Advertisement

Karnataka Election ಕನಕಪುರದಲ್ಲಿ ನಾನು ಅಭ್ಯರ್ಥಿಯೇ ಅಲ್ಲ: ಶೃಂಗೇರಿಯಲ್ಲಿ ಡಿಕೆಶಿ

08:45 PM Apr 22, 2023 | Team Udayavani |

ಚಿಕ್ಕಮಗಳೂರು : ”ಕನಕಪುರದಲ್ಲಿ ನಾನು ಅಭ್ಯರ್ಥಿಯೇ ಅಲ್ಲ. ಪ್ರತಿ ಮನೆಯಲ್ಲೂ ಡಿ ಕೆ ಶಿವಕುಮಾರ್ ಇದ್ದಾನೆ ಅವರೇ ಅಭ್ಯರ್ಥಿಗಳು, ನಾನು ನಾಮಪತ್ರ ಸಲ್ಲಿಸಿದ್ದೇನೆ ಅಷ್ಟೇ. ಉಳಿದದ್ದೆಲ್ಲ ಅವರೇ ಮಾಡಿಕೊಳ್ಳುತ್ತಾರೆ” ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಶನಿವಾರ ಸಂಜೆ ಹೇಳಿಕೆ ನೀಡಿದ್ದಾರೆ.

Advertisement

ಶೃಂಗೇರಿಯಲ್ಲಿ ಚಂಡಿಕಾಯಾಗ ಸಂಕಲ್ಪದಲ್ಲಿ ಭಾಗಿಯಾಗುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ, ”ನನ್ನ ಚುನಾವಣಾ ಪ್ರಚಾರ ಶೃಂಗೇರಿ ಕ್ಷೇತ್ರದಿಂದ ಆರಂಭ. ಬೆಳಗ್ಗೆ ಧರ್ಮಸ್ಥಳ ಮಂಜುನಾಥ ಸ್ವಾಮಿ, ಈಗ ಶಾರದಾಂಬೆ ದರ್ಶನ ಮಾಡಿ ಪ್ರಾರ್ಥಿಸಿದ್ದೇನೆ. ಯಾವ ಯಾಗ ಪೂಜೆ ಮಾಡಬೇಕೆಂಬುದು ಭಕ್ತ ಹಾಗೂ ತಾಯಿಗೆ ಬಿಟ್ಟ ವಿಚಾರ. ಅದು ಬೇರೆ ಯಾರಿಗೂ ಸಂಬಂಧಿಸಿದ್ದಲ್ಲ. ಇಲ್ಲಿ ಯಾವುದೇ ಕಲ್ಮಶವೂ ಇಲ್ಲ, ರಾಜಕಾರಣವೂ ಇಲ್ಲ. ಯಾರು ಏನು ಬೇಕಾದರೂ ಪ್ರಾರ್ಥನೆ ಮಾಡಿಕೊಳ್ಳಬಹುದು” ಎಂದರು.

”ರಾಜೀವ್ ಗಾಂಧಿ ಕೂಡ ಇಲ್ಲಿ ದೊಡ್ಡ ಹೋಮ-ಯಾಗ ನಡೆಸಿದ ಇತಿಹಾಸವಿದೆ. ಇಂದಿರಾ ಗಾಂಧಿ ಕಾಲದಿಂದಲೂ ಇಲ್ಲಿ ನಡೆದಿರುವುದು ಗೊತ್ತಿದೆ. ನಮಗೂ ಈ ಕ್ಷೇತ್ರಕ್ಕೂ ಭಾವನಾತ್ಮಕ ಸಂಬಂಧವಿದೆ. ಎಲ್ಲಾ ವಿಘ್ನಗಳನ್ನು ನಿವಾರಣೆ ಮಾಡುವಂತೆ ವಿಘ್ನೇಶ್ವರನ ಬಳಿ ಬಂದಿದ್ದೇನೆ”ಎಂದರು.

ಕುಟುಂಬ ಸಮೇತ ಆಗಮಿಸಿರುವ ಡಿ.ಕೆ.ಶಿವಕುಮಾರ್ ಅವರು ಶನಿವಾರ ಸಂಜೆ ಯಾಗಕ್ಕೆ ಸಂಕಲ್ಪ ಮಾಡಿದ್ದು ಭಾನುವಾರ ಮಧ್ಯಾಹ್ನದವರೆಗೂ ಶೃಂಗೇರಿಯಲ್ಲೇ ಇದ್ದು ಯಾಗದ ಪೂರ್ಣಾಹುತಿಯಲ್ಲಿ ಭಾಗಿಯಾಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next