ಮೈಸೂರು: ಚುನಾವಣಾ ರಾಜಕಾರಣದಿಂದ ನಾನು ನಿವೃತ್ತಿ ಪಡೆಯುತ್ತೇನೆ. ಆದರೆ ನಾನು ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ. ಮುಂಬರುವ ವಿಧಾನಸಭಾ ಚುನಾವಣೆಯೇ ನನ್ನ ಕೊನೆಯ ಚುನಾವಣೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಮೈಸೂರಿನ ಸಿದ್ದರಾಮನ ಹುಂಡಿಯಲ್ಲಿ ಮಾತನಾಡಿದ ಅವರು, ಮುಂದಿನ ಚುನಾವಣೆ ಗೆ ಬಹಳಷ್ಟು ಕ್ಷೇತ್ರದ ನಾಯಕರು ತಮ್ಮಲ್ಲಿ ಸ್ಪರ್ಧಿಸುವಂತೆ ಕರೆಯುತ್ತಿದ್ದಾರೆ. ನಾನು ಇನ್ನೂ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂದು ನಿರ್ಧರಿಸಿಲ್ಲ. ಚುನಾವಣೆಗೆ ಇನ್ನೂ ಒಂದು ವರ್ಷವಿದೆ. ಈಗಲೇ ಈ ಬಗ್ಗೆ ತೀರ್ಮಾನ ಮಾಡುವುದಿಲ್ಲ ಎಂದರು.
ವರುಣಾ, ಚಾಮುಂಡೇಶ್ವರಿ, ಹುಣಸೂರು ಕ್ಷೇತ್ರದಿಂದಲೂ ಒತ್ತಡವಿದೆ. ರಾಜಕೀಯ ಜನ್ಮಕೊಟ್ಟ ಚಾಮುಂಡೇಶ್ವರಿ ಕ್ಷೇತ್ರದ ಜನರೇ ನನ್ನನ್ನು ಸೋಲಿಸಿದರು. ಅವರು ನನ್ನ ಸೋಲಿಸಿದರೆಂದು ನಾನು ಅವರನ್ನು ದ್ವೇಷಿಸಲ್ಲ. ಈಗ ಅವರೇ ಮತ್ತೆ ಸ್ಪರ್ಧೆಗೆ ಕರೆಯುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ:ಪರೀಕ್ಷೆಯಲ್ಲಿ ಭಾರತದ ಭೂಪಟದಲ್ಲಿ ಕಾಶ್ಮೀರದ ಒಂದು ಭಾಗವೇ ಇಲ್ಲ!
ಪಕ್ಷಾತೀತರಾಗಿರಬೇಕು: ಸ್ಪೀಕರ್ ಅವರು ಗುರುವಾರ ಆ ಕುರ್ಚಿಯಲ್ಲಿ ಕುಳಿತು ನಮ್ಮ ಆರ್ ಎಸ್ಎಸ್ ಎಂದಿದ್ದು ತಪ್ಪು. ಸ್ಪೀಕರ್ ಆದ ತಕ್ಷಣ ಅವರು ಪಕ್ಷಾತೀತರಾಗಿರಬೇಕು. ಆದರೆ, ನಿನ್ನೆ ನಮ್ಮ ಆರ್ ಎಸ್ಎಸ್ ಎಂದಿದ್ದು ಸರಿಯಲ್ಲ. ನಾವು ಯಾವಗಲೂ ಆರ್ ಎಸ್ಎಸ್ ಗೆ ವಿರೋಧವಿದ್ದೇವೆ. ಏಕೆಂದರೆ ಆರ್ ಎಸ್ಎಸ್ ನವರದ್ದು ಮನುವಾದ ಸಂಸ್ಕೃತಿ. ಸ್ವಾತಂತ್ರ್ಯಕ್ಕೆ ಆರ್ ಎಸ್ಎಸ್ ಹೋರಾಡಿಲ್ಲ. ಸಮಾಜ ಒಡೆಯುವುದೇ ಆರ್ ಎಸ್ ಎಸ್ ಅಜೆಂಡಾ. ಇದಕ್ಕೆ ನಾನು ಆರ್ ಎಸ್ಎಸ್ ವಿರೋಧಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.