ಚಿಕ್ಕಬಳ್ಳಾಪುರ: ನಾನು ಈಗಲೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಕಟ್ಟಾ ಬೆಂಬಲಿಗ ಎಂದು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಅನರ್ಹ ಶಾಸಕ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮಂಚೇನಹಳ್ಳಿಯಲ್ಲಿ ಬುಧವಾರ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸಿದ್ದರಾಮಯ್ಯ ನವರ ಕಟ್ಟಾ ಬೆಂಬಲಿಗನಾಗಿದ್ದೆ, ಈಗಲೂ ಇದ್ದೇನೆ. ಆದರೆ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಉಸಿರುಗಟ್ಟುವ ವಾತಾವರಣ ಇದ್ದ ಕಾರಣ ರಾಜೀನಾಮೆ ನೀಡಬೇಕಾಯಿತು ಎಂದರು.
37 ಸ್ಥಾನ ಪಡೆದಿದ್ದ ಜೆಡಿಎಸ್ ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಟ್ಟ ತಪ್ಪಾಯಿತು. ನಿಜವಾಗಿ ಕಾಂಗ್ರೆಸ್‌ಗೆ ಸಿಎಂ ಸ್ಥಾನ ಸಿಗಬೇಕಿತ್ತು. ಆದರೂ ನಮಗೆ ಸುವರ್ಣ ಅವಕಾಶ ಸಿಕ್ತು ಎಂದು ಕಾಂಗ್ರೆಸ್ ಶಾಸಕರ ಋಣ ತೀರಿಸುವುದರ ಬದಲು ಕಾಂಗ್ರೆಸ್ ಶಾಸಕರನ್ನು ಸಿಎಂ ಕುಮಾರಸ್ವಾಮಿ ಟಾರ್ಗೆಟ್ ಮಾಡಿದ್ದರೆಂದರು.
ಸಮ್ಮಿಶ್ರ ಸರ್ಕಾರದಲ್ಲಿನ ಆಡಳಿತ ಹಾಗೂ ಅಭಿವೃದ್ಧಿಯ ವಿಫಲತೆಯಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆಂದರು.
ಈ ಸಂದರ್ಭದಲ್ಲಿ ತಾ.ಪಂ ಸದಸ್ಯರಾದ ಬಾಲಕೃಷ್ಣ, ಕೋಚಿಮುಲ್ ಮಾಜಿ ನಿರ್ದೇಶಕರಾದ ಸುಬ್ಬಾರೆಡ್ಡಿ, ಮುಖಂಡರಾದ ಕಲಿನಾಯಕನಹಳ್ಳಿ ಗೋಪಿನಾಥ್, ವೇಣುಗೋಪಾಲರೆಡ್ಡಿ, ಸುದರ್ಶನರೆಡ್ಡಿ, ನಾರಾಯಣಸ್ವಾಮಿ, ರಿಯಾಜ಼್, ನಂಜುಂಡಪ್ಪ, ಹರೀಶ್, ಶಿವಕುಮಾರ್, ಈಶ್ವರ್, ಟಿಪಿಎಸ್ ವೆಂಕಟೇಶ್, ಗಂಗಾಧರ್, ಅಬೀಬ್, ಕಾಮಣ್ಣ, ಶ್ರೀಧರ್, ಪ್ರಕಾಶ್, ಶ್ರೀನಿವಾಸಗೌಡ, ರಮೇಶ್ ರೆಡ್ಡಿ, ಅಶೋಕ್, ಇನ್ನೂ ಮುಂತಾದವರು ಹಾಜರಿದ್ದರು.