Advertisement

ಜೆ.ಕೆ. ಜನತೆಗೆ ನೀಡಿದ ಆಮೀಷದಿಂದಾಗಿ ನನಗೆ ಸೋಲಾಯ್ತು; ಎಂ.ಸಿ.ಸುಧಾಕರ್‌

03:55 PM Feb 16, 2023 | Team Udayavani |

ಚಿಂತಾಮಣಿ: ನನ್ನ ಕ್ಷೇತ್ರವನ್ನು ರಾಜ್ಯ ಮಟ್ಟದಲ್ಲಿ ಮಾದರಿ ಕ್ಷೇತ್ರವನ್ನಾಗಿ ಮಾಡಲು ಹೊರಟ ನನ್ನನ್ನು ಜೆ.ಕೆ. ಕೃಷ್ಣಾರೆಡ್ಡಿ ನೀಡಿದ ಆಸೆ ಅಮೀಷಗಳಿಗೆ ಒಡ್ಡಿ ಅಲ್ಪ ಮತದಿಂದ ನಾನು ಸೋಲುನ್ನು ಅನುಭವಿಸುವಂತಾಯಿತು ಮಾಜಿ ಶಾಸಕರಾದ ಡಾ. ಎಂ.ಸಿ.ಸುಧಾಕರ್‌ ಬೇಸರ ವ್ಯಕ್ತಿಪಡಿಸಿದರು.

Advertisement

ಯುವಕರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಮಸ್ತೇನಹಳ್ಳಿ ಮತ್ತು ಕನಿಶೆಟ್ಟಿಹಳ್ಳಿ ಭಾಗಗಳಲ್ಲಿ ಸುಮಾರು ಎಕರೆ ಸರ್ಕಾರಿ ಜಮೀನನ್ನು ಮೀಸಲಿಟ್ಟು ಕೈಗಾರಿಕಾ ಉದ್ದಿಮೆ ಪ್ರಾರಂಭಿಸಲು ಸಿದ್ಧತೆ ನಡೆಸಿದ್ದೆ ಎಂದರು.

ತಾಲೂಕಿನ ಮುಂಗಾನಹಳ್ಳಿ ಹೋಬಳಿಯ ಎಂ ಗೊಲ್ಲಹಳ್ಳಿ ಗ್ರಾಪಂಗೆ ಸೇರಿದ ವೆಂಕಟರಾಯನಕೋಟೆ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ನಾನು ರಾಜಕೀಯಕ್ಕೆ ಬಂದು 20 ವರ್ಷಗಳಾಗಿದೆ. ನಾನು ಶಾಸಕನಾಗಿದ್ದರೆ ಕ್ಷೇತ್ರದ ಯುವಕರಿಗೆ ಉತ್ತಮ ಯೋಜನೆಗಳನ್ನು ಒದಗಿಸುತ್ತಿದ್ದೆ. 2004ರಲ್ಲಿ ಪ್ರಥಮ ಬಾರಿ ಶಾಸಕನಾದೆ ಆಗ ಕಾಂಗ್ರಸ್‌-ಜೆಡಿಎಸ್‌ 20 ತಿಂಗಳು, ಬಿಜೆಪಿ-ಜೆ.ಡಿ.ಎಸ್‌. 20 ತಿಂಗಳು ಜೊತೆಗೆ ಇನ್ನೂ 20 ತಿಂಗಳು ಸರ್ಕಾರವು ಅವ್ಯವಸ್ಥೆ ಸ್ಥಿತಿಯಲ್ಲಿತ್ತು.

ಇಂತಹ ರಾಜಕೀಯ ವಿಫ್ಲವದಲ್ಲೂ ಅಭಿವೃದ್ಧಿ ಮಾಡಿದ್ದೆ. 2ನೇ ಬಾರಿ ಶಾಸಕನಾಗಿ ಆಯ್ಕೆಯಾಗುವ ವೇಳೆ ಚಿಲಕಲನೇರ್ಪು ಹೋಬಳಿಯಲ್ಲಿ ಶಿಡ್ಲಘಟ್ಟಕ್ಕೆ ಚೇಳೂರು ಹೋಬಳಿ, ಬಾಗೇಪಲ್ಲಿಗೆ ಮತ್ತು ಕಸಬಾ ಹಾಗೂ ಕೈವಾರ ಚಿಂತಾಮಣಿಗೆ ಹೊಸದಾಗಿ ಕ್ಷೇತ್ರವು ವಿಂಗಡನೆಯಾಯಿತು. ಮೊದಲ ಅವಧಿಯಲ್ಲಿ ಶಾಸಕನಾಗಿದ್ದಾಗ ಚಿಲಕಲನೇರ್ಪು ಹೋಬಳಿಯಲ್ಲಿ ಚೆಕ್‌ ಡ್ಯಾಂ ನಿರ್ಮಾಣ ಮಾಡಿಸಿದೆ. ನಂತರ ಮುಂಗಾನಹಳ್ಳಿ ಹೋಬಳಿಯಲ್ಲಿ ನಿರ್ಮಾಣ ಮಾಡಿಸಿದೆ ಇದರಿಂದ ಅಲ್ಲಿನ ಜನರಿಗೆ ಅನುಕೂಲವಾಯಿತು ಎಂದರು.

ಬ್ಲಾಕ್‌ ಕಾಂಗ್ರೆಸ್‌ ಗ್ರಾಮಾಂತರ ಅಧ್ಯಕ್ಷ ಮುರುಗಮಲ್ಲ ಲಕ್ಷ್ಮೀನಾರಾಯಣ ರೆಡ್ಡಿ ಮಾತನಾಡಿ, ಶಾಸಕ ಜೆ. ಕೆ. ಕೃಷ್ಣಾರೆಡ್ಡಿ ಅವರ ಅಧಿಕಾರಾವಧಿಯಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಯುವಕರನ್ನು ರೆಸಾರ್ಟ್‌ಗಳಿಗೆ ಕರೆದೊಯ್ದು ಮಧ್ಯಪಾನ ಕೊಡಿಸುವುದು. ಚುನಾವಣೆ ವೇಳೆ ಹಣದ ಆಮಿಷ ತೋರಿಸಿ ಮತದಾರರಿಗೆ ಮರಳು ಮಾಡುವುದೇ ಶಾಸಕರ ಸಾಧನೆಯಾಗಿದೆ. ಚಿಂತಾಮಣಿ ಕ್ಷೇತ್ರದ ಜನತೆಗೆ ಶಾಸಕರ ಕೊಡುಗೆ ಏನು ಎಂದು ಪ್ರಶ್ನಿಸಿದರು. ಶೀಘ್ರದಲ್ಲೇ ತಾಲೂಕಿನ ಹಲವು ಜೆಡಿಎಸ್‌ ಮುಖಂಡರು ಕಾಂಗ್ರೆಸ್‌ಗೆ ಸೇರಲಿದ್ದಾರೆ ಎಂದರು.

Advertisement

ಆದ್ದರಿಂದ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಮುಂಬರುವ ಚುನಾವಣೆಯಲ್ಲಿ ಮಾಜಿ ಶಾಸಕ ಎಂ. ಸಿ. ಸುಧಾಕರ್‌ ಅವರಿಗೆ ಬಹುಮತದಿಂದ ಗೆಲ್ಲಿಸಲು ಎಲ್ಲರೂ ಒಟ್ಟುಗೂಡಬೇಕು ಎಂದರು.

ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರ್ಪಡೆ:
ವೆಂಕಟರಾಯನಕೋಟೆ ಗ್ರಾಮದ ಮುಸ್ತಾಫ, ಆದಿ ಮೂರ್ತಿ, ಈಶ್ವರಪ್ಪ, ಕೋನಪರೆಡ್ಡಿ, ಮಹಬೂಬ್‌ ಸಾಬಿ, ಶ್ರೀನಿವಾಸ ಎಂಪಿಸಿಎಸ್‌, ಮಹಬೂಬ್‌, ಹರೀಶ್‌, ಚಿನ್ನಪ್ಪಯ್ಯ, ಮುನಿಶಾಮಿಗಾರಿ ವೆಂಕಟೇಶ್‌,ರತ್ನಪ್ಪ ವಿ. ಮಂಜುನಾಥ್‌, ಭಜನ ವೆಂಕಟಸ್ವಾಮಿ, ಆಸೀಪ್‌, ಗೋಪಾಲಕೃಷ್ಣ, ಮನೋಹರ್‌, ಶ್ರೀಕಾಂತ್‌, ವೆಂಕಟರವಣಪ್ಪ, ಅಶೋಕ್‌, ವಿ ಕೆ ವೆಂಕಟೇಶ್‌, ಭಾಸ್ಕರ್‌, ರಘನಾಥ್‌, ನವೀದ್‌ ಸೇರಿದಂತೆ ಇನ್ನು ಹಲವು ಮಂದಿ ಜೆಡಿಎಸ್‌ ಪಕ್ಷವನ್ನು ತೊರೆದು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದರು.

ಕೆಪಿಸಿಸಿ ಸದಸ್ಯರಾದ ಕೃಷ್ಣಮೂರ್ತಿ, ಸೈಯದ್‌, ಏಜಾಜ್‌ ಪಾಷಾ, ಬ್ಲಾಕ್‌ ಕಾಂಗ್ರೆಸ್‌ ಗ್ರಾಮಾಂತರ ಅಧ್ಯಕ್ಷರಾದ ಮುರಗಮಲ್ಲ ಲಕ್ಷ್ಮೀನಾರಾಯಣರೆಡ್ಡಿ, ನಗರಾಧ್ಯಕ್ಷ ಕೈವಾರ ಡಾಬಾ ನಾಗರಾಜ್‌, ಟಿಎಪಿಸಿಎಂಸಿ ಅಧ್ಯಕ್ಷ ಮಾದಮಂಗಲ ಚಂದ್ರಪ್ಪ, ಕೊಚಿಮುಲ್‌ ನಿರ್ದೇಶಕ ಊಲವಾಡಿ ಅಶ್ವಥ್‌ ನಾರಾಯಣ ಬಾಬು, ಜಿಪಂ ಮಾಜಿ ಸದಸ್ಯರಾದ ಸ್ಕೂಲ್‌ ಸುಬ್ಟಾರೆಡ್ಡಿ, ಶ್ರೀನಿವಾಸ, ಚಂದ್ರಶೇಖರ್‌, ಶಿವಣ್ಣ, ಗ್ರಾಪಂ ಅಧ್ಯಕ್ಷ ಕೆ.ಎಸ್‌. ವೆಂಕಟರೆಡ್ಡಿ, ರಾಗುಟ್ಟಹಳ್ಳಿ ರಘುನಾಥರೆಡ್ಡಿ, ಎಪಿಎಂಸಿ ಯರ್ರಗಾರಹಳ್ಳಿ ರವಿ, ಎಂ.ಗೊಲ್ಲಹಳ್ಳಿ ರಘು, ಮುರಗಮಲ್ಲ ಹಾಜಿ ಅನ್ಸರ್‌ ಖಾನ್‌, ಅಮೀರ್‌ ಜಾನ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next