ಬೆಳಗಾವಿ: “ಸಚಿವ ಸಂಪುಟ ವಿಸ್ತರಣೆ ಯಾವಾಗ ಮಾಡಬೇಕು, ಯಾರನ್ನು ಮಾಡಬೇಕು ಎಂಬುದು ಪಕ್ಷದ ನಾಯಕರು ನಿರ್ಧರಿಸುತ್ತಾರೆ. ಸಚಿವ ಸ್ಥಾನದ ಆಕಾಂಕ್ಷಿ ನಾನಲ್ಲ. ಕ್ಷೇತ್ರದ ಅಭಿವೃದಿಟಛಿಯಲ್ಲಿ ಮುಂದುವರಿಯುತ್ತೇನೆ’ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಟಾಳಕರ್ ಹೇಳಿದರು.
ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯ ಸರ್ಕಾರವು ಕಬ್ಬಿನ ದರ ಸೇರಿ ರೈತರ ಪರವಾಗಿ ಕೈಗೊಳ್ಳುವ
ನಿರ್ಧಾರಕ್ಕೆ ನಮ್ಮೆಲ್ಲರ ಸಹಮತವಿದೆ. ಪ್ರಸ್ತುತ ಹಂಗಾಮಿನಲ್ಲಿ ತಮ್ಮ ಮಾಲೀಕತ್ವದ ಸಕ್ಕರೆ ಕಾರ್ಖಾನೆ ಕಬ್ಬು ನುರಿಸಲು ಆರಂಭಿಸಿದೆ. ಹಾಗಾಗಿ ನಮ್ಮಲ್ಲಿ ಕಬ್ಬಿನ ಬಾಕಿ ಹಣ ನೀಡುವ ಸಮಸ್ಯೆ ಉದ್ಭವಿಸುವುದಿಲ್ಲ.
ಹೊಸದಾಗಿ ಸಕ್ಕರೆ ಕಾರ್ಖಾನೆ ಆರಂಭಿಸಿದ್ದರಿಂದ ಕಬ್ಬಿರ ದರ ಮೊದಲಾದ ವಿಷಯಗಳ ಸಾಧಕ-ಬಾಧಕ ಕುರಿತು ಗಮನ ಹರಿಸಲಾಗುತ್ತಿದೆ. ರೈತರ ಹಿತದೃಷ್ಟಿಯಿಟ್ಟು ಕೊಂಡು ಕಾರ್ಖಾನೆ ಆರಂಭಿಸಿದ್ದರಿಂದ ರೈತರಿಗೆ ಅನ್ಯಾಯ ಮಾಡುವುದಿಲ್ಲ ಎಂದರು.