Advertisement

ರಾಜಣ್ಣನ ಧೈರ್ಯ ಮೆಚ್ಚುತ್ತೇನೆ

09:40 AM Sep 23, 2017 | Team Udayavani |

ಬೆಂಗಳೂರು: ಪಕ್ಷದಲ್ಲೇ ಇದ್ದು ಪಕ್ಷದ ನಾಯಕರ ವಿರುದ್ಧ ಮಾತನಾಡುತ್ತಿರುವ ಮಧುಗಿರಿ ಶಾಸಕ ಕೆ.ಎನ್‌.ರಾಜಣ್ಣ ಅವರ ಧೈರ್ಯಕ್ಕೆ ಆರೋಗ್ಯ ಸಚಿವ ರಮೇಶ್‌ ಕುಮಾರ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ರಾಜಣ್ಣ ಕಾಂಗ್ರೆಸ್‌ ವಿರುದ್ಧ ಆರೋಪ ಮಾಡಿಲ್ಲ. ಪಕ್ಷದಲ್ಲಿರುವ ಕೆಲವರ ವಿರುದ್ಧ ಮಾತನಾಡಿದ್ದಾರೆ. ಅದಕ್ಕೂ ಧೈರ್ಯ ಬೇಕು. ಕಾಂಗ್ರೆಸ್‌ನಲ್ಲಿದ್ದುಕೊಂಡು ಎಲ್ಲವೂ ಸರಿ ಇಲ್ಲದಿದ್ದಾಗ ಅಂತಹ ಹೇಳಿಕೆ ನೀಡಲೂ ಧೈರ್ಯ ಬೇಕು’ ಎಂದು ಹೇಳಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂ ರಾವ್‌ ಹೇಳಿಕೆಗೆ ಆಕ್ಷೇಪಿಸಿದ ರಮೇಶ್‌ ಕುಮಾರ್‌, “ದಿನೇಶ್‌ಗೆ ಅನುಭವದ ಕೊರತೆ ಇದೆ. ಐಟಿ ದಾಳಿಗೂ ಎಸ್‌.ಎಂ.ಕೃಷ್ಣರಿಗೂ ಸಂಬಂಧ ಕಲ್ಪಿಸುವುದು ಸರಿಯಲ್ಲ. ಎಸ್‌.ಎಂ.ಕೃಷ್ಣ ಒಬ್ಬ ಪರಿಪಕ್ವ ರಾಜಕಾರಣಿ’ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next