Advertisement

ನಾನು ನನ್ನ ಮಕ್ಕಳನ್ನು ಎಂಎಲ್ಎ ಮಾಡಲು ರಾಜಕೀಯಕ್ಕೆ ಬಂದಿಲ್ಲ: ಶಾಸಕ ಗಣೇಶ್

11:00 PM Jan 27, 2023 | Team Udayavani |

ಕುರುಗೋಡು: ನಾನು ರಾಜಕೀಯಕ್ಕೆ ಬಂದಿರೋದು ನಾನು ಶಾಸಕನಾಗಿ, ನನ್ನ ಮಕ್ಕಳನ್ನು ಶಾಸಕರನ್ನಾಗಿ ಮಾಡಲು ಅಲ್ಲ, ನಾನು ಒಬ್ಬ ರೈತನ ಮಗ ರೈತರ ಕಷ್ಟ ಏನು ಅಂತ ಗೊತ್ತು ಅವರ ಸೇವೆ ಮಾಡಲು ಬಂದಿದ್ದೇನೆ ಎಂದು ಶಾಸಕ ಗಣೇಶ್ ಹೇಳಿದರು.

Advertisement

100 ಹಾಸಿಗೆಯ ಆಸ್ಪತ್ರೆ ಶಂಕುಸ್ಥಾಪನೆ ಭೂಮಿ ಪೂಜೆ ಮತ್ತು ಆಯುಷ್ಮಾನ್ ಭವ ಅಡಿಗಲ್ಲು ಕಾರ್ಯಕ್ರಮ ನೆರವೇರಿಸಿ ಮಾತನಾಡಿ, ಈ ಆಸ್ಪತ್ರೆ ಮಂಜೂರು ಮಾಡಲು ಸುಮಾರು 4 ವರ್ಷ ಇಲಾಖೆ ವಾರು ಅಲೆದಾಡಿ ಶ್ರಮ ಪಟ್ಟು ಜನರ ಬಹು ದಿನಗಳ ಬೇಡಿಕೆ ಈಡೇರಿಸಲಾಗಿದೆ ಎಂದರು.

ಈ ಕಾರ್ಯಕ್ರಮ ಕುರಿತು ಪ್ರೊಟೋಕಲ್ ಉಲ್ಲಂಘನೆ ಅಂತಿದ್ದಾರೆ ಇದರ ಬಗ್ಗೆ ಜಿಲ್ಲಾಧಿಕಾರಿ ಮತ್ತು ಸಚಿವರ ಅತ್ತಿರ ಮಾತನಾಡಿ ಸ್ಥಳ ದಾನಿಗಳಿಗೆ ಗೌರವ ಸಮರ್ಪಿಸಲು ಹಮ್ಮಿಕೊಳ್ಳಲಾಗಿದೆ ಯಾರು ತಪ್ಪು ತಿಳಿದುಕೊಳ್ಳಬೇಡಿ ಎಂದು ಕ್ಷೇತ್ರದ ಜನರಲ್ಲಿ ಮನವಿ ಮಾಡಿದರು.

ಕೋವಿಡ್ ಸಂಕಷ್ಟದಲ್ಲಿ ರೋಗಿಗಳ ಕಷ್ಟ ಏನು ಅಂತ ಗೊತ್ತಾಗಿದೆ. ಬೆಡ್ ಸಿಗದೆ, ಅಕ್ಯ್ಸೀಜನ್ ಸಿಗದೇ ಅನೇಕ ಜನರು ಜೀವ ಕಳೆದುಕೊಂಡಿದ್ದಾರೆ ಅದ್ಕಕಾಗಿ ಮುಂದೆ ಅದೇ ಪರಿಸ್ಥಿತಿ ಬರಬಾರದು ಎಂದು ಜನರಿಗೆ ಅನುಕೂಲ ವಾಗಲಿ ಎಂದು ಆಸ್ಪತ್ರೆ ಕ್ಷೇತ್ರಕ್ಕೆ ತರಲಾಗಿದೆ ಎಂದರು.

ಕಂಪ್ಲಿ ಕ್ಷೇತ್ರದಲ್ಲಿ ಆಸ್ಪತ್ರೆ ಸೇರಿದಂತೆ ರಸ್ತೆ, ಶಾಲೆ, ಏತ ನೀರಾವರಿ ಅನೇಕ ಅಭಿವೃದ್ಧಿ ಕಾರ್ಯಗಳು ನಮ್ಮ ಅವಧಿಯಲ್ಲಿ ನಡೆದಿರೋದು ನಿಮಗೆ ಗೊತ್ತಿದೆ ಆದ್ದರಿಂದ ಇದಕ್ಕೆಲ್ಲಾ ನಿಮ್ಮ ಸಹಕಾರ ಆದ್ದರಿಂದ ಇನ್ಮುಂದೆ ಕೂಡ ಇದೆ ರೀತಿಯಲ್ಲಿ ಇರಲಿ ಎಂದು ವಿನಂತಿಸಿದರು.

Advertisement

ಇದು ತುರ್ತು ಸಂದರ್ಭದಲ್ಲಿ ದೂರದ ನಗರಗಳಿಗೆ ತೆರಳುವುದನ್ನು ತಪ್ಪಿಸಲು ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ.
ಕ್ಷೇತ್ರದ ಜನರ ಆರೋಗ್ಯ ಕಾಪಾಡುವ ಹಿತದೃಷ್ಟಿಹಿಂದ ಆಯುಷ್ಮಾನ್ ಭವ ಸುಸಜ್ಜಿತ 100 ಆಸಿಗೆ ಆಸ್ಪತ್ರೆ ನಿರ್ಮಾಣವಾಗುತ್ತದೆ. ಜನರ ಬೇಡಿಕೆಯಂತೆ ಇಂದು ಶಂಕುಸ್ಥಾಪನೆ ಭೂಮಿ ಪೂಜೆ ನೆರವೇರಿಸಿದ್ದೇವೆ ಆದಷ್ಟು ಬೇಗ ಕಾಮಗಾರಿಯನ್ನು ಪ್ರಾರಂಭಮಾಡಿ ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಶೀಘ್ರದಲ್ಲಿ ಆಸ್ಪತ್ರೆಯನ್ನು ಅನಾವರಣ ಮಾಡುತ್ತೇವೆ ಎಂದರು.

ಪ್ರಾರಂಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳು ಸೇರಿ ಪಟ್ಟಣದಲ್ಲಿ ಕಂಪ್ಲಿ ವಿಧಾನಸಭಾ ಕ್ಷೇತ್ರದ ಜೆ.ಎನ್.ಗಣೇಶ್ ಮತ್ತು ಆಸ್ಪತ್ರೆಗೆ ಸ್ಥಳದಾನಿಗಳಾದ ಹಿರೇಮಠ ರವೀಂದ್ರನಾಥ ಸ್ವಾಮಿ, ಎಚ್.ಎಮ್. ಪ್ರೇಮನಾಥ ಸ್ವಾಮಿ, ಎಚ್.ಎಮ್. ಕುಮಾರ್ ಸ್ವಾಮಿ, ಆರ್. ಎಮ್. ಗುರು ಕಾರುಣ್ಯ ಪ್ರಭು ಸ್ವಾಮಿ ಅವರನ್ನು ತೆರೆದ ವಾಹನದಲ್ಲಿ ಶ್ರೀ ದೊಡ್ಡಬಸವೇಶ್ವರ ದೇವಸ್ಥಾನದಿಂದ ಮೆರವಣಿಗೆ ಸಾಗಿ ದಾರಿಯುದ್ದಕ್ಕೂ ಕಳಸ ಸುಮಂಗಲೆಯರೊಂದಿಗೆ, ಪುರುಷರ ಎರಡು ತಂಡದಿಂದ ಡೊಳ್ಳು ಕುಣಿತ, ಕಹಳೆ, ವೀರಗಾಸೆ, ನಂದಿಕೊಲು, ಹಗಲು ವೇಷ ಕಲಾತಂಡ, ಉಲಿಯ ವೇಶಗರರು, ಬ್ಯಾಂಡ್ ಸೆಟ್, ತಾಸೆ ವಾದ್ಯ, ಕೋಲಾಟ, ಕಾಂತರ ದೈವ ಸೇರಿದಂತೆ ವಿವಿಧ ಜನಪದ ಕಲಾತಂಡಗಳು ಮೆರಗು ನೋಡುಗರ ಗಮನ ಸೆಳೆಯಿತು.

ನಾಡಗೌಡರ ಮುಖ್ಯ ವೃತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಶಾಸಕರಿಗೆ ಜೆಸಿಬಿ ಮೂಲಕ ಹೂವಿನ ಹಾರ ಹಾಕಿ ಕ್ಷೇತ್ರಕ್ಕೆ ಮತ್ತೊಮ್ಮೆ ಗಣೇಶ್ ಎಂದು ಸಂಭ್ರಮಿಸಿದರು. ಇದೇ ಮಾರ್ಗವಾಗಿ ಸಂಚರಿಸಿ ವದ್ದಟ್ಟಿ ರಸ್ತೆಯ ಪಕ್ಕದಲ್ಲಿರುವ 23ನೇ ವಾರ್ಡಿನ ಹಿರೇಮಠ ಕಾಲೋನಿ ಆಯುಷ್ಮಾನ್ ಭವ ಅಡಿಗಲ್ಲು ಕಾರ್ಯಕ್ರಮ ಸ್ಥಳಕ್ಕೆ ಮೆರವಣಿಗೆ ತಲುಪಿತು.

ಈ ಸಂದರ್ಭದಲ್ಲಿ ಕುರುಗೋಡು ಪಟ್ಟಣದ ಕೊಟ್ಟುರೇಶ್ವರ ಮಠದ ಶ್ರೀ ನಿರಂಜನ ಮಹಾಸ್ವಾಮಿಗಳು, ಎಮ್ಮಿಗನೂರು ಶ್ರೀ ವಮಾದೇವ ಶ್ರೀಗಳು, ಆಸ್ಪತ್ರೆಗೆ ಸ್ಥಳದಾನಿಗಳಾದ ಹಿರೇಮಠ ರವೀಂದ್ರನಾಥ ಸ್ವಾಮಿ, ಎಚ್.ಎಮ್. ಪ್ರೇಮನಾಥ ಸ್ವಾಮಿ, ಎಚ್.ಎಮ್. ಕುಮಾರ್ ಸ್ವಾಮಿ, ಆರ್. ಎಮ್. ಗುರು ಕಾರುಣ್ಯ ಪ್ರಭು ಸ್ವಾಮಿ, ಕಾಂಗ್ರೆಸ್ ಪಕ್ಷದ ಮುಖಂಡರು, ಯುವ ಮುಖಂಡರು, ಕಾರ್ಯಕರ್ತರು, ಪುರಸಭೆ ಸದಸ್ಯರು, ಸುತಮುತ್ತಲಿನ ಗ್ರಾಮದ ಕಾರ್ಯಕರ್ತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next