Advertisement

“ಮತ್ತೆ ಸಿಎಂ ಆಗುವ ಇಚ್ಛೆ ಇಲ್ಲ’

11:22 PM Dec 02, 2019 | mahesh |

ಬೆಳಗಾವಿ/ಹುಬ್ಬಳ್ಳಿ: ಡಿ.9ರ ನಂತರ ರಾಜ್ಯ ರಾಜಕೀಯದಲ್ಲಿ ಏನು ಬೇಕಾದರೂ ಬದಲಾವಣೆ ಆಗಬಹುದು. ಆದರೆ, ನನಗೆ ಮತ್ತೂಮ್ಮೆ ಮುಖ್ಯಮಂತ್ರಿಯಾಗುವ ಇಚ್ಛೆ ಇಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

Advertisement

ಸುದ್ದಿಗಾರರ ಜತೆ ಮಾತನಾಡಿ, ನಾನು ಸರ್ಕಾರ ಇರುತ್ತದೆ ಅಂದಿದ್ದೆ. ಆದರೆ, ಬಿಜೆಪಿ ಸರ್ಕಾರ ಅಂತ ಹೇಳಿಲ್ಲ. ಡಿ.9ರ ನಂತರ ಎಲ್ಲವೂ ಗೊತ್ತಾಗಲಿದೆ. ಅಪ್ಪ-ಮಕ್ಕಳ ಪಕ್ಷವನ್ನು ಮನೆಗೆ ಕಳಿಸುವುದಾಗಿ ಹೇಳಿದ್ದ ಎಲ್ಲರೂ ಮನೆಗೆ ಹೋಗಿದ್ದಾರೆ. ಗೋಕಾಕದಲ್ಲಿ ಬಿಜೆಪಿ ಅಭ್ಯರ್ಥಿ
ರಮೇಶ ಜಾರಕಿಹೊಳಿ ಕೂಡ ಮನೆಗೆ ಹೋಗಲಿದ್ದಾರೆ ಎಂದರು.

ಉಪಚುನಾವಣೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಯಾವುದೇ ಒಳಒಪ್ಪಂದ ಮಾಡಿ ಕೊಂಡಿಲ್ಲ. ಜೆಡಿಎಸ್‌ 6ರಿಂದ 8 ಸ್ಥಾನ ಗೆಲ್ಲುವ ವಿಶ್ವಾಸವಿದೆ. ಉಪ ಚುನಾವಣೆ ಫಲಿತಾಂಶ ದಿಂದ ಅಚ್ಚರಿ ಬದಲಾವಣೆ ಆಗಲಿದ್ದು, ಮಲ್ಲಿಕಾರ್ಜುನ ಖರ್ಗೆ ಸಿಹಿ ಸುದ್ದಿ ಕೊಡುವುದಾಗಿ ಹೇಳಿದ್ದಾರೆ. ಸಿದ್ದರಾಮಯ್ಯ ನಾನು ಸಿಎಂ ಆಗುವೆ ಎನ್ನುತ್ತಾರೆ. ಸಿದ್ದರಾಮಯ್ಯ, ಖರ್ಗೆ, ಮೊಯ್ಲಿ ಅವರದ್ದೇ ಲೆಕ್ಕಾಚಾರದ ಮೇಲೆ ಹೇಳಿಕೆ ನೀಡುತ್ತಿದ್ದಾರೆ. ಎಲ್ಲವೂ ಈಡೇರಬಹುದು, ಇಲ್ಲವೇ ಬುಡಮೇಲಾಗಬಹುದು. ಬಿಜೆಪಿ, ಕಾಂಗ್ರೆಸ್‌ನವರು ಸರ್ಕಾರ ಮಾಡಲು ನಮ್ಮನ್ನು ಹುಡುಕಿಕೊಂಡು ಬಂದರು. ಅವರು ಕಷ್ಟದಲ್ಲಿದ್ದರೆ ನಮ್ಮನ್ನು ಬಳಸಿಕೊಳ್ಳುತ್ತಾರೆ. ನಮ್ಮ ಕೊಡೆಯ ಕೆಳಗೆ ಅವರು ಆಶ್ರಯ ಪಡೆಯುತ್ತಿದ್ದಾರೆ ಎಂದರು.

ಡಿಕೆಶಿಗೆ ಅನಗತ್ಯ ಕಿರುಕುಳ: ಬಿಜೆಪಿಯವರು ಅಧಿಕಾರ ದುರುಪಯೋಗ ಮಾಡಿಕೊಂಡು ಡಿ.ಕೆ.ಶಿವಕುಮಾರ್‌ ಅವರಿಗೆ ಪದೇ ಪದೆ ಐಟಿ ನೋಟಿಸ್‌ ಕೊಡಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ನೋಟಿಸ್‌ ನೀಡುವ ಅಗತ್ಯವಿರಲಿಲ್ಲ. ಉಪ ಚುನಾವಣೆ ಮುಗಿಯುವವರೆಗೂ ಅವಕಾಶ ಕೊಡಬೇಕಿತ್ತು. ಚುನಾವಣೆಯಲ್ಲಿ ತೊಂದರೆ ಕೊಡಬೇಕೆಂಬ ಉದ್ದೇಶದಿಂದಲೇ ಬಿಜೆಪಿ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದರು.

ಮತ್ತೆ ಮೈತ್ರಿ ಇಲ್ಲ, ಬಿಎಸ್‌ವೈ ಸರ್ಕಾರ ಮುಂದುವರಿಯಲಿ
ಗೋಕಾಕ: ಕಾಂಗ್ರೆಸ್‌ ಹಾಗೂ ಬಿಜೆಪಿಯೊಂದಿಗೆ ಈಗಾಗಲೇ ಹೊಂದಾಣಿಕೆ ಮಾಡಿಕೊಂಡು ಕೈ ಸುಟ್ಟು ಕೊಂಡಿದ್ದೇವೆ. ಈ ಹಿಂದೆ ನಾವು ಮಾಡಿದ ತಪ್ಪುಗಳು ಮರುಕಳಿಸದಂತೆ ಜಾಗ್ರತೆ ವಹಿಸುತ್ತೇವೆ. ಯಡಿಯೂರಪ್ಪ ಸರ್ಕಾರಕ್ಕೆ ಯಾವುದೇ ಆತಂಕ ವಿಲ್ಲ. ಅವರು ಭಯ ಪಡುವ ಅಗತ್ಯವಿಲ್ಲ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹೇಳಿದರು. ಜೆಡಿಎಸ್‌ ಅಭ್ಯರ್ಥಿ ಅಶೋಕ ಪೂಜಾರಿ ಸ್ವಗೃಹದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ 105 ಶಾಸಕರೊಂದಿಗೆ ಆಡಳಿತ ನಡೆಸುತ್ತಿರುವ ಯಡಿಯೂರಪ್ಪ ಅವರು ಮುಂದುವರಿಯಲಿ. ಅನರ್ಹ ರೆಲ್ಲರನ್ನೂ ಮಂತ್ರಿಗಳನ್ನಾಗಿ ಮಾಡಲಾಗುವುದು ಎಂದು ಹೇಳಿಕೆ ನೀಡುತ್ತಿರುವ ಅವರು, ಈಗಾಗಲೇ ಸೋತವರನ್ನು ಮಂತ್ರಿಯನ್ನಾಗಿ ಮಾಡಿ ಹಿರಿಯ
ಶಾಸಕರನ್ನು ಕಡೆಗಣಿಸಿದ್ದಾರೆ. ತಮ್ಮ ಪಕ್ಷದಲ್ಲಿ ಇರುವ ಉಮೇಶ ಕತ್ತಿ ಅವರಂಥ ನಿಷ್ಠಾವಂತ ಶಾಸಕರ ಬಗ್ಗೆ ಕಾಳಜಿ ವಹಿಸಲಿ. ರಾಜ್ಯದಲ್ಲಿ ಕುದುರೆ ವ್ಯಾಪಾರ ಮಾಡಿ ಆಡಳಿತಕ್ಕೆ ಬಂದಿರುವ ಯಡಿಯೂರಪ್ಪ ಅವರು ನೆರೆ ಸಂದರ್ಭದಲ್ಲಿ ಏಕಾಂಗಿಯಾಗಿ ಕಾರ್ಯ ನಿರ್ವಹಿಸಿದರು. ಸಂತ್ರಸ್ತರಿಗೆ ಪರಿಹಾರವನ್ನು ಕಲ್ಪಿಸಲು ಪರದಾಡಿದ ಅವರ ನಡೆ ತೃಪ್ತಿಕರವಾಗಿಲ್ಲ ಎಂದರು.

Advertisement

ಈಗಿನ ರಾಜ್ಯ ಸರ್ಕಾರಕ್ಕೆ ಏನೂ ಆಗುವುದಿಲ್ಲ ಎಂಬ ದೇವೇಗೌಡರ ಹೇಳಿಕೆ ಬಿಜೆಪಿಗೆ ಬೆಂಬಲ ಕೊಡುತ್ತೇವೆ ಎಂದು ಹೇಳಿದ್ದಲ್ಲ. ಬಿಜೆಪಿ ಅಭ್ಯರ್ಥಿಗಳನ್ನು ನೋಡಿದರೆ ಯಡಿಯೂರಪ್ಪ ಅವರ ಕುತ್ತಿಗೆಯನ್ನು ಯಾವಾಗ ಕೊಯ್ಯುತ್ತಾರೆ ಗೊತ್ತಿಲ್ಲ. ರಾಜ್ಯದಲ್ಲಿ ಇಂತಹ ಮುಖ್ಯಮಂತ್ರಿ
ಮತ್ತೂಬ್ಬರು ಬರಲು ಸಾಧ್ಯವಿಲ್ಲ.
● ಎಚ್‌.ಡಿ. ಕುಮಾರಸ್ವಾಮಿ, ಮಾಜಿ ಸಿಎಂ

ಮೊದಲಿಂದಲೂ ಕುಮಾರಸ್ವಾಮಿ ಹಾಗೂ ದೇವೇಗೌಡರು ತಮ್ಮಿಂದಲೇ ಸರ್ಕಾರ ರಚನೆಯಾಗುತ್ತದೆ ಎಂದು ಕತೆ ಹೇಳುತ್ತಿದ್ದಾರೆ. ಅವ ರದು ಬರೀ ಹಗಲುಗನಸು. ಈ ಕನಸು ಎಂದಿಗೂ ನನಸಾಗುದಿಲ್ಲ.
ಮತದಾರರು ಒಂದೇ ಪಕ್ಷಕ್ಕೆ ಬೆಂಬಲ ನೀಡಲಿದ್ದಾರೆ.
● ವಿ.ಸೋಮಣ್ಣ, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next