Advertisement

ಗೋಕಾಕ: ಮಠದ ಸೇವಕನಾಗಿ ಬಂದಿದ್ದೇನೆ.. ಅಮರಸಿದ್ದೇಶ್ವರ ಶ್ರೀ ಪುರಪ್ರವೇಶ

06:38 PM Jun 16, 2023 | Team Udayavani |

ಗೋಕಾಕ: ಅಂಕಲಗಿ ಶ್ರೀ ಅಡವಿಸಿದ್ಧೇಶ್ವರ ಮಠಕ್ಕೆ ನಾನು ಅಧಿಕಾರಿಯಾಗಿ ಬಂದಿಲ್ಲ, ಸೇವಕನಾಗಿ ಬಂದಿದ್ದೇನೆ. ಶ್ರೀ ಅಡವಿಸಿದ್ಧೇಶ್ವರರ ಲೀಲೆ ಇಲ್ಲದೆ ಯಾವುದೂ ಆಗೋಲ್ಲ. ಅವರ ಇಚ್ಚೆಯಂತೆ ನಾನು ಈ ಪೀಠಕ್ಕೆ ಸ್ವಾಮಿಯಾಗಿ, ತಮ್ಮ ಮನೆಯ ಮಗನಾಗಿ ಸೇವೆ ಸಲ್ಲಿಸುತ್ತೇನೆಂದು ಶ್ರೀ ಅಮರಸಿದ್ಧೇಶ್ವರ ಸ್ವಾಮೀಜಿ ತಿಳಿಸಿದರು.

Advertisement

ಅವರು ತಾಲೂಕಿನ ಅಂಕಲಗಿ ಗ್ರಾಮದ ಶ್ರೀ ಅಡವಿಸಿದ್ಧೇಶ್ವರ ಮಠಕ್ಕೆ ನಿಯೋಜಿತ ಉತ್ತರಾಧಿಕಾರಿಯಾಗಿ ಪುರಪ್ರವೇಶ ಮಾಡಿ, ಅಡವಿಸಿದ್ಧೇಶ್ವರ ಪೀಠ ಪರಂಪರೆಗೆ ಪ್ರಣಾಮ ಸಲ್ಲಿಸಿ, ಲಿಂ|ಶ್ರೀ ಗುರುಸಿದ್ಧೇಶ್ವರ ಸ್ವಾಮಿಗಳ ಸ್ಮರಣೆ ಮಾಡಿ ಮಾತನಾಡಿ, ಹಲವಾರು ಕನಸು ಕಟ್ಟಿಕೊಂಡು ಬಂದಿದ್ದೇನೆ. ಶ್ರೀ ಅಡವಿಸಿದ್ಧೇಶ್ವರ ಆಶೀರ್ವಾದದಿಂದ ಶ್ರೀಮಠದ ಅಭಿವೃದ್ಧಿಗೆ ಬದ್ಧನಿದ್ದು, ನನಗೆ ತಮ್ಮ ಹಣ-ಆಸ್ತಿಗಿಂತ, ಪ್ರೀತಿ-ವಾತ್ಸಲ್ಯ-ವಿಶ್ವಾಸ ನೀಡಿ ಬರಮಾಡಿಕೊಳ್ಳುವಂತೆ ಮನವಿ ಮಾಡಿದರು.

ಅತಿ ಹೆಚ್ಚು ಶಾಖಾ ಮಠ ಹೊಂದಿರುವ ಅಡವಿಸಿದ್ಧೇಶ್ವರ ಮಠ ಇತಿಹಾಸ, ಪರಂಪರೆಯನ್ನು ಹೊಂದಿದೆ. ಈಗಾಗಲೇ ಕುಂದರಗಿಯ ಮಠದಲ್ಲಿ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಮತ್ತು ಆಶ್ರಯ ನೀಡುತ್ತ ಬಂದಿದ್ದೇನೆ. ಅಂಕಲಗಿ ಮಠದಲ್ಲೂ ಇದನ್ನು ಮುಂದುವರಿಸಿಕೊಂಡು ಹೋಗುವುದಾಗಿ ತಿಳಿಸಿದ ಅವರು, ಒಂದು ಮಠ ಸಮಾಜಕ್ಕೆ ಏನು ಮಾಡಬೇಕು ಎಂಬುದನ್ನು ಅರಿತು ಮಾಡಬೇಕಾಗುತ್ತದೆ. ಆ ನಿಟ್ಟಿನಲ್ಲಿ ಮಠದ ಸ್ವಾಮೀಜಿಯಾಗಿ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಮಠದ ಅಭಿವೃದ್ಧಿಗೆ ನನಗೆ ಸಲಹೆ-ಸೂಚನೆ ನೀಡಬಹುದು ಎಂದು ಹೇಳಿದರು.

ಭಕ್ತರು ಮಠದ ಆಧಾರ ಸ್ತಂಭಗಳಾಗಬೇಕು. ಮಠವು ಭಕ್ತರಿಗೆ ಅಧಿಕಾರ ಕೊಡುವಂತಾಗಬೇಕು. ಭಕ್ತ ಮತ್ತು ಸ್ವಾಮಿಗಳ ಸಂಬಂಧ ತಂದೆ ಮಕ್ಕಳ ಸಂಬಂಧ. ಹೀಗಾಗಿ ನನ್ನನ್ನು ತಮ್ಮ ಮನೆಯ ಮಗನಂತೆ ನೋಡಿ ಎಂದು ಪುನರುಚ್ಚರಿಸಿದರು.

ಧಾರವಾಡ ಮುರುಘಾಮಠದ ಡಾ| ಮಲ್ಲಿಕಾರ್ಜುನ ಸ್ವಾಮೀಜಿ, ಮುರಗೋಡದ ಶ್ರೀ ನೀಲಕಂಠ ಸ್ವಾಮಿಗಳು, ಮುನವಳ್ಳಿಯ ಶ್ರೀ
ಮುರುಘರಾಜೇಂದ್ರ ಸ್ವಾಮಿಗಳು, ಘೋಡಗೇರಿ ವಿರಕ್ತಮಠದ ಶ್ರೀ ಕಾಶಿನಾಥ ಸ್ವಾಮಿಗಳು, ಖಡಕಲಾಟದ ಶ್ರೀ ಕುಮಾರೇಶ್ವರ ಸ್ವಾಮೀಜಿ, ಹುಕ್ಕೇರಿಯ ಶಿವಬಸವ ಸ್ವಾಮೀಜಿ, ಅರಳಿಕಟ್ಟಿಯ ಶ್ರೀ ಶಿವಮೂರ್ತಿ ಸ್ವಾಮೀಜಿ, ಗುಳೇದಗುಡ್ಡದ ಶ್ರೀ ಶಿವಶರಣ ದೇವರು ಇದ್ದರು.

Advertisement

ಇದಕ್ಕೂ ಮುಂಚೆ ಶಿವಯೋಗ ಸಿದ್ಧಿಯಿಂದ 770 ವರ್ಷ ಬಾಳಿದ ಕುಂದರನಾಡಿನ ಮಹಾತಪಸ್ವಿ ಶ್ರೀ ಅಡವಿಸಿದ್ಧೇಶ್ವರ ಶಿವಯೋಗಿಗಳ ಮಠದ ಆವರಣದವರೆಗೆ ನಿಯೋಜಿತ ಉತ್ತರಾಧಿಕಾರಿ ಶ್ರೀ ಅಮರಸಿದ್ಧೇಶ್ವರ ಶ್ರೀಗಳನ್ನು ತೆರೆದ ವಾಹನದಲ್ಲಿ
ಸುಮಂಗಲೆಯ ಕುಂಭಮೇಳ, ವಿವಿಧ ವಾದ್ಯ ಮೇಳದೊಂದಿಗೆ ಕರೆತರಲಾಯಿತು.

ಉಪಸ್ಥಿತರಿದ್ದ ಎಲ್ಲ ಶ್ರೀಗಳು ಕುಂದರಗಿಯ ಶ್ರೀ ಅಮರಸಿದ್ಧೇಶ್ವರ ಶ್ರೀಗಳಿಗೆ ಪೇಠ ತೊಡಿಸಿ ಅಭಿನಂದಿ ಸಿ, ಆಶೀರ್ವದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next