Advertisement
“ನಾನು ಸೋಮವಾರವಷ್ಟೇ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದೆ ಎಂಬ ವರದಿ ಸುಳ್ಳು. ನಾನು ಬಹಳ ಹಿಂದೆಯೇ ಅರ್ಜಿ ಹಾಕಿದ್ದೆ…’ ಎಂಬುದಾಗಿ ಮೀಡಿಯಾ ವೆಬ್‌ಸೈಟ್ ಒಂದರ ಜತೆ ರವಿ ಶಾಸ್ತ್ರಿ ಹೇಳಿಕೊಂಡಿದ್ದಾರೆ.ಬಿಸಿಸಿಐ ಅರ್ಜಿ ಸಲ್ಲಿಕೆಯ ಅಂತಿಮ ದಿನಾಂಕವನ್ನು ಜು. 9ಕ್ಕೆ ವಿಸ್ತರಿಸಿದ ಕೂಡಲೇ ರವಿ ಶಾಸ್ತ್ರಿ ಕೋಚ್ ಹುದ್ದೆಯ ಆಕಾಂಕ್ಷೆಯನ್ನು ಪ್ರಕಟಿಸಿದ್ದಾರೆ; ಕೂಡಲೇ ಅರ್ಜಿ ಸಲ್ಲಿಸಿದ್ದಾರೆ ಎಂದು ಮೂಲವೊಂದು ತಿಳಿಸಿದೆ. ಆದರೆ ಅವರು ಸೋಮವಾರ (ಜು. 3) ಅರ್ಜಿ ಸಲ್ಲಿಸಿದರು ಎಂಬುದು ಹೇಗೆ ಸುದ್ದಿಯಾಯಿತೋ ತಿಳಿಯುತ್ತಿಲ್ಲ!
ಜು. 10ರಂದು ಟೀಮ್ ಇಂಡಿಯಾದ ನೂತನ ಕೋಚ್ ಯಾರೆಂಬುದು ತಿಳಿಯಲಿದೆ. ಅನಂತರ ಭಾರತ ತಂಡ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ.