Advertisement

‘ನಾನು ಪ್ರಧಾನ ಮಂತ್ರಿ ರೇಸ್‌ ನಲ್ಲಿಲ್ಲ’: ನಿತಿನ್‌ ಗಡ್ಕರಿ

11:32 AM Mar 10, 2019 | |

ನವದೆಹಲಿ: ಒಂದುವೇಳೆ ಮುಂಬರುವ ಲೋಕಸಭಾ ಚುನಾವಣೆಯ ಬಳಿಕ ಅತಂತ್ರ ಪರಿಸ್ಥಿತಿ ಸೃಷ್ಟಿಯಾದ ಪಕ್ಷದಲ್ಲಿ ನರೇಂದ್ರ ಮೋದಿಯವರ ಬದಲಿಗೆ ನಿತಿನ್‌ ಗಡ್ಕರಿ ಅವರು ಎನ್‌.ಡಿ.ಎ. ಮಿತ್ರಪಕ್ಷಗಳ ಒಮ್ಮತದ ಪ್ರಧಾನಿ ಅಭ್ಯರ್ಥಿಯಾಗಬಹುದು ಎಂಬ ವಾದ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ. ಆದರೆ ಈ ಗುಸುಗುಸುಗಳಿಗೆ ಸ್ಪಷ್ಟ ಉತ್ತರವನ್ನು ನೀಡಿರುವ ಕೇಂದ್ರದ ಪ್ರಭಾವಿ ಸಚಿವರಲ್ಲೊಬ್ಬರಾಗಿರುವ ನಿತಿನ್‌ ಗಡ್ಕರಿಯವರು, ‘ತಾವು ಎಂದೂ ಪ್ರಧಾನಿಯಾಗುವ ಕನಸನ್ನು ಕಂಡವನಲ್ಲ ಮತ್ತು ನಾನು ಪ್ರಧಾನಿ ರೇಸ್‌ ನಲ್ಲೂ ಇಲ್ಲ’ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ‘ರಾಜಕೀಯದಲ್ಲಾಗಲೀ, ಕೆಲಸದಲ್ಲಾಗಲೀ ನಾನೆಂದೂ ಲೆಕ್ಕಾಚಾರ ಹಾಕಿ ಕೆಲಸ ಮಾಡಿದವನಲ್ಲ, ಮತ್ತು ಎಂದೂ ಗುರಿಯಿರಿಸಿಕೊಂಡವನಲ್ಲ. ದಾರಿಯೆಲ್ಲಿಗೆ ಸಾಗುತ್ತದೆಯೋ ಆ ಕಡೆಗೆ ಸಾಗುತ್ತಾ ಬಂದವ ನಾನು, ನನ್ನ ಕಣ್ಣಿಗೆ ಬಿದ್ದ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಾ ಬಂದವನು, ಮತ್ತು ಆ ಮೂಲಕ ದೇಶಕ್ಕೆ ಉತ್ತಮವಾದುದನ್ನೇ ನೀಡುವುದರಲ್ಲಿ ನಂಬಿಕೆ ಇಟ್ಟವನು’ ಎಂದು ಪಿಟಿಐ ಸುದ್ಧಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ನಿತಿನ್‌ ಗಡ್ಕರಿ ಅವರು ತಿಳಿಸಿದರು.

Advertisement

‘ಪ್ರಧಾನ ಮಂತ್ರಿ ಪಟ್ಟಕ್ಕೆ ನನ್ನ ಅಭ್ಯರ್ಥಿತನದ ವಿಚಾರಕ್ಕೆ ಸಂಬಂಧಿಸಿದಂತೆ ನನ್ನ ಮನಸ್ಸಿನಲ್ಲಾಗಲೀ ಅಥವಾ ರಾಷ್ಟ್ರೀಯ ಸ್ವಯಂ ಸೇವಾ ಸಂಘಟನೆಯ ವಲಯದಲ್ಲಾಗಲೀ ಅಂತಹ ಯಾವುದೇ ವಿಚಾರಗಳಿಲ್ಲ ಎಂಬುದನ್ನು ಬಿ.ಜೆ.ಪಿ.ಯ ಈ ಹಿರಿಯ ನಾಯಕ ಸ್ಪಷ್ಟಪಡಿಸಿದರು. ‘ನಾನು ಯಾವುದೇ ರೀತಿಯಲ್ಲಿ ಕನಸು ಕಾಣುವ ವ್ಯಕ್ತಿಯಲ್ಲ, ವಶೀಲಿ ಬಾಜಿ ಮಾಡಲೂ ನನಗೆ ತಿಳಿದಿಲ್ಲ.. ಮತ್ತಿದನ್ನು ನಾನು ನನ್ನ ಹೃದಯದಿಂದ ಹೇಳುತ್ತಿದ್ದೇನೆ’ ಎಂದು ಗಡ್ಕರಿ ತಿಳಿಸುವ ಮೂಲಕ ಎನ್‌.ಡಿ.ಎ. ಮಿತ್ರಪಕ್ಷಗಳ ಮುಂದಿನ ಪ್ರಧಾನಿ ಅಭ್ಯರ್ಥಿ ಕುರಿತಾಗಿ ರಾಜಕೀಯ ವಲಯದಲ್ಲಿ ಎದ್ದಿರುವ ಸಂಶಯಗಳಿಗೆ ಸ್ಪಷ್ಟ ತೆರೆ ಎಳೆಯುವ ಪ್ರಯತ್ನವನ್ನು ಸಚಿವ ಗಡ್ಕರಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next