Advertisement

ಭಾರತದ ಸ್ನೇಹ, ಮಾತುಕತೆ ಮೂಲಕ ಕಾಶ್ಮೀರ ವಿವಾದ ಬಗೆಹರಿಲಿ; ಖಾನ್

06:35 PM Jul 26, 2018 | Sharanya Alva |

ಇಸ್ಲಾಮಾಬಾದ್: ಭಾರತ ಜೊತೆ ಉತ್ತಮ ಸಂಬಂಧ ಹೊಂದಬೇಕೆಂಬುದೇ ನಮ್ಮ ಆಶಯ. ಸುಮಾರು 22ವರ್ಷಗಳ ಹೋರಾಟಕ್ಕೆ ಇಂದು ಪ್ರತಿಫಲ ಸಿಕ್ಕಿದೆ ಮತ್ತು ದೇಶಸೇವೆ ಮಾಡಲು ಅವಕಾಶ ಕಲ್ಪಿಸಿದ್ದೀರಿ ಎಂದು ಪಾಕಿಸ್ತಾನ ತೆಹ್ರೀಕ್ ಇ ಇನ್ಸಾಫ್ ನ ವರಿಷ್ಠ ಇಮ್ರಾನ್ ಖಾನ್ ತಿಳಿಸಿದ್ದಾರೆ.

Advertisement

ಪಾಕಿಸ್ತಾನ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಬಳಿಕ ಮೊದಲ ಬಾರಿಗೆ ಪಿಟಿಐ ಮುಖ್ಯಸ್ಥ ಖಾನ್ ಗುರುವಾರ ಸಂಜೆ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತ, ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದರು.

ಹಲವಾರು ದಶಕಗಳಷ್ಟು ಹಳೆಯದಾದ ಕಾಶ್ಮೀರ ವಿವಾದವನ್ನು ಭಾರತ ಜೊತೆಗಿನ ಮಾತುಕತೆಯ ಮೂಲಕ ಮಾತ್ರವೇ ಪರಿಹರಿಸಲು ಸಾಧ್ಯ ಎಂದು ಹೇಳಿದರು. ಮಹಮ್ಮದ್ ಅಲಿ ಜಿನ್ನಾ ಅವರ ಕನಸಿನ ಪಾಕಿಸ್ತಾನ ಕಟ್ಟುವುದೇ ನಮ್ಮ ಗುರಿ, ಆ ಕನಸನ್ನು ನನಸು ಮಾಡುವ ಮೂಲಕ ದೇಶ ಸೇವೆ ಮಾಡುವುದಾಗಿ ಖಾನ್ ತಿಳಿಸಿದರು.

ಕಾಶ್ಮೀರಿ ಜನರು ತುಂಬಾ ನೋವನ್ನು ಅನುಭವಿಸಿದ್ದಾರೆ. ಒಂದು ವೇಳೆ ಭಾರತ ಮುಂದಾಳತ್ವ ವಹಿಸಿ ಕಾಶ್ಮೀರ ವಿವಾದವನ್ನು ಮಾತುಕತೆ ಮೂಲಕ ಉಭಯ ದೇಶಗಳು ಬಗೆಹರಿಸಲು ಇಚ್ಚಿಸಿದರೆ ನಾವು ಅದಕ್ಕೆ ಕೈಜೋಡಿಸುವುದಾಗಿ ಇಮ್ರಾನ್ ಅಭಿಪ್ರಾಯವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next