Advertisement

ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ

12:09 PM May 11, 2018 | Team Udayavani |

ಬೆಂಗಳೂರು: ಜಾಲಹಳ್ಳಿಯ ಫ್ಲ್ಯಾಟ್‌ವೊಂದರಲ್ಲಿ ಪತ್ತೆಯಾದ ಚುನಾವಣಾ ಗುರುತಿನ ಚೀಟಿ ಪ್ರಕರಣದಲ್ಲಿ ರಾಜಕೀಯ ಷಡ್ಯಂತ್ರ ಅಡಗಿದ್ದು, ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ರಾಜರಾಜೇಶ್ವರಿನಗರ ಕಾಂಗ್ರೆಸ್‌ ಅಭ್ಯರ್ಥಿ ಮುನಿರತ್ನ ಸ್ಪಷ್ಟಪಡಿಸಿದ್ದಾರೆ.

Advertisement

ಶುಕ್ರವಾರ ಮಧ್ಯಾಹ್ನ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುರುತಿನ ಚೀಟಿ ಪತ್ತೆಯಾಗಿರುವುದು ಬಿಜಿಪಿಯ ಕಾರ್ಯಕರ್ತೆ, ಮಾಜಿ ಕಾರ್ಪೋರೇಟರ್‌ ಮಂಜುಳಾ ನಂಜಮುರಿ ಅಪಾರ್ಟ್‌ಮೆಂಟ್‌ನಲ್ಲಿ. ಈ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ ಅನ್ನು ರಂಗರಾಜು ಮತ್ತು ರೇಖಾ ಎಂಬುವರಿಗೆ ಬಾಡಿಗೆ ನೀಡಿದ್ದೆ ಎಂದು ಹೇಳುತ್ತಿದ್ದಾರೆ. ಆದರೆ,ಬಾಡಿಗೆ ಪಡೆದವರು ಎನ್ನಲಾದ ರಂಗರಾಜು ಅವರೇ ಘಟನೆಗೂ ನಮಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಅಲ್ಲದೇ, ಗುರುತಿನ ಚೀಟಿ ಪತ್ತೆಯಾದ ವೇಳೆ ಕಾಂಗ್ರೆಸ್‌ ಕಾರ್ಯಕರ್ತರು ಸ್ಥಳದಲ್ಲಿ ಇರಲಿಲ್ಲ. ಮೊದಲಿಗೆ ಹೋಗಿದ್ದು ಬಿಜೆಪಿ, ಜೆಡಿಎಸ್‌ ಕಾರ್ಯಕರ್ತರು. ನನ್ನ ಭಾವಚಿತ್ರವಿರುವ ಕರಪತ್ರಗಳು ಪತ್ತೆಯಾದ ಕೂಡಲೇ ಕೂಗಳತೆ ದೂರದಲ್ಲಿರುವ ಪೊಲೀಸ್‌ ಠಾಣೆಗೆ ಯಾಕೆ ದೂರು ನೀಡಿಲ್ಲ. ಚುನಾವಣಾಧಿಕಾರಿಗಳಿಗೂ ಮಾಹಿತಿ ಕೊಡದೆ ನೇರವಾಗಿ ಅವರೇ ವಿಡಿಯೋ ಮಾಡಿರುವ ಉದ್ದೇಶವೇನು ಎಂದು ಪ್ರಶ್ನಿಸಿದರು.

ಸ್ಥಳದಲ್ಲಿ ದೊರೆತ ಗುರುತಿನ ಚೀಟಿಗಳು ಕಾಂಗ್ರೆಸ್‌ ಮತದಾರರು ಎಂದು ಹೇಳುತ್ತಿದ್ದಾರೆ. ಅಂತಹ ಮತದಾರರ ಗುರುತಿನ ಚೀಟಿಗಳಿಂದ ನನಗೇನು ಪ್ರಯೋಜನ. ಹೀಗಿರುವಾಗ ನನ್ನ ಮೇಲೆ ಆರೋಪ ಮಾಡುತ್ತಿರುವುದು ಸರಿಯಲ್ಲ. ಬಿಜೆಪಿ ಅಭ್ಯರ್ಥಿಗೆ ಸೋಲಿನ ಭೀತಿ ಎದುರಾಗಿದೆ. ಹೀಗಾಗಿ ಕುತಂತ್ರ ಮಾಡುತ್ತಿದ್ದಾರೆ. ಪ್ಲ್ರಾಟ್‌ನಲ್ಲಿ ನನ್ನ ಭಾವಚಿತ್ರವಿರುವ ಕರಪತ್ರಗಳು ಪತ್ತೆಯಾಗಿವೆ ಎಂಬ ಕಾರಣಕ್ಕೆ ನನ್ನ ವಿರುದ್ಧ ಎಫ್ಐಆರ್‌ ದಾಖಲಿಸಿರುವುದು ಸರಿಯಲ್ಲ. ಮೇ 15ರ ಬಳಿಕ ನನ್ನನ್ನು ವೈಯಕ್ತಿಕವಾಗಿ ತೇಜೋವಧೆ ಮಾಡುವವರ ವಿರುದ್ಧ ಕಾನೂನು ಹೋರಾಟ ನಡೆಸುತ್ತೇನೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next