Advertisement

ರೌಡಿಶೀಟರ್ ರಾಜಕಾರಣದ ಬಗ್ಗೆ ನನಗೆ ಆಸಕ್ತಿ ಇಲ್ಲ: ಹೆಚ್.ಡಿ.ಕುಮಾರಸ್ವಾಮಿ

04:48 PM Dec 04, 2022 | Team Udayavani |

ಕೊರಟಗೆರೆ: ರೌಡಿಶೀಟರ್ ರಾಜಕಾರಣದ ಬಗ್ಗೆ ನನಗೆ ಆಸಕ್ತಿ ಇಲ್ಲ.ನನಗೆ ಬಡವರ ನೋವು ನೀಗಿಸುವುದು ಮುಖ್ಯ. ರಾಜ್ಯದ ಎಲ್ಲಾ ಇಲಾಖೆಗಳಲ್ಲಿ ಮೇಜರ್ ಸರ್ಜರಿಯ ಅವಶ್ಯಕತೆ ಇದೆ. ಇಲ್ಲವಾದರೇ ಜನಸಾಮಾನ್ಯರು ಬದುಕಲು ಸಾಧ್ಯವಿಲ್ಲ. ಕರ್ನಾಟಕ ಜಂಗಲ್ ರಾಜ್ ರಾಜ್ಯ ಆಗುತ್ತಿದೆ. ಹೀಗಾಗಿ ಪ್ರಾದೇಶಿಕ ಅಸ್ಮಿತೆ ಇರುವ ಜನರ ಸಮಸ್ಯೆ ಕೇಳುವ ಜನನಾಯಕರ ಅವಶ್ಯಕತೆ ಇದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಭಾನುವಾರ ಹೇಳಿಕೆ ನೀಡಿದ್ದಾರೆ.

Advertisement

ಕೊರಟಗೆರೆ ವಿಧಾನಸಭಾ ಕ್ಷೇತ್ರದ ಚನ್ನರಾಯನದುರ್ಗ ಹೋಬಳಿ ತೋವಿನಕೆರೆ ಗ್ರಾಪಂ ಕೇಂದ್ರಸ್ಥಾನದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಪಂಚರತ್ನ ಯೋಜನೆಯ ರಥಯಾತ್ರೆ, ರೈತರ ಜೊತೆ ಸಂವಾದ ಮತ್ತು ಗ್ರಾಮ ವಾಸ್ತವ್ಯ ಕಾರ್ಯಕ್ರಮದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಬಯಲುಸೀಮೆ ಕ್ಷೇತ್ರಗಳಾದ ಕೊರಟಗೆರೆ, ಮಧುಗಿರಿ ಮತ್ತು ಪಾವಗಡ ಕ್ಷೇತ್ರಗಳು ಅಭಿವೃದ್ದಿ ವಂಚಿತವಾಗಿ ಹೀನಾಯ ಪರಿಸ್ಥಿತಿಗೆ ತಲುಪಿವೆ. ನಾನು ಅಧಿಕಾರಕ್ಕೆ ಬಂದರೆ ಬಯಲುಸೀಮೆ ಗಡಿಜಿಲ್ಲೆಗಳ ಅಭಿವೃದ್ದಿಗೆ ಪ್ರತಿವರ್ಷ 1 ಸಾವಿರ ಕೋಟಿ ರೂ. ಅನುದಾನ ಮೀಸಲು ಇಡುತ್ತೇನೆ ಎಂದು ಭರವಸೆ ನೀಡಿದರು.

ಕರ್ನಾಟಕ ರಾಜ್ಯ ರಾಜಧಾನಿಯಿಂದ ಗಡಿಜಿಲ್ಲೆಯ ೩ಕ್ಷೇತ್ರಗಳು ಕೇವಲ 70 ಕೀಮೀ ಅಂತರದಲ್ಲಿವೆ. ಅಭಿವೃದ್ದಿ ಕಾಣದೇ ಗ್ರಾಮೀಣ ಪ್ರದೇಶಗಳು ತುಂಬಾ ಹಿಂದುಳಿದಿವೆ. ಗಡಿ ಗ್ರಾಮಗಳ ಬಡಜನರ ನೋವು ಆಲಿಸುವ ನಾಯಕರು ನಮಗೆ ಅವಶ್ಯಕತೆ ಇದೆ. ಕೊರಟಗೆರೆಯ ಪ್ರವಾಸದ ವೇಳೆ ವಿದ್ಯಾರ್ಥಿನಿಯಿಂದ ನನಗೇ ಜ್ಞಾನೋದಯ ಆಗಿದೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೇ ಗಡಿಭಾಗದ ನಾಲ್ಕೈದು ಜಿಲ್ಲೆಗಳಿಗೆ ಪ್ರತಿವರ್ಷ1 ಸಾವಿರ ಕೋಟಿ ರೂ. ಅನುದಾನ ಬಿಡುಗಡೆ ಮಾಡುತ್ತೇನೆ ಎಂದರು.

ಗೊಲ್ಲರಹಟ್ಟಿಯ ಹೆಣ್ಣುಮಗುವಿನ ಶೈಕ್ಷಣಿಕ ವ್ಯಾಸಂಗದ ವೇದನೆಯ ನೋವಿನ ಮಾತಿನಿಂದ ನನಗೇ ಜ್ಞಾನೋದಯ ಆಗಿದೆ. ಕಾಟಚಾರಕ್ಕೆ ಮಾತ್ರ ಸರಕಾರ ವಿದ್ಯಾರ್ಥಿಗಳಿಗೆ ಬಸ್‌ಪಾಸ್ ನೀಡಿದೆ, ಆದರೇ ಗ್ರಾಮೀಣ ಭಾಗಕ್ಕೆ ಸರಕಾರಿ ಬಸ್ಸಿನ ವ್ಯವಸ್ಥೆಯೇ ಇಲ್ಲ. ಕೊರಟಗೆರೆ ಕ್ಷೇತ್ರದಲ್ಲಿ ಸೇತುವೆ ಮತ್ತು ರಸ್ತೆಗಳು ನಾಶವಾಗಿ ಸುಗಮ ಸಂಚಾರಕ್ಕೆ ರೈತರಿಗೆ ಸಮಸ್ಯೆ ಎದುರಾಗಿದೆ. ರಥಯಾತ್ರೆಯ ವೇಳೆ 50 ರಿಂದ 60 ಹಳ್ಳಿಯ ಜನತೆ ಸಮಸ್ಯೆಗಳ ಸರಮಾಲೆಯನ್ನೇ ನನಗೇ ಮನವರಿಕೆ ಮಾಡಿದ್ದಾರೆ ಎಂದರು.

Advertisement

ಬಡವರ ಬಂಧು ಯೋಜನೆಗೆ ಆಗ್ರಹ

ಬಡವರ ಬಂಧು ಯೋಜನೆಯ ಮೂಲಕ ಕರ್ನಾಟಕ ರಾಜ್ಯದ ಎಲ್ಲಾ ಬೀದಿಬದಿಯ ವ್ಯಾಪಾರಿಗಳಿಗೆ ಸಹಾಯ ಮಾಡಿದ್ದೀರಾ. ಬೀದಿಬದಿಯ ವ್ಯಾಪ್ಯಾರಿಗಳಿಗೆ ವಸತಿ ಸೌಲಭ್ಯ, ಪಟ್ಟಣ ವ್ಯಾಪಾರ ವಲಯ, ಬಡ್ಡಿ ರಹಿತ ಸಾಲ ಸೌಲಭ್ಯ, ಉಚಿತ ಶಿಕ್ಷಣ ನೀಡಬೇಕಿದೆ. ಕೊರಟಗೆರೆ ಪಟ್ಟಣದ ಬೀದಿಬದಿ ವ್ಯಾಪಾರಿಗಳ ವಹಿವಾಟಿಗೆ ಸ್ಥಳಾವಕಾಶವಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿಯವರಿಗೆ ಮನವಿ ಸಲ್ಲಿಸಿ ಬಡವರ ಬಂಧು ಯೋಜನೆ ಮತ್ತೆ ಪ್ರಾರಂಭಕ್ಕೆ ಸರಕಾರಕ್ಕೆ ಆಗ್ರಹಿಸುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಕೊರಟಗೆರೆ ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್, ಜಿಲ್ಲಾ ಕಾರ್ಯದರ್ಶಿ ಮಹಾಲಿಂಗಪ್ಪ, ಕೊರಟಗೆರೆ ಕಾರ್ಯಾಧ್ಯಕ್ಷ ನರಸಿಂಹರಾಜು, ತೋವಿನಕೆರೆ ಗ್ರಾಪಂ ಅಧ್ಯಕ್ಷ ನಾಗರಾಜು, ಉಪಾಧ್ಯಕ್ಷೆ ನರಸಮ್ಮ, ಮುಖಂಡರಾದ ವೆಂಕಟೇಶ್, ಶ್ರೀನಿವಾಸ್, ವಿಜಯಕುಮಾರ್, ಶ್ರೀಧರ್, ರಂಗೇಗೌಡ, ರಮೇಶ್, ಅರುಣ್, ಸುರೇಶ್, ಮಧು, ಸುಜಾತರಮೇಶ್, ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next