Advertisement

ಸ್ವಾಭಿಮಾನದಿಂದ ರಾಜಕಾರಣ ಮಾಡಿದ್ದೇನೆ: ಸಿದ್ದು

12:59 AM Jan 28, 2019 | Team Udayavani |

ಬೆಂಗಳೂರು: ‘ನಾನು ಸ್ವಾಭಿಮಾನದಿಂದ ರಾಜಕಾರಣ ಮಾಡಿದ್ದೇನೆಯೇ ಹೊರತು, ಯಾರಿಗೂ ತಲೆತಗ್ಗಿಸಿ ರಾಜಕಾರಣ ಮಾಡಿಲ್ಲ’ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

Advertisement

ನೈಸ್‌ ರಸ್ತೆಯ ಸೋಂಪುರ ಗೇಟ್ ಬಳಿಯ ಜಟ್ಟಿಗರಹಳ್ಳಿಯಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ವತಿಯಿಂದ ನಿರ್ಮಿಸಿರುವ ನೂತನ ಕನಕ ಸಮುದಾಯ ಭವನ ಉದ್ಘಾಟನಾ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ದುಡಿದರೂ ಎಲ್ಲ ಸಮುದಾಯಗಳಿಗೆ ಕಾರ್ಯಕ್ರಮಗಳನ್ನು ನೀಡಿದ್ದೇನೆ. ಇನ್ನೂ ಐದು ವರ್ಷ ಅಧಿಕಾರ ಸಿಕ್ಕಿದ್ದರೆ ಏನೆಲ್ಲ ಮಾಡಬಹುದಾಗಿತ್ತು. ಆದರೆ, ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗುತ್ತಾರೆ ಎಂದು ಹೊಟ್ಟೆಕಿಚ್ಚಿನಿಂದ ಅಪಪ್ರಚಾರ ಮಾಡಿ ಸೋಲಿಸಿದರು ಎಂದು ಬೇಸರ ವ್ಯಕ್ತಪಡಿಸಿದರು.

ನನ್ನ ಸರ್ಕಾರದಲ್ಲಿ ಹಡಪದ ಅಪ್ಪಣ್ಣ, ಹೇಮರೆಡ್ಡಿ ಮಲ್ಲಮ್ಮ, ಅಂಬಿಗರ ಚೌಡಯ್ಯ ಸೇರಿ ಎಲ್ಲ ಸಮುದಾಯಗಳ ದಾರ್ಶನಿಕರ ಜಯಂತಿ ಆಚರಿಸಲಾಗಿದೆ. ವಿಶ್ವಕರ್ಮ ನಿಗಮ ರಚನೆಯಾಗಿದೆ. ಆದರೆ, ನಾವು ಯಾರಿಗಾಗಿ ಕೆಲಸ ಮಾಡಿದೆವೆಯೋ ಅವರೇ ನಮ್ಮ ಕೈಹಿಡಿಯಲಿಲ್ಲ. ಒಳಿತನ್ನು ಬಯಸುವವರ ಜತೆಗೆ ಹಿಂದುಳಿದವರು ಹೋಗಬೇಕೆ ಹೊರತು, ಸ್ವಾರ್ಥಕ್ಕಾಗಿ ಒಳಿತು ಬಯಸುವವರ ಜತೆಗೆ ಹೋಗಬಾರದು ಎಂದು ಮಾರ್ಮಿಕವಾಗಿ ನುಡಿದರು.

ರಾಜಕೀಯ ಜೀವನದಲ್ಲಿ ನಾನು ಸಾರ್ವಜನಿಕರ ಆಸ್ತಿ ಮುಟ್ಟಿಲ್ಲ. ಕುರುಬರ ಸಂಘದಿಂದ ವೈದ್ಯಕೀಯ ಕಾಲೇಜು ನಿರ್ಮಿಸಬೇಕು ಎಂಬ ಯೋಜನೆಯಿತ್ತು. ಅದಕ್ಕೆ ಸರ್ಕಾರ ದಿಂದ ಅನುಮತಿಯೂ ಸಿಕ್ಕಿತ್ತು. ಆದರೆ, ಕಾಲೇಜು ನಿರ್ಮಾಣಕ್ಕೆ 500 ಕೋಟಿ ರೂ. ಅಗತ್ಯವಿದ್ದು, ಕುರುಬರಲ್ಲಿ ಹೆಚ್ಚು ಶ್ರೀಮಂತರಿಲ್ಲ. ನಮ್ಮ ಸಮುದಾಯದಲ್ಲಿ ಎಂಟಿಬಿ ನಾಗರಾಜ್‌ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ ಎಂದು ಸಿದ್ದರಾಮಯ್ಯ ಹಾಸ್ಯ ಚಟಾಕಿ ಹಾರಿಸಿದರು.

ಸಿದ್ದರಾಮಯ್ಯ ಸಮಾಜದ ಎಲ್ಲ ಸಮುದಾಯಗಳ ನಾಯಕರಾಗಿದ್ದಾರೆ. ಸರ್ಕಾರಿ ಕಚೇರಿಯಲ್ಲಿ ಬಸವೇಶ್ವರರ ಭಾವಚಿತ್ರ ಪ್ರದರ್ಶನ ಕಡ್ಡಾಯಗೊಳಿಸಿ ಸಿದ್ದರಾಮಯ್ಯ ಅವರು ಲಿಂಗಾಯತ, ಒಕ್ಕಲಿಗ ಸಮುದಾಯಕ್ಕೂ ಅಪಾರ ಕೊಡುಗೆ ನೀಡಿದ್ದಾರೆ. ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರವನ್ನು ಯಾವುದೇ ಮಣ್ಣಿನ ಮಕ್ಕಳು ರಚನೆ ಮಾಡಲಿಲ್ಲ. ಬದಲಿಗೆ, ಸಿದ್ದರಾಮಯ್ಯ ಅವರು  ಸಿಎಂ
ಆಗಿದ್ದಾಗ ರಚನೆ ಮಾಡಿದರು.
 ●ಎಚ್‌.ಎಂ.ರೇವಣ್ಣ, ಮಾಜಿ ಸಚಿವ

Advertisement
Advertisement

Udayavani is now on Telegram. Click here to join our channel and stay updated with the latest news.

Next