ಶಿವಮೊಗ್ಗ:”ಆರೋಪ ಮುಕ್ತನಾದ ಮೇಲೆ ಸಚಿವ ಸ್ಥಾನ ನೀಡುವುದಾಗಿ ಸಿಎಂ, ರಾಜ್ಯಾಧ್ಯಕ್ಷರು, ಬಿಎಸ್ ವೈ ಮಾತು ಕೊಟ್ಟಿದ್ದರು.ಯಾಕೆ ಕೊಟ್ಟಿಲ್ಲ ಅವರನ್ನೇ ಕೇಳಬೇಕು” ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.
ಸಚಿವ ಸ್ಥಾನ ನೀಡುವ ವಿಚಾರಕ್ಕೆ ಸಂಬಂಧಿಸಿ ಮಾತನಾಡಿ, ”ಮದುವೆ ಆಗಲು ಗಂಡು ಸಿದ್ಧ,ಅದಕ್ಕಾಗಿ ಯಾರನ್ನೂ ಸಂಪರ್ಕಿಸಿಲ್ಲ, ಸಂಪರ್ಕಿಸುವುದೂ ಇಲ್ಲ. ಯಾಕೆ ಮಂತ್ರಿ ಸ್ಥಾನ ನೀಡಿಲ್ಲ ಅವರಿಗೇ ಗೊತ್ತು. ಆದಷ್ಟು ಬೇಗ ಸಂಪುಟ ವಿಸ್ತರಣೆ ಮಾಡಲಿ” ಎಂದರು.
ಇದನ್ನೂ ಓದಿ: ಕಲ್ಯಾಣ ಕರ್ನಾಟಕದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ: ಸಿಎಂ ಬೊಮ್ಮಾಯಿ
”ಸಚಿವಗಿರಿ ನೀಡಿಲ್ಲ ಅಂತ ಸಂಘಟನೆಗೆ ತೊಂದರೆ ಮಾಡುವುದಿಲ್ಲ.ರಾಜೀನಾಮೆಗೂ ಸಂಘಟನೆಗೂ ಸಂಬಂಧವಿಲ್ಲ.ಹಿಂದುಳಿದ ವರ್ಗದ ಮತವನ್ನು ಕ್ರೋಢೀಕರಿಸುವ ನಿಟ್ಟಿನಲ್ಲಿ ನಾನು ಕೆಲಸ ಮಾಡಲಿದ್ದೇನೆ” ಎಂದರು.
”ಆರೋಪ ಮುಕ್ತನಾಗುತ್ತಿದ್ದಂತೆ ನನಗೆ ಸಚಿವ ಸ್ಥಾನ ನೀಡುವುದಾಗಿ ಯಡಿಯೂರಪ್ಪ, ನಳೀನ್ ಕುಮಾರ್ ಕಟೀಲ್ ಮತ್ತಿತರರು ಹೇಳಿದ್ದರು.ಈಗ ಆರೋಪ ಮುಕ್ತನಾಗಿದ್ದೇನೆ. ಹಾಗಾಗಿ ನಾನು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ಬಾಂಬೆ ಟೀಮ್ ಗೆ ಯಾವ ಭರವಸೆ ನೀಡಿದ್ದರು ನನಗೆ ಗೊತ್ತಿಲ್ಲ.ಆದರೆ ನಾನು ಮಾತ್ರ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದೇನೆ” ಎಂದು ಹೇಳಿಕೆ ನೀಡಿದ್ದಾರೆ.