Advertisement

ಶೀಘ್ರ ಬರಲಿದೆ ಕೊಳಚೆ ನೀರಿನಿಂದ ಓಡುವ ಕಾರು!

02:17 AM Dec 04, 2021 | Team Udayavani |

ಹೊಸದಿಲ್ಲಿ: ಚರಂಡಿ ಮತ್ತು ಕೊಳಚೆ ನೀರಿನಿಂದ ಓಡುವಂಥ ಕಾರುಗಳು ಬಂದರೆ ಹೇಗಿರುತ್ತದೆ. ಅತ್ಯುತ್ತಮ ಚಿಂತನೆ ಅಲ್ಲವೇ? ಹಾಗಾದರೆ ಪೆಟ್ರೋಲ್‌/ ಡೀಸೆಲ್‌ನ ಅಗತ್ಯವೂ ಇರಲಾರದು. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್‌ ಗಡ್ಕರಿ ಅವರಿಗೆ ವಿನೂತನ ಆಲೋಚನೆ ಹೊಳೆದಿದೆ.

Advertisement

ಹರಿಯಾಣದ ಫ‌ರೀದಾಬಾದ್‌ನ ತೈಲ ಸಂಶೋಧನ ಸಂಸ್ಥೆ ತ್ಯಾಜ್ಯದಿಂದಲೇ ಸಿದ್ಧಪಡಿಸಿರುವ ಇಂಧನ ಅಥವಾ ಹಸುರು ಜಲಜನಕದ ಮೂಲಕ ಸಂಚರಿಸಬಲ್ಲ ಕಾರನ್ನು ಪ್ರಯೋಗಾರ್ಥವಾಗಿ ತಯಾರಿಸಿದೆ. ಅದನ್ನು ತಾನು ಖರೀದಿ ಸಿರುವುದಾಗಿ ಹೇಳಿರುವ ಗಡ್ಕರಿ, ತಾನೇ ಅದನ್ನು ಚಲಾಯಿಸಿ ಪರ್ಯಾಯ ಇಂಧನದಿಂದಲೂ ಕಾರು ಚಲಿಸಲು ಸಾಧ್ಯ ವಿದೆ ಎಂಬುದನ್ನು ಶೀಘ್ರದಲ್ಲೇ ಸಾಬೀತು ಮಾಡುವುದಾಗಿ ಪ್ರಕಟಿಸಿದ್ದಾರೆ.

ಹೊಸದಿಲ್ಲಿಯಲ್ಲಿ ಆಯೋಜಿಸಲಾಗಿದ್ದ ಆರ್ಥಿಕ ಒಗ್ಗೂಡುವಿಕೆಗೆ ಸಂಬಂಧಿಸಿದ ಆರನೇ ಸಮ್ಮೇಳನದಲ್ಲಿ ಭಾಗ   ವಹಿಸಿದ ಸಂದರ್ಭದಲ್ಲಿ ಕೇಂದ್ರ ಸಚಿವರು ಈ ಮಾತುಗಳನ್ನಾಡಿದ್ದಾರೆ.

ಇದನ್ನೂ ಓದಿ:ದಶಕದ ಬೆಳವಣಿಗೆ ಕಂಡ ಸೇವಾ ಕ್ಷೇತ್ರ: ಪಿಎಂಐ

ಬಸ್‌, ಲಾರಿ, ಟ್ರಕ್‌ ಚಾಲನೆಯೂ ಸಾಧ್ಯ
ಹಸುರು ಜಲಜನಕದಿಂದ ದೇಶದ ಸಾರಿಗೆ ವ್ಯವಸ್ಥೆ ನಿರ್ವಹಣೆ ಯಾಗುವಂಥ ಹೊಸ ವ್ಯವಸ್ಥೆ ಜಾರಿಗೊಳಿಸಲು ಆಸಕ್ತಿ ಹೊಂದಿರುವುದಾಗಿ ಗಡ್ಕರಿ ತಿಳಿಸಿದ್ದಾರೆ. ತ್ಯಾಜ್ಯ ದಿಂದ ಮೌಲ್ಯಯುತ ಇಂಧನ ತಯಾರಿಸುವ ಪರಿಕಲ್ಪನೆಯಡಿ, ಕೊಳಚೆ ನೀರನ್ನು ಬಳಸಿ ಹಸುರು ಜಲಜನಕವನ್ನು (ಗ್ರೀನ್‌ ಹೈಡ್ರೋಜನ್‌) ತಯಾರಿಸುವ ಹೊಸ ಪರಿಕಲ್ಪನೆ ವಿಶ್ವದ ನಾನಾ ರಾಷ್ಟ್ರಗಳಲ್ಲಿ ಈಗಾಗಲೇ ಚಾಲ್ತಿಯಲ್ಲಿದೆ. ಪ್ರತೀ ನಗರಗಳಲ್ಲಿ ಉತ್ಪಾದನೆಯಾಗುವ ಕೊಳಚೆ ನೀರು ಅಥವಾ ಮಳೆಯ ರಾಡಿ ನೀರನ್ನು ಬಳಸಿ ಹಸುರು ಜಲಜನಕವನ್ನು ಉತ್ಪಾದಿಸಬಹುದಾಗಿದೆ. ಅದರ ಮೂಲಕ ಬಸ್‌, ಲಾರಿ, ಟ್ರಕ್‌ ಹಾಗೂ ಕಾರುಗಳನ್ನು ಚಲಾಯಿಸುವಂಥ ವ್ಯವಸ್ಥೆ ಜಾರಿಗೊಳಿಸುವ ಯೋಜನೆಯನ್ನು ಹೊಂದಿದ್ದೇನೆ ಎಂದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next