ಮುಂಬಯಿ: ಆರ್‌ಸಿಬಿ ನಾಯಕತ್ವದಿಂದ ಮುಕ್ತರಾಗಿರುವ ವಿರಾಟ್ ಕೊಹ್ಲಿ ಬ್ಯಾಟಿಂಗ್ ಫಾರ್ಮ್ ಬಗ್ಗೆ ಯಾವುದೇ ಅನುಮಾನ ಬೇಡ ಎಂಬುದಾಗಿ ಆರ್‌ಸಿಬಿಯ ಮಾಜಿ ಆಟಗಾರ, 360 ಡಿಗ್ರಿ ಬ್ಯಾಟರ್ ಎಬಿ ಡಿ ವಿಲಿಯರ್ ಹೇಳಿದ್ದಾರೆ.
“ಫಾ ಡು ಪ್ಲೆಸಿಸ್ ಆರ್‌ಸಿಬಿಯ ನೂತನ ನಾಯಕರಾಗುವುದು ನಿರೀಕ್ಷಿತವೇ ಆಗಿತ್ತು. ಇದರಿಂದ ವಿರಾಟ್ ಕೊಹ್ಲಿ ಒತ್ತಡ ಮುಕ್ತರಾಗಿದ್ದಾರೆ.
ಹೀಗಾಗಿ ಅವರು ನಿರಾಳವಾಗಿ ಬ್ಯಾಟಿಂಗ್ ಮಾಡಬಹುದಾಗಿದೆ. ಪ್ರಸಕ್ತ ಋತುವಿನಲ್ಲಿ ಅವರು 600 ರನ್ ಗಳಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ ಎಂಬುದು ನನ್ನ ಅನಿಸಿಕೆ’ ಎಂದು ಯೂ-ಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದ ವೇಳೆ ಎಬಿಡಿ ಹೇಳಿದರು.
ಇದನ್ನೂ ಓದಿ:ಆರ್‌ಆರ್‌ಆರ್ ಸಿನಿಮಾ ಬಿಡುಗಡೆಯಾದ ಐದೇ ದಿನಗಳಲ್ಲಿ ಬರೋಬ್ಬರಿ 600 ಕೋಟಿ ರೂ.ಗಳಿಕೆ!
“ನಾಯಕ ಡು ಪ್ಲೆಸಿಸ್‌ಗೆ ವಿರಾಟ್ ಕೊಹ್ಲಿ ಮಾರ್ಗದರ್ಶನ ಅಗತ್ಯವಾಗಿ ಬೇಕಿದೆ. ಆದರೆ ಡು ಪ್ಲೆಸಿಸ್ ಅನುಭವಿ ಆಟಗಾರ. ದಕ್ಷಿಣ ಆಫ್ರಿಕಾ ತಂಡವನ್ನು ಮುನ್ನಡೆಸಿದ ಅನುಭವವೂ ಇದೆ. ಆರ್‌ಸಿಬಿಯಲ್ಲಿ ಈ ಬಾರಿ ಯುವ ಆಟಗಾರರ ಸಂಖ್ಯೆ ಹೆಚ್ಚಿದೆ.
ಡು ಪ್ಲೆಸಿಸ್-ಕೊಹ್ಲಿ ಮಾರ್ಗದರ್ಶನದಲ್ಲಿ ಇವರು ಉತ್ತಮ ನಿರ್ವಹಣೆ ನೀಡಬಲ್ಲರು’ ಎಂದು ಎಬಿಡಿ ವಿಶ್ವಾಸ ವ್ಯಕ್ತಪಡಿಸಿದರು.