Advertisement

ನಾ ರೋಬೋಟ್‌ ಅಲ್ಲ; ದೇಹ ಬೇಡಿದಾಗ ವಿಶ್ರಾಂತಿ ಪಡೆವೆ: ಕೊಹ್ಲಿ

03:58 PM Nov 15, 2017 | Team Udayavani |

ಕೋಲ್ಕತ : ಭಾರತೀಯ ಕ್ರಿಕೆಟ್‌ ತಂಡದ ಯಶಸ್ವೀ ನಾಯಕ ವಿರಾಟ್‌ ಕೊಹ್ಲಿ ಅವರು ಲಂಕೆಯ ವಿರುದ್ಧದ 2ನೇ ಕ್ರಿಕೆಟ್‌ ಟೆಸ್ಟ್‌ ಪಂದ್ಯದ ಬಳಿಕ ಮತ್ತು ಅನಂತರದ ಏಕದಿನ ಕ್ರಿಕೆಟ್‌ ಸರಣಿಗೆ ವಿಶ್ರಾಂತಿಯನ್ನು ಬಯಸಿದ್ದಾರೆ ಎಂಬ ಮಾಧ್ಯಮಗಳ ಸ್ವಕಲ್ಪಿತ  ವರದಿಗಳಿಗೆ ಅಸಮಾಧಾನ, ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Advertisement

“ನನಗೆ ಬೇಕು ಅನ್ನಿಸಿದಾಗ ನಾನು ವಿಶ್ರಾಂತಿಯನ್ನು ಕೇಳಿ ಪಡೆಯುತ್ತೇನೆ. ಆ ಬಗ್ಗೆ ಯಾವುದೇ ವದಂತಿಗಳನ್ನು ಹರಡುವುದು ಸರಿಯಲ್ಲ’ ಎಂದು ಖಾರವಾಗಿ ವಿರಾಟ್‌ ಕೊಹ್ಲಿ ನುಡಿದರು. 

ಮುಖ್ಯ ರಾಷ್ಟ್ರೀಯ ಆಯ್ಕೆಗಾರ ಎಂಎಸ್‌ಕೆ ಪ್ರಸಾದ್‌ ಅವರು ಕೊಹ್ಲಿ ವಿಶ್ರಾಂತಿ ಕುರಿತಾದ ಎಲ್ಲ ವದಂತಿಗಳನ್ನು ಸಾರಾಸಗಟು ಅಲ್ಲಗಳೆದರು. 

ಕೊಹ್ಲಿ ಅವರು ಲಂಕಾ ವಿರುದ್ಧದ ಮೂರೂ ಟೆಸ್ಟ್‌ ಪಂದ್ಯಗಳಿಗೆ ತಾನು ಆಯ್ಕೆಗೆ ಲಭ್ಯನಿದ್ದೇನೆ ಎಂದು ತಿಳಿಸಿದ್ದಾರೆ. ಅನಂತರವಷ್ಟೇ ಆಯ್ಕೆಗಾರರು ಅವರಿಗೆ ವಿಶಾಂತಿ ನೀಡುವುದನ್ನು ಪರಿಗಣಿಸಬಹುದು ಎಂದು ಪ್ರಸಾದ್‌ ಹೇಳಿದರು. 

“ನಿಜಕ್ಕಾದರೆ ಇತರ ಎಲ್ಲ ದಣಿದ ಆಟಗಾರರಂತೆ ನನಗೂ ವಿಶ್ರಾಂತಿ ಬೇಕು. ನನ್ನ ದೇಹ ನಿಜಕ್ಕೂ ವಿಶ್ರಾಂತಿಯನ್ನು ಬೇಡಿದಾಗ ನಾನು ಖಂಡಿತವಾಗಿಯೂ ಅದನ್ನು ಕೇಳಿ ಪಡೆಯುತ್ತೇನೆ. ನಾನು ರೋಬೋಟ್‌ ಅಲ್ಲ; ನೀವು ನನ್ನ ಚರ್ಮವನ್ನು ಕತ್ತರಿಸಿದಾಗ ರಕ್ತ ಸುರಿಯುವುದನ್ನು ಕಾಣಬಹುದು”
ಎಂದು ಕೊಹ್ಲಿ ಲಂಕೆಯ ಎದುರಿನ ಗುರುವಾರದ ಮೊದಲ ಟೆಸ್ಟ್‌ ಪಂದ್ಯದ ಮುನ್ನಾ ದಿನ ಕೋಲ್ಕತಾದ ಈಡನ್‌ ಗಾರ್ಡನ್ಸ್‌ ನಲ್ಲಿ ಹೇಳಿದರು. 

Advertisement

ಹಾರ್ದಿಕ ಪಾಂಡ್ಯ ಲಂಕೆ ಎದುರಿನ ಮೊದಲೆರಡು ಟೆಸ್ಟ್‌ ಪಂದ್ಯಗಳಿಂದ ವಿಶ್ರಾಂತಿ ಬಯಸಿ ಹೊರಗುಳಿದಿದ್ದಾರಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಕೊಹ್ಲಿ, “ಫೀಲ್ಡ್‌ನಲ್ಲಿ ಆ ನಮೂನೆಯ ಹೆಚ್ಚುವರಿ ನಿರ್ವಹಣೆ ತೋರುವ ಆಟಗಾರನಿಗೆ ವಿಶ್ರಾಂತಿ ಬೇಕೇನಿಸುವುದು ಸರಿಯೇ. ಆ ಸ್ಥಿತಿಯನ್ನು ಯಾರೂ ಸರಿಯಾಗಿ ಅರ್ಥಮಾಡಿಕೊಳ್ಳಲಾರರು” ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next