Advertisement

ಯಾವುದೇ ಸ್ಥಾನಮಾನ ಬೇಡ- ಹೈಕಮಾಂಡ್ ನಿರ್ಧಾರಕ್ಕೆ ಬದ್ಧ: ಡಿಕೆ ಶಿವಕಮಾರ್

08:23 AM Jul 26, 2019 | Nagendra Trasi |

ಬೆಂಗಳೂರು: ಕಾಂಗ್ರೆಸ್, ಜೆಡಿಎಸ್ ಮೈತ್ರಿ ನಿರ್ಧಾರ ರಾಹುಲ್ ಗಾಂಧಿ ಅವರದ್ದು. ನಮ್ಮ ಪಕ್ಷದ ಹೈಕಮಾಂಡ್ ಏನು ಹೇಳುತ್ತದೆಯೋ ಹಾಗೆ ನಾನು ಕೆಲಸ ಮಾಡುತ್ತೇನೆ ಎಂದು ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

Advertisement

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮೈತ್ರಿ ಮಾಡಿಕೊಂಡು 14 ತಿಂಗಳು ನಾವು ಜೆಡಿಎಸ್ ಒಟ್ಟಿಗೆ ಕೆಲಸ ಮಾಡಿದ್ದೇವೆ. ಇಷ್ಟು ದಿನಗಳ ಕಾಲ ಜತೆಗೆ ಹೋರಾಟ ಮಾಡಿ ಇವತ್ತು ಸರ್ಕಾರ ಬಿತ್ತು ಎಂಬ ಕಾರಣಕ್ಕೆ ಅವರೊಂದಿಗೆ ರಂಪ ಮಾಡಿಕೊಳ್ಳಲು ನಾನು ಸಿದ್ಧವಿಲ್ಲ. ಹಾಗೇನಾದ್ರು ನಾವು ಮಾಡಿದರೆ ಜನ ನಮಗೆ ಉಗಿತಾರೆ. ದೇವೇಗೌಡರು ಹಾಗೂ ಹೈಕಮಾಂಡ್ ನಾಯಕರು ದೆಹಲಿಯಲ್ಲಿ ಏನಾದ್ರೂ ತೀರ್ಮಾನ ಮಾಡಲಿ. ಅವರು ಏನು ಹೇಳ್ತಾರೋ ಅದನ್ನು ನಾವು ಕೇಳ್ತೀವಿ. ಬೇರೆಯವರು ಏನು ಹೇಳ್ತಾರೋ ಗೊತ್ತಿಲ್ಲ. ಡಿಕೆ ಶಿವಕುಮಾರ್ ಆಗಿ ನಾನು ಪಕ್ಷದ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ.

ಯಾವುದೇ ಸ್ಥಾನಮಾನ ಬೇಡ!

ನನಗೆ ಪಕ್ಷದಲ್ಲಿ ಯಾವುದೇ ಸ್ಥಾನಮಾನ ಬೇಡ. ನನಗೆ ಅದರ ಅವಶ್ಯಕತೆನೂ ಇಲ್ಲ. ಈಗಿರುವ ಸ್ಥಾನಮಾನವನ್ನು ನನ್ನ ಕ್ಷೇತ್ರದ ಜನತೆ ಕೊಟ್ಟಿದ್ದಾರೆ. ನನಗೆ ಅಷ್ಟೇ ಸಾಕು. ನಮ್ಮ ಪಕ್ಷ ಮಂತ್ರಿ ಸ್ಥಾನ ನೀಡಿತ್ತು. ಅದು ಈಗ ಇಲ್ಲ. ನಾನು ಸಮಾಧಾನವಾಗಿಯೇ ಇದ್ದೀನಿ. ಇಲ್ಲಿ ನೋಡಿ ನನಗೆ ಯಾವುದೇ ಅಧಿಕಾರ ಇಲ್ಲದಿದ್ದರೂ ಹೇಗೆ ಜನ ಬಂದು ನಿಂತಿದ್ದಾರೆ. ನಮಗೆ ಇದೇ ಸಾಕು. ಇನ್ನು ಸ್ಪೀಕರ್, ಕೋರ್ಟ್ ವಿಚಾರವಾಗಿ ಹೊರತಾಗಿ ನೀವು ಬೇರೆ ಯಾವುದೇ ವಿಚಾರವಾಗಿ ಪ್ರಶ್ನೆ ಕೇಳಿ. ಸಂವಿಧಾನಿಕ ಸಂಸ್ಥೆಗಳ ವಿಚಾರವಾಗಿ ನಾನು ಪ್ರತಿಕ್ರಿಯಿಸುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next