ಚಿಕ್ಕಮಗಳೂರು: ನಾನು ಬಿಜೆಪಿ ಪಕ್ಷದ ಮಾಲೀಕನಲ್ಲ, ನಾನು ಪಕ್ಷದ ಕಾರ್ಯಕರ್ತ. ಮಾಲೀಕ ಎನ್ನುವ ಭಾವನೆ ಅವತ್ತು ಇರಲಿಲ್ಲ, ಇಂದೂ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಮ್ಮ ವಿರುದ್ಧ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಅಸಮಾಧಾನಗೊಂಡಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು.
ನಾನು ಬಿಜೆಪಿ ಪಕ್ಷದ ಮಾಲೀಕನಲ್ಲ. ಎಂ.ಪಿ ಕುಮಾರಸ್ವಾಮಿ ನಮ್ಮ ಮಾಲೀಕರು. ನಾನು ಸದಾ ಕಾಲ ಪಕ್ಷದ ನಿಷ್ಠೆಯಿಂದ ಕೆಲಸ ಮಾಡುವವನು. ಹಾಗೇ ಏನಾದರೂ ಮಾಲೀಕತ್ವ ಪ್ರಶ್ನೆ ಬಂದರೆ ಕುಮಾರಸ್ವಾಮಿಯೇ ಮಾಲೀಕರು, ನಾನು ಯಾವತ್ತೂ ಸಹ ಮಾಲೀಕನ ರೀತಿ ವರ್ತನೆ ಮಾಡಿಲ್ಲ ಎಂದರು.
ಇದನ್ನೂ ಓದಿ:ಕಾಂಗ್ರೆಸ್ ನವರಿಗೆ ದೂರಲು ಮೋದಿ ಬೇಕು, ಒಳ್ಳೆಯದಾದರೆ ಮೋದಿ ಬೇಡ: ಸಿ.ಟಿ.ರವಿ
ವರ್ಗಾವಣೆ ಆದೇಶವನ್ನು ಮಾಡುವ ಅಧಿಕಾರ ನನಗಿಲ್ಲ. ವರ್ಗಾವಣೆ ಶಿಫಾರಸ್ಸು ಯಾರು ಬಂದರು ಮಾಡುತ್ತೇನೆ. ಒಳ್ಳೆಯ ಅಧಿಕಾರಿಗಳು ನಮ್ಮ ಜಿಲ್ಲೆಗೆ ಬರಬೇಕು ಎನ್ನುವುದಷ್ಟೇ ಉದ್ದೇಶ. ಎಂ.ಪಿ ಕುಮಾರಸ್ವಾಮಿಯವರ ಜೊತೆ ನಾನು ಮಾತನಾಡುತ್ತೇನೆ ಎಂದರು.