪಾಗಿಯೇ ಅರ್ಥೈಸುತ್ತಾರೆ. ಹೀಗಾಗಿ ಮಾಧ್ಯಮಗಳ ಮುಂದೆ ಮಾತನಾಡಬಾರದೆಂದು ನಿರ್ಧರಿಸಿದ್ದೇನೆ ಎಂದು ಹೇಳಿದರು.
Related Articles
Advertisement
ಕಾರ್ಖಾನೆ ಮಾಲೀಕರು ಮಾತು ತಪ್ಪಿದರೆ, ಅದಕ್ಕೆ ನಾನು ಹೊಣೆಗಾರನೇ? ಈಗ ಬಿಜೆಪಿ ನಾಯಕರು ಎದ್ದು ನಿಂತಿದ್ದಾರೆ. ಬೆಳಗಾವಿ ಅಧಿವೇಶನದಲ್ಲಿ ಒಂದು ಲಕ್ಷ ರೈತರೊಂದಿಗೆ ಮುತ್ತಿಗೆ ಹಾಕುತ್ತಾರಂತೆ. ಮಹಾರಾಷ್ಟ್ರದಲ್ಲಿ ಈರುಳ್ಳಿ ದರ ಕುಸಿತವಾಗಿ ರೈತರು ಪಾದಯಾತ್ರೆ ಮಾಡುತ್ತಿದ್ದಾರೆ.
ಅಲ್ಲಿ ಬಿಜೆಪಿ ಸರ್ಕಾರವಿದೆ. ಅದು ನಿಮಗೆ ಕಾಣಿಸುವುದಿಲ್ಲವೇ? ಈ ಅಸೂಯೆ, ಹೊಟ್ಟೆಯುರಿ ಏಕೆ ಎಂದು ಪ್ರಶ್ನಿಸಿದರು.ರೈತರ ಸಾಲ ಮನ್ನಾ ಬುರುಡೆ ಎಂದು ಯಡಿಯೂರಪ್ಪ ಹೇಳುತ್ತಾರೆ.
45 ಸಾವಿರ ಕೋಟಿ ರೂ. ಸಾಲಮನ್ನಾ ಮಾಡದಿದ್ದರೆ, ನಾನು ರೈತರ ಮನೆಗೆ ಹೋಗುವುದು ಸಾಧ್ಯವೇ? ಈರುಳ್ಳಿ ರೈತರು ಪ್ರಧಾನಿ ನರೇಂದ್ರ ಮೋದಿಗೆ ಟ್ವೀಟ್ ಮಾಡಿದ್ದಾರಂತೆ, ರೈತರಿಗೆ ಈರುಳ್ಳಿ ಬೆಲೆ ಕೊಡಿಸಲು ನರೇಂದ್ರ ಮೋದಿ ಬರುತ್ತಾರಾ? ಮೋದಿ ಜನ್‌ಧನ್ ಯೋಜನೆ ಜಾರಿಗೆ ತಂದಿದ್ದರು, ಈ ದೇಶದ ಜನತೆಗೆ ಎಷ್ಟು ಹಣ ಹಾಕಿದ್ದಾರೆ. ಯಡಿಯೂರಪ್ಪನವರೇ ನಾನು ನಿಮ್ಮಿಂದ ನಡವಳಿಕೆ ಕಲಿಯಬೇಕಿಲ್ಲ. ಒಬ್ಬ ಹರಕಲು ಬಟ್ಟೆ ಹಾಕಿಕೊಂಡು ಬಂದವರ ಹೆಗಲ ಮೇಲೆ ಕೈ ಹಾಕಿ ಮಾತನಾಡುತ್ತೇನೆ. ನಾನು ಯಾರನ್ನೂ ಏಕ ವಚನದಲ್ಲಿ ಸಂಭೋಧಿಸುವುದಿಲ್ಲ ಎಂದು ಹೇಳಿದರು.
ಸಹಕಾರ ಸಚಿವ ಬಂಡೆಪ್ಪ ಕಾಶಂಪೂರ್ ಮಾತನಾಡಿ, ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳಾಗಿದೆ. ಅಷ್ಟರಲ್ಲಿಯೇ ಬಡವರ ಹಾಗೂ ರೈತರ ಪರ ಹತ್ತಾರು ಯೋಜನೆಗಳನ್ನು ಘೋಷಿಸಿದೆ. ಬೀದಿ ವ್ಯಾಪಾರಿಗಳಿಗೆ ಮೀಟರ್ ಬಡ್ಡಿ ವ್ಯಾಪಾರಿಗಳಿಂದ ತೊಂದರೆಯಾಗುತ್ತಿದ್ದು, ಅದಕ್ಕೆ ಪರಿಹಾರ ಒದಗಿಸಲು ಮೂವತ್ತು ಸಹಕಾರ ಬ್ಯಾಂಕ್‌ಗಳ ಮೂಲಕ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ. ಪ್ರತಿ ಬ್ಯಾಂಕಿನಲ್ಲಿ ಬಡವರ ಬಂಧು ಯೋಜನೆ ಜಾರಿಗೆ ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದೆ. ಮುಂದಿನ ತಿಂಗಳು ಉದ್ಯೋಗ ಸೃಷ್ಠಿಗೆ ನೆರವಾಗುವ ಕಾಯಕ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ಹೇಳಿದರು.
ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ಮಾತನಾಡಿ, ಒಂದು ತಿಂಗಳ ಹಿಂದೆ ಸಿಟಿ ಮಾರುಕಟ್ಟೆಗೆ ಭೇಟಿ ನೀಡಿದಾಗ ಬೀದಿ ಬದಿ ವ್ಯಾಪಾರಿಗಳ ಕಥೆ ಕೇಳಿ ನೋವಾಯಿತು. ಪ್ರತಿ ದಿನ 10 ರಿಂದ 20ರಷ್ಟು ಬಡ್ಡಿ ಕಟ್ಟಬೇಕು. ಇಲ್ಲದಿದ್ದರೆ ಮಾನಸಿಕ, ದೈಹಿಕ ಹಿಂಸೆ ಅನುಭವಿಸುತ್ತಾರೆ. ಅಂತವರ ತೊಂದರೆ ಪರಿಹರಿಸಲು ಈ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ತಿಳಿಸಿದರು.