Advertisement

ಭರವಸೆ ಈಡೇರಿಸಿದ ತೃಪ್ತಿ ನನಗಿದೆ

05:41 PM Mar 12, 2018 | Team Udayavani |

ಶಹಾಪುರ: ಆಯಾ ಪಟ್ಟಣಗಳು ಎಷ್ಟರಮಟ್ಟಿಗೆ ಅಭಿವೃದ್ಧಿ ಹೊಂದಿವೆ ಎಂಬುದನ್ನು ಅಳೆಯಲು ಆ ಕ್ಷೇತ್ರ ಪ್ರವೇಶಿಸುವ ರಸ್ತೆಗಳಿಂದಲೇ ತಿಳಿಯಬಹುದು ಎಂದು ಶಾಸಕ ಗುರು ಪಾಟೀಲ್‌ ಶಿರವಾಳ ಹೇಳಿದರು.

Advertisement

ತಾಲೂಕಿನ ಮಡ್ನಾಳ ಗ್ರಾಮದಲ್ಲಿ ಮಡ್ನಾಳದಿಂದ ಇಂಗಳಿಗಿ ಗ್ರಾಮದವರೆಗೆ 2 ಕೋಟಿ 47 ಲಕ್ಷ ರೂ. ವೆಚ್ಚದ ಡಾಂಬರೀಕರಣ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಎಚ್‌ಕೆಆರ್‌ಡಿಬಿ 2017-18
ಯೋಜನೆಯಡಿ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ಪಡೆಯಲಾಗಿದೆ. ಅದರಲ್ಲಿ ಈ ಯೋಜನೆಯೊಂದಾಗಿದೆ.

ಮೊದಲ ಬಾರಿಗೆ ಶಾಸಕನಾಗಿ ಆಯ್ಕೆಯಾದ ಮೇಲೆ ನಾಗರಿಕರಿಗೆ ನೀಡಿದ ಭರವಸೆಯಂತೆ ಕ್ಷೇತ್ರದಲ್ಲಿ
ಸಮರ್ಪಕವಾಗಿ ರಸ್ತೆ, ಚರಂಡಿ, ಕುಡಿಯುವ ನೀರು ಮತ್ತು ಶೌಚಾಲಯ ವ್ಯವಸ್ಥೆ ಶೇ. 90ರಷ್ಟು ಒದಗಿಸುವಲ್ಲಿ ಸಫಲನಾಗಿದ್ದೇನೆ. 

ಉಳಿದಡೆ ಒಂದಿಷ್ಟು ಬಾಕಿ ಕೆಲಸಗಳು ಇರಬಹುದು. ಆದರೆ ಪ್ರತಿ ಹಳ್ಳಿಯಲ್ಲಿ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ
ಇತರೆ ಮೂಲ ಸೌಲಭ್ಯಗಳನ್ನು ಒದಗಿಸಿದ್ದೇನೆ. ಕಾಮಗಾರಿ ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ಜನರ ಕಾಳಜಿಯು ಅಗತ್ಯವಿದೆ. ಕಾಮಗಾರಿ ಜವಾಬ್ದಾರಿ ಹೊತ್ತ ಗುತ್ತಿಗೆದಾರರು ಮತ್ತು ಸಂಬಂಧಿ ಸಿದ ಇಲಾಖೆ ಅಧಿಕಾರಿಗಳು ಸಹ ಪ್ರಾಮಾಣಿಕವಾಗಿ ಕರ್ತವ್ಯ ನಿಭಾಯಿಸಬೇಕು ಎಂದರು.

ಈ ಸಂದರ್ಭದಲ್ಲಿ ಮಾಜಿ ಎಂಎಲ್ಸಿ ಅಮಾತೆಪ್ಪ ಕಂದಕೂರ, ಚನ್ನಪ್ಪಗೌಡ ಪಾಟೀಲ್‌, ಸಾಯಬಣ್ಣ ಸಿರನೇತಿ,
ಸಿದ್ದು ಮಡ್ನಾಳ, ಬಸವರಾಜಪ್ಪಗೌಡ ಕಂದಕೂರ, ಮೈಲಾರಪ್ಪ ಕಂದಕೂರ, ಶರಣಗೌಡ ಪಾಟೀಲ್‌, ಮಾರ್ತಾಂಡಪ್ಪ ಕಂದಕೂರ, ಗ್ರಾಪಂ ಸದಸ್ಯ ಶಿವಪ್ಪ ಮತ್ತು ಮಾಜಿ ಗ್ರಾಪಂ ಸದಸ್ಯರಾದ ಶಂಕ್ರಪ್ಪ, ಅಂಬಲಪ್ಪ, ಮಲ್ಲಪ್ಪ ಇದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next