ಮೈಸೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಿಂದೂವಲ್ಲ. ನಾನೇ ನಿಜವಾದ ಹಿಂದೂ ಎಂದು ಸಿಎಂ ಸಿದ್ದರಾಮಯ್ಯ ಮತ್ತೆ ಪ್ರತಿ ಪಾದಿಸಿದ್ದಾರೆ.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಏರ್ಪಡಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು,ಅಮಿತ್ ಶಾ ಕರ್ನಾಟಕಕ್ಕೆ
ಬಂದು ಸಿದ್ದರಾಮಯ್ಯ ಅಹಿಂದು ಅಂತಾರೆ, ಆದರೆ ಅಮಿತ್ ಶಾ ಹಿಂದೂವೇ ಅಲ್ಲ. ಅವರು ಜೈನರು.ಅವರು ಹಿಂದೂ ವೈಷ್ಣವ ಅನ್ನುವುದೆಲ್ಲ ಸುಳ್ಳು. ಬೇಕಿದ್ದರೆ ದಾಖಲೆ ತೆಗಿಸಿ ನೋಡಿ. ಇವರೆಲ್ಲರಿಗಿಂತ ನಾನು ಬೆಟರ್ ಹಿಂದೂ. ನನಗೆ ಮನುಷ್ಯತ್ವ, ಮಾನವೀಯ ಮೌಲ್ಯಗಳಲ್ಲಿ ನಂಬಿಕೆ ಇದೆ.
ಬಿಜೆಪಿಯರಿಗೆ ಮನುಷ್ಯತ್ವವೂ ಇಲ್ಲ. ಮಾನವೀಯ ಮೌಲ್ಯವೂ ಇಲ್ಲ. ಹೆಣದ ಮೇಲೆ ರಾಜಕೀಯ ಮಾಡುತ್ತಾರೆ ಎಂದು ದೂರಿದರು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಸತ್ತ 23 ಜನರನ್ನು ಬಿಜೆಪಿಯವರು ಅಂತಾರೆ. ಆದರೆ, 12 ಜನ ಮಾತ್ರ ಬಿಜೆಪಿಯವರು. ಉಳಿದ 11 ಜನರಲ್ಲಿ ಕಾಂಗ್ರೆಸ್ ಮತ್ತು ಬೇರೆಯವರು ಮೃತಪಟ್ಟಿದ್ದಾರೆ. ಅಂಕಿಅಂಶಗಳನ್ನು ನೋಡಿದರೆ ಬಿಜೆಪಿ ಆಡಳಿತಾವಧಿಯಲ್ಲೇ ಅಪರಾಧ ಪ್ರಕರಣಗಳು ಹೆಚ್ಚಾಗಿವೆ. ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಇಲ್ಲಿ ಬಂದು ಮಾತನಾಡುತ್ತಾರೆ. ಇವರಿಗೆ ಯಾವ ನೈತಿಕತೆ ಇದೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಟೀಕಿಸಲು ಎಂದು ಹರಿಹಾಯ್ದರು.
ನನಗೆ ಪ್ರಧಾನಿ ಆಗುವ ಆಸೆ ಇಲ್ಲ. ಕಾಗಿನೆಲೆಯ ನಿರಂಜನಾನಂದಪುರಿ ಸ್ವಾಮೀಜಿ ಅವರಿಗೆ ನಾನು ಪ್ರಧಾನಮಂತ್ರಿ ಆಗಬೇಕೆಂಬ ಆಸೆ ಇರಬಹುದು.ಅದು ತಪ್ಪೇನಲ್ಲ.
– ಸಿದ್ದರಾಮಯ್ಯ, ಮುಖ್ಯಮಂತ್ರಿ