Advertisement

ನನ್ನನ್ನಾಗಲಿ, ನನ್ನ ಪಕ್ಷವನ್ನಾಗಲಿ ಹೆದರಿಸಲು ಸಾಧ್ಯವಿಲ್ಲ: ರಾಹುಲ್‌ ಗಾಂಧಿ

12:58 AM Jun 23, 2022 | Team Udayavani |

ಹೊಸದಿಲ್ಲಿ: “ನನ್ನನ್ನು ವಿಚಾರಣೆ ಗೊಳ ಪಡಿಸುವ ಮೂಲಕ ನನ್ನನ್ನಾಗಲಿ, ನನ್ನ ಪಕ್ಷವನ್ನಾಗಲಿ ಹೆದರಿಸಲು ಸಾಧ್ಯವಿಲ್ಲ ಎಂಬುದು ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಮನದಟ್ಟಾಗಿದೆ’ ಹೀಗೆಂದು 5 ದಿನಗಳ ಕಾಲ ಇ.ಡಿ ವಿಚಾರಣೆ ಎದುರಿಸಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.

Advertisement

ಹೊಸದಿಲ್ಲಿಯಲ್ಲಿ ಕಾಂಗ್ರೆಸ್‌ ಪಕ್ಷದ ಪ್ರತಿ ಭಟನೆಯಲ್ಲಿ ಭಾಗವಹಿಸಿ, ಪಕ್ಷದ ನಾಯಕ ರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್‌, “ರಾಷ್ಟ್ರೀಯವಾದಿ ಎಂದು ಕರೆದುಕೊಳ್ಳುವ ಬಿಜೆಪಿ, ಅಗ್ನಿಪಥ ಯೋಜನೆ ಮೂಲಕ ಸೇನಾ ಪಡೆಗಳನ್ನು ದುರ್ಬಲಗೊಳಿಸಲು ಹೊರಟಿದೆ. ಪ್ರಧಾನಿ ಈ ಯೋಜನೆಯನ್ನು ಕೂಡಲೇ ಹಿಂಪಡೆಯಬೇಕು’ ಎಂದರು. ವಿಚಾರಣೆ ಸಮಯದಲ್ಲಿ ಪ್ರತಿಭಟನೆ ಮಾಡಿದ ನಾಯ ಕರು, ಕಾರ್ಯಕರ್ತರಿಗೆ ಧನ್ಯವಾದಗಳನ್ನೂ ಅರ್ಪಿಸಿದರು.

“12 ಗಂಟೆಗಳ ಕಾಲ ಸತತವಾಗಿ ವಿಚಾರಣೆ ಮಾಡಿದರೂ ನಾನು ಸುಸ್ತಾಗದೇ ಇರುವುದನ್ನು ನೋಡಿ ಖುದ್ದು ಇ.ಡಿ. ಅಧಿಕಾರಿಗಳೇ ದಂಗಾಗಿದ್ದರು. ನನ್ನ ತಾಳ್ಮೆ ಹಾಗೂ ಸಹನೆಯನ್ನು ಕೊಂಡಾಡಿದರು’ ಎಂದ ರಾಹುಲ್‌, ನಾನು ದಿನನಿತ್ಯ ವಿಪಶ್ಯನ ಮಾಡುತ್ತೇನೆ. ಹಾಗಾಗಿ ಸತತ ವಾಗಿ ಒಂದೇ ಜಾಗದಲ್ಲಿ ಕೂರಬಲ್ಲೆ ಎಂದು ಅಧಿಕಾರಿಗಳಿಗೆ ತಿಳಿಸಿದೆ ಎಂದರು.

ಜತೆಗೆ ಪಕ್ಷ ನನಗೆ ಸಹನೆ ಕಲಿಸಿದೆ ಎಂದ ರಾಹುಲ್‌, ರಾಜ ಸ್ಥಾನ ಕಾಂಗ್ರೆಸ್‌ ನಾಯಕ ಸಚಿನ್‌ ಪೈಲಟ್‌ರನ್ನು ತೋರಿಸುತ್ತಾ “ಕಾಂಗ್ರೆಸ್‌ನಲ್ಲಿ ರುವ ಎಲ್ಲರೂ ಸಹನಾಶೀಲರು ಎಂಬುದಕ್ಕೆ ಪೈಲಟ್‌ ಅವರೇ ಸಾಕ್ಷಿ’ ಎಂದಿದ್ದಾರೆ.
ಈ ವೇಳೆ ಮಾತನಾಡಿದ ಕಾಂಗ್ರೆಸ್‌ನ ಹಿರಿಯ ನಾಯಕ ಜೈರಾಂ ರಮೇಶ್‌, “”ರಾಷ್ಟ್ರವ್ಯಾಪಿ ಪಕ್ಷ ಜೋಡಣೆಗಾಗಿ ಕೈಗೊಳ್ಳ ಲಾಗುವ ಭಾರತ್‌ ಜೋಡೋ ಯಾತ್ರೆಯು ಅ. 2ರಂದು ಕಾಶ್ಮೀರದಿಂದ ಶುರುವಾಗಲಿದೆ” ಎಂದು ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next