Advertisement
ಶನಿವಾರ ಪಟ್ಟಣದ ಬಂಟರಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ,1983 ಚುನಾವಣೆಯಿಂದ 9 ಬಾರಿ ಚುನಾವಣೆಗೆ ಸ್ಪರ್ಧೆ ಮಾಡಿದ್ದೇನೆ. ಈಗ ಹತ್ತನೇ ಬಾರಿ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದೇನೆ. ಕಳೆದ 9 ಬಾರಿ ಚುನಾವಣೆಯಲ್ಲಿ ನಾಲ್ಕು ಬಾರಿ ಗೆದ್ದು ಐದು ಬಾರಿ ಸೋತಿದ್ದೇನೆ. ತತ್ವ ಸಿದ್ದಾಂತಕ್ಕಾಗಿ 1975 ರಿಂದ ನನ್ನನ್ನು ನಾನು ಈ ರಾಜಕೀಯದಲ್ಲಿ ತೊಡಗಿಸಿ ಕೊಂಡಿದ್ದೇನೆ. ತುರ್ತು ಪರಿಸ್ಥಿತಿಯ ಕರಾಳ ಕಾಯ್ದೆಯನ್ನ ಈ ದೇಶದ ಮೇಲೆ ಇಂದಿರಾಗಾಂಧಿ ಯವರು ಹೇರಿದ್ದರು. ಅದನ್ನು ವಿರೋಧಿಸಿ ನಾವೆಲ್ಲರೂ ಚಳುವಳಿಯಲ್ಲಿ ಭಾಗವಹಿಸಿದ್ದವು. ಅದರ ಪರಿಣಾಮ ಪೊಲೀಸ್ ಠಾಣೆಯ ಮೆಟ್ಟಿಲೇರುವಂತೆಯೂ ಮಾಡಿತ್ತು. ಅಲ್ಲಿಂದ ಹೊರ ಬಂದ ನಂತರ ಹೋರಾಟ ನ್ಯಾಯಕ್ಕಾಗಿ ಸಾಮಾನ್ಯ ಜನರ ಕಣ್ಣುರಿಸುವಂತಹ ಕೆಲಸದಲ್ಲಿ ತೊಡಗಿಸಿ ಕೊಂಡಿದ್ದೇನೆ. ನನ್ನ ಸ್ವಂತ ಜೀವನಕ್ಕೆ ಸ್ವಲ್ಪ ಮಾತ್ರ ಸಮಯವನ್ನು ಕೊಟ್ಟು ರಾಜಕೀಯಕ್ಕಾಗಿ ಸಮಾಜದ ಜೀವನಕ್ಕಾಗಿ ಕೊಟ್ಟಿದ್ದೇನೆ ಎಂದರು.
Related Articles
Advertisement
ಇನ್ನು ಭಾರತಿಪುರ ತಿರುವಿನಲ್ಲಿ ಆಗುತ್ತಿರುವ ಕಾಮಗಾರಿ ಬಗ್ಗೆ ಮಾತನಾಡಿದ ಅವರು ಭಾರತಿಪುರ ತಿರುವಿನಲ್ಲಿ ಎಷ್ಟು ಬಸ್ಸು ಬಿದ್ದಿದೆ ಎಷ್ಟು ಅಪಘಾತ ಆಗಿದೆ ಎಂದು ನಿಮಗೆ ಗೊತ್ತಿದೆ. 1991 ನೇ ಇಸವಿಯಲ್ಲಿ ನನ್ನ ಮಗಳು ಮತ್ತು ಅತ್ತೆ ಎಂದು ಹೇಳುತ್ತಿದ್ದಂತೆ ಪತ್ರಕರ್ತರು ಎಲ್ಲರೂ ಅವರನ್ನ ಅಲ್ಲಿಗೆ ತಡೆದು ದಯವಿಟ್ಟು ಆ ವಿಷಯವನ್ನು ಪ್ರಸ್ತಾಪ ಮಾಡಬೇಡಿ ಎಂದರು. ನಂತರ ಮಾತನ್ನು ಮುಂದುವರೆಸಿ ಯಾವ ಕುಟುಂಬಕ್ಕೂ ಅಂತಹ ದುಃಖ ಬರಬಾರದು ನಾನು ಅಂದೆ ಯೋಚನೆ ಮಾಡಿದ್ದೆ ಭಗವಂತ ಏನಾದರೂ ನನಗೆ ಅಂತಹ ಅವಕಾಶ ನೀಡಿದರೆ ಇನ್ಯಾರಿಗೂ ಆ ರೀತಿ, ದುಃಖ ಬರದ ಹಾಗೆ ಮಾಡಬೇಕು ಎಂದು ತೀರ್ಮಾನಿಸಿದ್ದೆ ಆ ತಿರುವನ್ನು ಸರಿಪಡಿಸುವುದು ಅನಿವಾರ್ಯ ಎಂದರು.
ಇನ್ನು ರಾಜ್ಯದಲ್ಲಿ ಈ ಬಾರಿ ಬಿಜೆಪಿ ಎಷ್ಟು ಸೀಟು ಗೆಲ್ಲುತ್ತದೆ ಎಂಬ ಪತ್ರಕರ್ತರ ಪ್ರಶ್ನೆಗೆ ಹೀಗಿರುವ ಪ್ರಕಾರ 130 ರಿಂದ 140 ಸ್ಥಾನ ಬಿಜೆಪಿ ಪಕ್ಷ ಗೆಲ್ಲಲಿದೆ. ಯಾವುದೇ ಅನುಮಾನ ಬೇಡ. ಕೆಲವೊಬ್ಬರಿಗೆ ಪಕ್ಷದಲ್ಲಿ ಬಾರಿ ನಿರಾಕರಣೆ ಆಗಿದೆ. ಈಗಾಗಲೇ ಉಡುಪಿಯಲ್ಲಿ ರಘುಪತಿ ಭಟ್ ಅವರು ತಿಳಿಸಿದ್ದಾರೆ ಯಾವುದೇ ಕಾರಣಕ್ಕೂ ನಾನು ಪಕ್ಷವನ್ನು ಬಿಡುವುದಿಲ್ಲ ಯಾರಿಗೆ ಟಿಕೆಟ್ ನೀಡಿದ್ದಾರೋ ಅವರ ಪರವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ ಬಿಜೆಪಿಯಲ್ಲಿ ಇನ್ನೂ ಹಲವರು ಇದೇ ರೀತಿಯಾಗಿ ಹೇಳಿದ್ದಾರೆ. ಕೆಲವೊಂದು ಆಪಾದನೆ ಇರುತ್ತೆ ಅದನ್ನು ಏನು ಮಾಡಲು ಆಗುವುದಿಲ್ಲ ಎಂದರು.
ಇನ್ನು ತೀರ್ಥಹಳ್ಳಿ ಕೊಪ್ಪ ಸರ್ಕಲ್ ನಿಂದ ಮಲ್ಪೆಯವರೆಗೆ ರಸ್ತೆ ಮಾಡಿಸಿದ್ದು ನಾನು ಎಂಬ ಹೇಳಿಕೆ ನೀಡಿದಂತಹ ಮಾಜಿ ಸಚಿವರಿಗೆ ನಾನು ಮಂಜೂರು ಮಾಡಿಸಲಿಕ್ಕೆ ನನ್ನ ಹತ್ತಿರ ದಾಖಲೆ ಇದೆ ಎಲ್ಲೇ ಕರೆದರೂ ದಾಖಲೆ ಸಮೇತ ಕೊಡುತ್ತೇನೆ ಜೊತೆಗೆ ಮಂಜೂರು ಮಾಡಿಸಿದಂತಹ ದಿನಾಂಕದ ಸಮೇತ ಕೊಡುತ್ತೇನೆ ಯಾವಾಗ ಯಾರೇ ಕೇಳಿದರೂ ನಾನು ಅದನ್ನು ಕೊಡಲು ರೆಡಿ ಇದ್ದೇನೆ ಎಂದರು
ಎರಡು ಅವಧಿಯಲ್ಲಿ ಅವರು ಏನು ಮಾಡಿದ್ದಾರೆ ಎಂದು ಹೇಳುತ್ತಾ ಹೋಗಲಿ. ನಾನು ಐದು ವರ್ಷದಲ್ಲಿ ಒಂದುವರೆ ವರ್ಷಗಳ ಕಾಲ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿಯವರ ಸರ್ಕಾರ ಇತ್ತು. ಉಳಿದ ಎರಡು ವರ್ಷಗಳಲ್ಲಿ ಕರೋನ ಬಂತು. ಉಳಿದ ಒಂದು ಮುಕ್ಕಾಲು ವರ್ಷದಲ್ಲಿ ನಾನು ಇಷ್ಟೊಂದು ದಾಖಲೆ ಹಣವನ್ನು ತಂದಿದ್ದೇನೆ.. ನನಗೆ ಐದು ವರ್ಷಗಳ ಕಾಲ ಕ್ಲಿಯರ್ ಇದ್ದಿದ್ದರೆ ಕೋವಿಡ್ ಬರೆದಿದ್ದರೆ ನಾನು ತೋರಿಸುತ್ತಿದ್ದೆ. ಈಗಲೂ ಕೂಡ ಪೂರ್ಣ ಆಗಿದೆ ಎಂದು ನಾನು ಹೇಳುತ್ತಿಲ್ಲ. ಇವರು ಎರಡು ಬಾರಿ ಗೆದ್ದಾಗ ರಸ್ತೆ ಮಾಡಿಸಿದ್ದಿದ್ದರೆ ನಾನು ಇಷ್ಟು ಹೊತ್ತಿಗೆ ಪೂರಣ ಮುಗಿಸಿ ಬಿಡುತ್ತಿದ್ದೆ. ಇವರ ಹತ್ತು ವರ್ಷಗಳ ಕಾಲ ಏನು ಮಾಡದೆ ತೀರ್ಥಹಳ್ಳಿ ಕ್ಷೇತ್ರ ಹಿಂದಕ್ಕೆ ಹೋಗಿತ್ತು. ಸುಮ್ಮನೆ ಯಾರದ್ದು ಮಾತನಾಡಿ ಟೀಕೆ ಮಾಡುವುದು ಆಡಬಾರದ ಮಾತುಗಳನ್ನು ಆಡಿ ಬೇರೆಯವರನ್ನ ತೆಗಳುವುದೇ ಮಾಡುತ್ತಿದ್ದಾರೆ ಇದನ್ನು ತೀರ್ಥಹಳ್ಳಿ ಜನರ ಕ್ಷಮಿಸುವುದಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷರಾದ ಬಾಳೆಬೈಲು ರಾಘವೇಂದ್ರ, ಬೇಗುವಳ್ಳಿ ಕವಿರಾಜ್, ಸೊಪ್ಪುಗುಡ್ಡೆ ರಾಘವೇಂದ್ರ, ನವೀನ್ ಹೆದ್ದೂರು, ಸಂದೇಶ್ ಜವಳಿ,ರಕ್ಷಿತ್ ಮೇಗರವಳ್ಳಿ ಸೇರಿ ಹಲವರು ಉಪಸ್ಥಿತರಿದ್ದರು.