Advertisement

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

07:57 PM Apr 25, 2024 | Vishnudas Patil |

ತೀರ್ಥಹಳ್ಳಿ : ಈಶ್ವರಪ್ಪನವರಿಂದ ನಾನು ಏನನ್ನೂ ಕಲಿಯ ಬೇಕಾಗಿಲ್ಲ ನಮ್ಮ ಸಂಸ್ಕೃತಿ ಮತ್ತು ಪರಂಪರೆ ಬಗ್ಗೆ ನನಗೆ ಗೊತ್ತಿದೆ. ನನ್ನ ಅಮ್ಮ ದೇವರ ಮನೆಯಲ್ಲಿ ಪೂಜೆ ಹೇಳಿಕೊಟ್ಟಿದ್ದಾರೆ. ನನ್ನ ಅತ್ತೆ ಬಾಗಿಲು ಪೂಜೆ, ತುಳಸಿ ಪೂಜೆ ಮಾಡುವುದನ್ನು ಹೇಳಿಕೊಟ್ಟಿದ್ದಾರೆ. ದಿನ ನಿತ್ಯ ನಮ್ಮ ಮನೆಯಲ್ಲಿ ನಡೆಯುತ್ತಲೇ ಇರುತ್ತದೆ ಎಂದು ಹಣೆಯ ಕುಂಕುಮ ಅಳಿಸಿಕೊಂಡ ವಿಚಾರಕ್ಕೆ ಗೀತಾ ಶಿವರಾಜ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ತೀರ್ಥಹಳ್ಳಿಯಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಕುಂಕುಮ ಅಳಿಸಿಕೊಂಡಿದ್ದಕ್ಕೆ ಗೀತಾ ಶಿವರಾಜ್ ಕುಮಾರ್ ಕ್ಷಮೆ ಕೇಳಬೇಕು ಎಂದು ಈಶ್ವರಪ್ಪ ಹೇಳಿದ್ದಾರೆ. ಅವರಿಂದ ನಾನು ಏನನ್ನೂ ಕಲಿಯಬೇಕಿಲ್ಲ ಎಂದರು.

ಪ್ರಧಾನಿ ನರೇಂದ್ರ ಮೋದಿ ಮಂಗಳಸೂತ್ರ ಹೇಳಿಕೆ ವಿಚಾರವಾಗಿ ಮಾತನಾಡಿ ಇದು ಅತಿ ಸೂಕ್ಷ್ಮ ವಿಚಾರ. ಈ ರೀತಿ ಮಾತನಾಡುವುದು ಪ್ರಧಾನಿಗಳಿಗೆ ಸೂಕ್ತ ಅಲ್ಲ.ಅದನ್ನು ನಾನೂ ಖಂಡಿಸುತ್ತೇನೆ, ಅವರ ಬಾಯಿಂದ ಈ ರೀತಿ ಹೇಳಿಕೆ ಬರಬಾರದು ಎಂದರು.

ನಾವೆಲ್ಲರೂ ಅಣ್ಣ ತಮ್ಮಂದಿರು

ಶಿವರಾಜ್ ಕುಮಾರ್ ಮಾತನಾಡಿ, ಜನರಿಗೆ ಸೇವೆ ಮಾಡಲು ಅನುಭವ ಬೇಡ. ಮಾತನಾಡುವವರು ಇಲ್ಲಿಯವರೆಗೆ ಏನು ಕೆಲಸ ಮಾಡಿದ್ದಾರೆ.ಯಾರೋ ಹೇಳಿದ್ದನ್ನು ನಂಬುವ ಬದಲು ನಮ್ಮ ಮನಸ್ಸು ಹೇಳಿದ್ದನ್ನು ಕೇಳೋಣ. ಸರ್ಕಾರ ಈಗಾಗಲೇ ಸುಮಾರು ಗ್ಯಾರಂಟಿ ಕೊಟ್ಟಿದೆ. ನಾನು ಆ ಗ್ಯಾರೆಂಟಿ ಬಗ್ಗೆ ಮಾತನಾಡಲ್ಲ ಆದರೆ ನನ್ನ ಪತ್ನಿ ಬಗ್ಗೆ ನಾನೇ ಗ್ಯಾರಂಟಿ ಎಂದರು.

Advertisement

‘ಇಲ್ಲಿ ತಮಿಳು ಅವರು ಜಾಸ್ತಿ ಇದ್ದಾರೆ ಎಂದು ಕೇಳಿದ್ದೇನೆ. ಎಲ್ಲರಿಗೂ ನಮಸ್ಕಾರಗಳು.ಜೈಲರ್ ನೋಡಿದ್ದೀರಾ, ಕ್ಯಾಪ್ಟನ್ ನೋಡಿದ್ರಾ? ಚನ್ನಾಗಿ ಇತ್ತಾ? ನಾನೂ ಓದಿದ್ದು ಚೆನ್ನೈ ನಲ್ಲೇ.ರಾಜ್ ಕುಮಾರ್ ಮಕ್ಕಳು ಎಲ್ಲರೂ ಅಲ್ಲೇ ಓದಿದ್ದು. ನಾನೂ,ಪುನೀತ್, ರಾಘು, ಲಕ್ಷ್ಮಿ ಹಾಗೂ ಪೂರ್ಣಿಮಾ ಎಲ್ಲರೂ ಅಲ್ಲೇ ಓದಿದ್ದು. ಅಲ್ಲಿ ನಮ್ದು ಒಂದು ಮನೆ ಇದೆ. ನಾವು ಅಲ್ಲಿ ಇರಬೇಕಾದಾಗ ತಮಿಳು ಮಾತನಾಡುತ್ತಿದ್ದೆವು. ನೀವು, ಇಲ್ಲಿಗೆ ಬಂದಾಗ ಕನ್ನಡ ಮಾತನಾಡುತ್ತೀರಾ?. ನಾವು ಎಲ್ಲಿ ಹೋಗುತ್ತೇವೋ ಆ ಭಾಷೆಯನ್ನು ಕಲಿಯ ಬೇಕು. ಅದು ಆ ಭಾಷೆಗೆ ಕೊಡುವ ಮರ್ಯಾದೆ. ನಾವು ಎಲ್ಲಿ ಊಟ ಮಾಡುತ್ತೇವೋ ಆ ಭಾಷೆ ಕಲಿಯಬೇಕು. ನಾವೆಲ್ಲರೂ ಅಣ್ಣ ತಮ್ಮಂದಿರು’ ಎಂದರು.

ಕಿಮ್ಮನೆ ರತ್ನಾಕರ್ ಮಾತನಾಡಿ, ದೇಶದ ರಕ್ಷಣೆ ಮಾಡಲು ಆರ್ಮಿ ಇದ್ದಾರೆ. ಮೋದಿ ಬೇಡ. ಇವರು ಲಡಾಕ್, ಹಿಮಾಚಲಪ್ರದೇಶಕ್ಕೆ ಹೋಗಬೇಕಾಗಿಲ್ಲ.ಇವರು ದೇಶವನ್ನು ಏನು ಉದ್ದಾರ ಮಾಡಿದ್ದಾರೆ? ದೇಶದ ಅಸ್ತಿಯನ್ನು ಸಂರಕ್ಷಣೆ ಮಾಡುವಂತಹದ್ದು ಆದರೆ ಇವರು ಬಂದ ಮೇಲೆ ವಿಮಾನ ನಿಲ್ದಾಣ, ಬಂದರು ಸೇಲ್ ಮಾಡಿದ್ದಾರೆ, ಬಿಎಸ್ಎನ್ಎಲ್ ಹರಾಜಿಗೆ ಇಟ್ಟಿದ್ದಾರೆ.ಅಷ್ಟೇ ಅಲ್ಲದೆ 186 ಕೋಟಿ ಸಾಲ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ಮುಖಂಡರು ಉದ್ಯೋಗದ ಬಗ್ಗೆ ಮಾತನಾಡಲ್ಲ, ದೇಶದ ಆರ್ಥಿಕತೆ ಬಗ್ಗೆ ಮಾತನಾಡಲ್ಲ, ರೈತರ ಸಮಸ್ಯೆ ಬಗ್ಗೆ ಮಾತನಾಡಲ್ಲ,ವಿದ್ಯಾರ್ಥಿ, ಆರೋಗ್ಯ ಸಮಸ್ಯೆ ಬಗ್ಗೆ ಮಾತನಾಡಲ್ಲ ಅವರು ಮಾತನಾಡುವುದು ಒಂದೇ ಅದು ಹಿಂದೂ ಮುಸ್ಲಿಂ ಗಲಾಟೆ ಬಗ್ಗೆ ಮಾತ್ರ ಮಾತನಾಡುತ್ತಾರೆ.ಅಧಿಕಾರಕ್ಕಾಗಿ ನಮ್ಮಲ್ಲೇ ದ್ವೇಷ ತರುವ ಮುಟ್ಟಾಳತನದ ಕೆಲಸ ಮಾಡುತ್ತಿದ್ದಾರೆ ಎಂದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಿಂದೂ ಹೆಣ್ಣುಮಕ್ಕಳ ಮಾಂಗಲ್ಯ ಮುಸ್ಲಿಮರಿಗೆ ಮಾರಬೇಕಾಗುತ್ತದೆ ಅಡ ಇಡಬೇಕಾಗುತ್ತದೆ ಎಂದು ಹೇಳುತ್ತಾರೆ.ದೇಶದ ನಾಗರಿಕ ಆಡುವ ಮಾತಾ ಅದು ಎಂದರು. ಮನುಷ್ಯ ಹೇಗಿರಬೇಕು ಎಂಬುದಕ್ಕೆ ಶ್ರೀ ರಾಮ ಹಾಗೂ ಸೀತಾ ಮಾತೆ ಬಗ್ಗೆ ಉದಾಹರಣೆ ಕೊಡುತ್ತೇವೆ. ಇವನು ರಾಮನಿಗೂ ಹಾಗೂ ಸೀತೆಗೂ ಅವಮಾನ ಮಾಡಿದ್ದಾನೆ. ಇವನು ತಾಳಿ ಕಟ್ಟಿದ್ದು ಯಾರಿಗೆ ಎಂದು ನಿಮಗೂ ನಮಗೂ ಹೇಳಿಲ್ಲ. ಆದರ್ಶ ದಂಪತಿಗಳು ಎಂದರೆ ಇವರಿಬ್ಬರ ರೀತಿ ಇರಬೇಕು ಎಂದು ಶಿವರಾಜ್ ಕುಮಾರ್ ಹಾಗೂ ಗೀತಾ ಬಗ್ಗೆ ತೋರಿಸಿ ಹೇಳಿದರು.

ಆರ್.ಎಂ. ಮಂಜುನಾಥ್ ಗೌಡ ಮಾತನಾಡಿ, ಬಾರಿ ಬದಲಾವಣೆಯ ಚುನಾವಣೆ ಆಗಬೇಕು, ನಾವೆಲ್ಲರೂ ದೈರ್ಯದಿಂದ ಚುನಾವಣೆ ಮತ ಕೇಳಲು ಬಂದಿದ್ದೇವೆ. ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಗ್ಯಾರೆಂಟಿ ನೀಡಿದ್ದೆವು ಜನ ಆಶೀರ್ವಾದ ಮಾಡಿದರು. ಐದು ಗ್ಯಾರೆಂಟಿ ಯೋಜನೆಯನ್ನು ಜಾರಿಗೆ ತಂದಿದೆ. ಕೇಂದ್ರದಲ್ಲಿ ಸರ್ಕಾರ ಬಂದರೆ 25 ಗ್ಯಾರಂಟಿಯನ್ನು ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ತಯಾರಿ ಮಾಡಲಾಗಿದೆ. ಆರಗ ಹೇಳಿದ ಹಾಗೆ ಇದು 420 ಯೋಜನೆ ಅಲ್ಲ. ಶ್ರಮಿಕರ ಪರವಾಗಿ ಕಾಂಗ್ರೆಸ್ ಪಕ್ಷ ಇದೆ. ಬಿಜೆಪಿ ಜನರಿಗೆ ಏನು ಕೊಟ್ಟಿಲ್ಲ. ನಾವು ಜನರ ಹಣವನ್ನು ಜನರಿಗೆ ತಲುಪಿಸುವ ಕೆಲಸ ಮಾಡಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಸುಂದರೇಶ್, ಕೆಸ್ತೂರು ಮಂಜುನಾಥ್, ವಿಶ್ವನಾಥ್ ಶೆಟ್ಟಿ, ಅಮರನಾಥ್ ಶೆಟ್ಟಿ, ಸುಶೀಲ ಶೆಟ್ಟಿ, ಮಂಜುಳಾ ನಾಗೇಂದ್ರ, ಯು ಡಿ ವೆಂಕಟೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next