Advertisement
ಸುರೇಂದ್ರ ಬಂಟ್ವಾಳ್‌ನ ಆಪ್ತ ಸತೀಶ್ ಎನ್ನುವಾತ ಮಾತನಾಡುತ್ತಿರುವ ರೀತಿಯಲ್ಲಿ ರೆಕಾರ್ಡ್ ಮಾಡಿರುವ ಆಡಿಯೋ ಹೊರಬಂದಿದ್ದು, ಅದರಲ್ಲಿ ಆತ ಕೊಲೆ ಮಾಡಿರುವುದು ಒಪ್ಪಿಕೊಂಡಿರುವ ಜತೆಗೆ ಇತ್ತೀಚೆಗಷ್ಟೇ ಹಿರಿಯಡಕದಲ್ಲಿ ಕೊಲೆಯಾದ ರೌಡಿಶೀಟರ್ ಇನ್ನ ಕಿಶನ್ ಹೆಗ್ಡೆ ಕೊಲೆಗೆ ಪ್ರತೀಕಾರವಾಗಿ ಈ ಕೊಲೆ ನಡೆದಿದೆ ಎಂದು ಹೇಳಿದ್ದಾನೆ. ಆದರೆ ಈ ಆಡಿಯೋವನ್ನು ಯಾರು ಮಾಡಿದ್ದಾರೆ ಎನ್ನುವುದು ಸ್ಪಷ್ಟವಾಗಿಲ್ಲ. ತನಿಖೆಯ ಬಳಿಕ ತಿಳಿಯಬೇಕಿದೆ.
ಮುಂದುವರಿದ ಆಡಿಯೋದಲ್ಲಿ ಮೊನ್ನೆ ನಡೆದ ಕಿಶನ್ ಹೆಗ್ಡೆ ಕೊಲೆಯಲ್ಲಿ ಇವನು ಹಣದ ಸಹಾಯ ಮಾಡಿರುವ ವಿಷಯ ನನಗೆ ತಿಳಿದಿತ್ತು. ನಾನು ಅವನ ಹತ್ತಿರ ಹೇಳಿದ್ದೆ, ನೀನು ತಪ್ಪು ಮಾಡುತ್ತಿದ್ದೀಯ ಸುರೇಂದ್ರ, ನಿನಗೆ ಬೇಡದ ವಿಷಯ. ಆಗ ಈ ವಿಷಯ ಹೊರಗಡೆ ಹೇಳಿದ್ರೆ ನಿನ್ನನ್ನು ಸಾಯಿಸುತ್ತೇನೆ ಅಂತ ನನಗೇ ಬೆದರಿಕೆ ಹಾಕಿದ್ದ. ಮೊನ್ನೆ ಅನಾಮಿಕ ಯುವಕನಿಗೆ ಕರೆ ಮಾಡಿ ಜೈಲಿನಲ್ಲಿರೋ ಮನೋಜನಿಗೆ ಹಣ, ಬಟ್ಟೆ ಕೊಡಲಿಕ್ಕಿದೆ. ಇದಕ್ಕೆ ನಿಮ್ಮ ಸಹಾಯ ಬೇಕು ಅಂತಾ ಹೇಳುತ್ತಿದ್ದ. ಮತ್ತೂಂದು ದಿನ ರಾತ್ರಿ ಕರೆ ಮಾಡಿ ಬಟ್ಟೆ, ಹಣ ತಲುಪಿಸಿದ್ದೇನೆ. ಸಹಾಯ ಮಾಡಿದ್ದಕ್ಕಾಗಿ ಥ್ಯಾಂಕ್ಸ್ ಅಂತಾ ಹೇಳಿದ್ದನ್ನು ನಾನು ಕೇಳಿದ್ದೇನೆ. ಮತ್ತೆ ಈ ವಿಚಾರದಲ್ಲಿ ನಾನು ಕಿಶನ್ ಜತೆ ಇದ್ದ ನನ್ನ ಗೆಳೆಯನಿಗೆ ಕರೆ ಮಾಡಿ ತಿಳಿಸಿದೆ. ಅವನಿಗೆ ಈ ವಿಚಾರದಲ್ಲಿ ಕೋಪ ಮತ್ತು ಬೇಸರ ಕೂಡ ಇತ್ತು. ಇವನು ಇದೇ ರೀತಿ ಇದ್ದರೆ ಸುರೇಂದ್ರ ಮತ್ತು ಕೋಡಿಕೆರೆ ಮನೋಜನಿಂದ ಹಲವು ಯುವಕರ ಕೊಲೆಯಾಗುವುದರಲ್ಲಿ ಸಂಶಯವಿಲ್ಲ. ಅದಕ್ಕಾಗಿ ನಾವು ಈ ಕೊಲೆ ಮಾಡಿದ್ದೇವೆ. ನಾವೀಗ ಕಾರವಾರದಲ್ಲಿದ್ದು, ಏನು ಮಾಡಬೇಕೆಂದು ತೋಚದೆ ಇಲ್ಲಿಗೆ ಬಂದಿದ್ದೇವೆ. 2-3 ದಿನದಲ್ಲಿ ಪೊಲೀಸರಿಗೆ ಶರಣಾಗುತ್ತೇವೆ ಎಂದು ಆಡಿಯೋದಲ್ಲಿ ಮಾತನಾಡಿರುವ ವ್ಯಕ್ತಿ ಹೇಳಿದ್ದು, ಆದರೆ ಇದರ ಸತ್ಯಾಸತ್ಯತೆ ಏನು ಎನ್ನುವುದು ತನಿಖೆಯಿಂದ ತಿಳಿಯಬೇಕಿದೆ.
Related Articles
ಸುರೇಂದ್ರ ಅವರ ಮೃತದೇಹದ ಅಂತ್ಯಕ್ರಿಯೆ ಗುರುವಾರ ಬಂಟ್ವಾಳದ ಬಡ್ಡಕಟ್ಟೆಯ ಶ್ಮಶಾನದಲ್ಲಿ ನಡೆಯಿತು. ಮೃತದೇಹವನ್ನು ಬಂಟ್ವಾಳ ಕಲಾಯಿಯ ಮನೆಗೆ ತಂದು ಅಲ್ಲಿ ಅಂತಿಮ ವಿಧಿವಿಧಾನಗಳನ್ನು ಪೂರೈ ಸಿದ ಬಳಿಕ ಬಡ್ಡಕಟ್ಟೆಯ ಶ್ಮಶಾನಕ್ಕೆ ಸಾಗಿಸಲಾಗಿದ್ದು, ಈ ವೇಳೆ ನೂರಾರು ಮಂದಿ ಭಾಗಿಯಾಗಿದ್ದರು.
Advertisement
ವೈರಲ್ ಆದ ಆಡಿಯೋದಲ್ಲಿ ಏನಿದೆ?ನಮಸ್ತೆ ನಾನು ಸತೀಶ್ ಮಾತನಾಡೋದು. ನಿನ್ನೆ ರಾತ್ರಿ ವಸ್ತಿ ಅಪಾರ್ಟ್‌ಮೆಂಟ್‌ನಲ್ಲಿ ಸುರೇಂದ್ರನ ಹತ್ಯೆಯಾಗಿದ್ದು, ಅದನ್ನು ನಾನೇ ಮಾಡಿದ್ದೇನೆ. ಇದು ಕಿಶನ್ ಹೆಗ್ಡೆ ಸಾವಿಗೆ ಪ್ರತೀಕಾರ. ಸುರೇಂದ್ರ ಬಡ್ಡಿ ವ್ಯವಹಾರ ಮಾಡಿ ಗಳಿಸುತ್ತಿದ್ದ ಹಣವನ್ನು ಅಂತಹ ಒಳ್ಳೆಯ ಜನರ ಸಾವಿಗೆ ಉಪಯೋಗಿಸುತ್ತಿದ್ದ. ನಾನು 22 ವರ್ಷದಿಂದ ಸುರೇಂದ್ರನ ಒಟ್ಟಿಗೆ ಇದ್ದು, ಅವನ ಎಲ್ಲ ಅವ್ಯವಹಾರಗಳು ಗೊತ್ತಿತ್ತು ಎಂದಿದ್ದಾನೆ.