Advertisement

Census: ದೇಶದಲ್ಲೇ ಮೊದಲ ಬಾರಿಗೆ ಗಣತಿ ನಡೆಸಿದ್ದು ನಾನು: ಸಿಎಂ ಸಿದ್ದರಾಮಯ್ಯ

10:36 PM Nov 30, 2023 | Team Udayavani |

ಬೆಂಗಳೂರು: ಪ್ರತಿಯೊಂದು ಜಾತಿ ಸಮುದಾಯಗಳ ಆರ್ಥಿಕ, ಸಾಮಾಜಿಕ ಸ್ಥಿತಿಗತಿ ತಿಳಿಯುವುದಕ್ಕಾಗಿ ದೇಶದಲ್ಲೇ ಮೊದಲ ಬಾರಿಗೆ ನಾನೇ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಗಣತಿಯನ್ನು ಆರಂಭಿಸಿದೆ. ಬಳಿಕ ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅಲ್ಲಿ ಜಾರಿಗೆ ತಂದರು. ಆದರೆ 168 ಕೋ. ರೂ. ಖರ್ಚು ಮಾಡಿ ತಯಾರಿಸಿದ ಆ ವರದಿಯನ್ನು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ವಿರೋಧಿಸಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗುರುವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಭಿಕರು ಜನಗಣತಿ ಜಾರಿಯಾಗಬೇಕು ಎಂದು ಕೂಗು ಎಬ್ಬಿಸಿದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸಮ್ಮುಖದಲ್ಲೇ ಈ ಕೂಗು ಕೇಳಿಸಿದ್ದು ವಿಶೇಷವಾಗಿತ್ತು.

ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರು ಯಾಕೆ ವರದಿ ಸ್ವೀಕರಿಸಿಲ್ಲ ಎಂದು ನೀವು ಕೇಳಲಿಲ್ಲ. ಸಮಸಮಾಜ ನಿರ್ಮಾಣ ಆಗಬೇಕಾದರೆ ಜನಗಣತಿ ಜಾರಿಯಾಗಬೇಕು. ಜಾತಿ ಗಣತಿಗೆ ಕಾಂಗ್ರೆಸ್‌ ಬದ್ಧವಾಗಿದೆ. ಇಡೀ ದೇಶದಲ್ಲಿ ಜಾರಿ ಮಾಡಲು ಕಾಂಗ್ರೆಸ್‌ ಬದ್ದವಾಗಿದೆ ಎಂದರು.

ಕನಕಶ್ರೀ ಪ್ರಶಸ್ತಿ ತಡೆ ಹಿಡಿದಿದ್ದನ್ನು ಪ್ರಶ್ನಿಸಿದ್ದಿರಾ?
ಸುಖಾ ಸುಮ್ಮನೆ ಎಲ್ಲರಿಗೂ ಚಪ್ಪಾಳೆ ತಟ್ಟಬೇಡಿ. ನಿಮ್ಮಲ್ಲೊಂದು ತತ್ವ ಇರಲಿ. ಕಳೆದ 3 ವರ್ಷಗಳ ಆಡಳಿತ ಅವಧಿಯಲ್ಲಿ “ಕನಕಶ್ರೀ ಪ್ರಶಸ್ತಿ’ಯನ್ನು ಯಾಕೆ ಕೊಟ್ಟಿಲ್ಲ ಎಂದು ನೀವು ಹಿಂದಿನ ಸರಕಾರವನ್ನು ಪ್ರಶ್ನೆ ಮಾಡಲಿಲ್ಲ. ಕನಕದಾಸರ ತತ್ವಗಳು ಒಂದು ಜಾತಿಗೆ ಸೀಮಿತವಾಗಿದೆಯೇ ಎಂದು ಕೇಳಿದರು.

ಪ್ರಶಸ್ತಿ ಪ್ರದಾನ
ಕಾರ್ಯಕ್ರಮದಲ್ಲಿ ಸಮಾಜ ಸೇವಕ ದಿ| ಲಿಂಗಪ್ಪ ಅವರಿಗೆ ಮರಣೋತ್ತರವಾಗಿ “ಕನಕಶ್ರೀ’ ಪ್ರಶಸ್ತಿಯನ್ನು ಅವರ ಕುಟುಂಬದವರಿಗೆ ಪ್ರದಾನಿಸಲಾಯಿತು.
ತಿಂಥಣಿ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕಗುರು ಪೀಠದ ಸಿದ್ದರಾಮಾನಂದ ಸ್ವಾಮೀಜಿ ಮಾತನಾಡಿ, ಈ ಹಿಂದೆ ವಿಶ್ವೇಶ ತೀರ್ಥ ಶ್ರೀಗಳಿದ್ದಾಗ ಸಿಗುತ್ತಿದ್ದ ರೀತಿಯಲ್ಲಿಯೇ ಉಡುಪಿಯಲ್ಲಿ ಕನಕದಾಸರಿಗೆ ಮಾನ್ಯತೆ ಸಿಗಬೇಕಾಗಿದೆ ಎಂದು ಹೇಳಿದರು.

Advertisement

ಮಾಜಿ ಸಚಿವ ಎಚ್‌. ಎಂ. ರೇವಣ್ಣ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹಮದ್‌ ಮತ್ತಿತರರು ಇದ್ದರು.

ಮೂರು ವರ್ಷಗಳ ಹಿಂದೆ ಬಿಜೆಪಿ ಸರಕಾರ ಕನಕಶ್ರೀ ಪ್ರಶಸ್ತಿ ನೀಡುವುದನ್ನು ನಿಲ್ಲಿಸಿತ್ತು. ಪ್ರಶಸ್ತಿ ವಿಚಾರದಲ್ಲಿ ಸಣ್ಣ ತನ ತೋರುವುದು ಸರಿಯಲ್ಲ. ಆ ಹಿನ್ನೆಲೆಯಲ್ಲಿ ಜನರು ಬಿಜೆಪಿಗೆ ಸರಿಯಾದ ಉತ್ತರ ನೀಡಿದ್ದಾರೆ. ಈಗ ನಮ್ಮ ಸರಕಾರ ಕನಕಶ್ರೀ ಪ್ರಶಸ್ತಿಯನ್ನು ಮತ್ತೆ ಆರಂಭಿಸಿದೆ.
– ಡಿ.ಕೆ.ಶಿವಕುಮಾರ್‌, ಉಪ ಮುಖ್ಯಮಂತ್ರಿ

ಕನಕಶ್ರೀ ಪ್ರಶಸ್ತಿ ಆಯ್ಕೆಗೆ ಈ ವರ್ಷ ಸಮಿತಿ ರಚಿಸಲಿಲ್ಲ. ಇಲಾಖೆ ತಪ್ಪಿನಿಂದಾಗಿ ಪ್ರಶಸ್ತಿ ಬೆಳಗ್ಗಿನವರೆಗೂ ಘೋಷಣೆ ಆಗಿರಲಿಲ್ಲ. ಇನ್ನು ಮುಂದೆ ಪ್ರತಿವರ್ಷವೂ ಕನಕಶ್ರೀ ಪ್ರಶಸ್ತಿಯನ್ನು ಪ್ರದಾನಿಸಲಾಗುವುದು.
– ಶಿವರಾಜ ತಂಗಡಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next