Advertisement

‘ನನ್ನನ್ನು ನಂಬಿ; ನಾನೇ ನಿಜವಾದ ಮೊಹಮ್ಮದು’!

10:48 AM Dec 04, 2018 | Team Udayavani |

ಕಟೋವಿಸ್‌ (ಪೋಲಂಡ್‌): ಅನಾರೋಗ್ಯದಲ್ಲಿರುವ ನೈಜೀರಿಯಾದ ಅಧ್ಯಕ್ಷ ಮೊಹಮ್ಮದು ಬುಹಾರಿ ಅವರು ನಿಧನ ಹೊಂದಿದ್ದು, ಅದನ್ನು ಗೌಪ್ಯವಾಗಿಸಿರುವ ಸರಕಾರ ಅವರಂತೆಯೇ ಇರುವ ವ್ಯಕ್ತಿಯೊಬ್ಬನನ್ನು ಸುಡಾನ್‌ನಿಂದ ಕರೆತಂದು ಅಧ್ಯಕ್ಷ ಗಾದಿಯಲ್ಲಿ ಕೂರಿಸಿದೆ ಎಂಬ ವದಂತಿಗಳನ್ನು ಖುದ್ದು ಮೊಹಮ್ಮದು ಬುಹಾರಿ ಅವರೇ ನಿರಾಕರಿಸಿದ್ದಾರೆ.

Advertisement

ಹವಾಮಾನ ವೈಪರೀತ್ಯ ತಡೆಗಾಗಿ ಪೋಲಂಡ್‌ನ‌ ಕಟೋವಿಸ್‌ನಲ್ಲಿ ರವಿವಾರ ನಡೆದ ಕೋಪ್‌ 24 ಸಮ್ಮೇಳನದಲ್ಲಿ ಭಾಗವಹಿಸಿದ್ದ ಅವರು, ಅಲ್ಲಿನ ನೈಜೀರಿಯಾ ಪ್ರಜೆಗಳು ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದರು. ‘ನಾನು ನಿಜವಾದ  ಮೊಹಮ್ಮದು. ಇತ್ತೀಚೆಗೆ ಅನಾರೋಗ್ಯಕ್ಕೀಡಾಗಿದ್ದು ನಿಜ. ಆದರೆ ಸತ್ತಿಲ್ಲ. ಸದ್ಯದಲ್ಲೇ ನನ್ನ 76ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದೇನೆ. ನನಗೆ ಯಾರೂ ತದ್ರೂಪಿಯಿಲ್ಲ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next