Advertisement

ನಾನು ವ್ಯಾಪಾರಸ್ಥನಲ್ಲ,ಸ್ವಾರ್ಥಕ್ಕಾಗಿ ಏನು ಮಾಡಿಕೊಂಡವನಲ್ಲ: ವಿನಯ್‌ ಕುಮಾರ್‌ ಸೊರಕೆ

06:18 PM May 04, 2023 | Team Udayavani |

ಕಾಪು: ಕಳೆದ ಚುನಾವಣೆಯಲ್ಲಿ ನನ್ನ ಬಗ್ಗೆ ಕ್ಷೇತ್ರದಲ್ಲಿ ಬಹಳಷ್ಟು ಅಪಪ್ರಚಾರ ನಡೆಸಿ ಚುನಾವಣೆಯಲ್ಲಿ ಸೋಲಿಸಲಾಯಿತು. ಈ ಬಾರಿಯೂ ನನ್ನ ಬಗ್ಗೆ ಅಪಪ್ರಚಾರ ಆರಂಭಗೊಂಡಿದೆ. ಆದರೆ ನಾನು ಏನು, ಹೇಗೆ ಎನ್ನುದರ ಬಗ್ಗೆ ಮತದಾರರು ತಿಳಿದುಕೊಂಡಿದ್ದಾರೆ ಎನ್ನುವ ನಂಬಿಕೆ ನನಗಿದೆ. ಅಪಪ್ರಚಾರ ಮಾಡುವವರಿಗೆ ಈ ಬಾರಿಯ ಚುನಾವಣೆಯಲ್ಲಿ ಜನರೇ ಸರಿಯಾದ ಪಾಠ ಕಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಕಾಪು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವಿನಯ್‌ ಕುಮಾರ್‌ ಸೊರಕೆ ಹೇಳಿದ್ದಾರೆ.

Advertisement

ಮುದರಂಗಡಿ ಬಿಲ್ಲವ ಸಮಾಜ ಸೇವಾ ಸಂಘಕ್ಕೆ ಭೇಟಿ ನೀಡಿ, ಸಮಾಜದ ಮುಖಂಡರೊಂದಿಗೆ ಸಮಾಲೋಚನೆ ನಡೆಸಿ ಮಾತನಾಡಿದರು.

ನನ್ನ ಜೀವನ ತೆರೆದ ಪುಸ್ತಕವಾಗಿದೆ. ಎಲ್ಲರಿಗೂ ನನ್ನ ಬಗ್ಗೆ ಚೆನ್ನಾಗಿ ಗೊತ್ತಿದೆ. ಕೋಟಿ ಚೆನ್ನಯ್ಯ, ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿಗಳು ನಮ್ಮ ಸಮಾಜದ ಮಹಾನ್‌ ಶಕ್ತಿಗಳು. ಇತರ ಎಲ್ಲಾ ಸಮುದಾಯಗಳಿಗೂ ಆದರ್ಶ ಪ್ರಾಯವಾದ ಚಿಂತನೆಯನ್ನು ಬಿತ್ತಿದವರು ಬ್ರಹ್ಮಶ್ರೀ ನಾರಾಯಣ ಗುರುಗಳು. ನಾನು ಶಾಸಕನಾಗಿದ್ದಾಗ ಮುದರಂಗಡಿ, ಎಲ್ಲೂರು, ಕುತ್ಯಾರು, ಪಿಲಾರು, ಸಾಂತೂರು ಪ್ರದೇಶಗಳ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನವನ್ನು ಒದಗಿಸಿಕೊಟ್ಟಿದ್ದು ಇನ್ನಷ್ಟು ಕೆಲಸವನ್ನು ಮಾಡಲು ನೀವೆಲ್ಲಾ ಜತೆ ಸೇರಿ ಶಕ್ತಿ ತುಂಬ ಬೇಕಿದೆ. ಸಮಾಜವೂ ನನ್ನೊಂದಿಗೆ ಕೈ ಜೋಡಿಸಬೇಕಿದೆ ಎಂದರು.

ಬಿಲ್ಲವ ಸಮಾಜದ ಮುಖಂಡರಾದ ಸುರೇಶ ಸುವರ್ಣ, ನವೀನ್‌ ಚಂದ್ರ ಸುವರ್ಣ, ಶಿವಾಜಿ ಸುವರ್ಣ, ಆನಂದ ಪೂಜಾರಿ, ವೈ. ಸುಧೀರ್‌ ಕುಮಾರ್‌, ಶೇಖರ ಶಾಂತಿ, ರೋಹನ್‌ ಕುಮಾರ್‌, ಕೃಷ್ಣ ಪೂಜಾರಿ, ಗುಣಕರ ಪೂಜಾರಿ, ರವಿರಾಜ್‌ ಅಡ್ವೆ, ಅಜಿತ್‌ ಪೂಜಾರಿ, ಸುಜಾತ ಸುವರ್ಣ, ಜಯಶ್ರೀ, ಡೇವಿಡ್‌ ಡಿಸೋಜ ಉಪಸ್ಥಿತರಿದ್ದರು.

Advertisement

ಜಗದ್ಗುರು ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿಯವರ ಆಶೀರ್ವಾದ ಪಡೆದ ಸೊರಕೆ
ಸೋತರೂ ಎದೆಗುಂದದೆ ಜನರ ಜೊತೆ ಇದ್ದು ಬಹಳಷ್ಟು ಜನಸೇವೆಯನ್ನು ಮಾಡಿದ್ದೀರಿ. ಈ ಬಾರಿ ಜನ ಬದಲಾವಣೆ ಬಯಸುತ್ತಿದ್ದಾರೆ. ಯಾವುದೇ ಕಪ್ಪು ಚುಕ್ಕೆಯಿಲ್ಲದೇ ಕಳೆದ 40 ವರ್ಷಗಳಿಂದ ಜನರ ಸೇವೆ ಮಾಡುತ್ತಿರುವ ನಿಮ್ಮೊಂದಿಗೆ ಈ ಬಾರಿ ನಮ್ಮ ಸಮಾಜ ಇದೆ ಎಂದು ಜಗದ್ಗುರು ಶ್ರೀಮದ್‌ ಆನೆಗೊಂದಿ ಮಹಾಸಂಸ್ಥಾನ ಸರಸ್ವತಿ ಪೀಠದ ಪೀಠಾಧಿಪತಿ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಹೇಳಿದ್ದಾರೆ.

ಪಡುಕುತ್ಯಾರಿನಲ್ಲಿ ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ವಿನಯ್‌ ಕುಮಾರ್‌ ಸೊರಕೆ ಅವರು ತಮ್ಮ ಅಭಿವೃದ್ಧಿ ಯೋಜನೆಗಳ ಬಗ್ಗೆ, ಸರಕಾರದ ಯೋಜನೆಗಳ ಬಗ್ಗೆ ಸ್ವಾಮೀಜಿಯವರೊಂದಿಗೆ ಸಮಾಲೋಚನೆ ನಡೆಸಿದರು.

ಈ ಸಂದರ್ಭ ಸೊರಕೆ ಅವರ ಸೇವಾ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ ಶ್ರೀಗಳು ಇನ್ನಷ್ಟು ಸೇವೆಗೈಯ್ಯುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಆಶೀರ್ವದಿಸಿದರು.

ಕಾಂಗ್ರೆಸ್‌ ಮುಖಂಡರಾದ ದಿವಾಕರ ಡಿ. ಶೆಟ್ಟಿ, ರಾಜೇಶ್‌ ಕುಲಾಲ್‌, ದಿವಾಕರ ಬಿ. ಶೆಟ್ಟಿ, ಜಾನ್ಸನ್‌ ಕಾರ್ಕಡ, ಶಶಿಕಾಂತ್‌ ಆಚಾರ್ಯ, ಪ್ರಭಾಕರ ಆಚಾರ್ಯ, ರತನ್‌ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಜಗತ್ತಿನ ಭೂಪಟದಲ್ಲಿ ಗುರುತಿಸುವಂತೆ ಮಾಡುವ ಗುರಿ
ನಾನು ವ್ಯಾಪಾರಸ್ಥನಲ್ಲ. ಕಳೆದ 40 ವರ್ಷಗಳಿಂದ ಯಾವುದೇ ಕಪ್ಪು ಚುಕ್ಕೆಯಿಲ್ಲದೆ ಜನಸೇವೆ ಮಾಡುತ್ತಾ ಬರುತ್ತಿದ್ದೇನೆ. ಜನಸೇವೆಗಾಗಿಯೇ ನನ್ನ ಜೀವನವನ್ನು ಮುಡಿಪಾಗಿಟ್ಟಿದ್ದೇನೆ. ಕಾಪು ಕ್ಷೇತ್ರದಲ್ಲಿ ಇತಿಹಾಸ ಕಂಡು ಕೇಳರಿಯದ ಅಭಿವೃದ್ಧಿ ಕೆಲಸಗಳನ್ನು ನಡೆಸಿದ್ದೇನೆ ಎಂಬ ಖುಷಿಯಿದೆ. ಈ ಬಾರಿ ಮತ್ತೂಮ್ಮೆ ಅವಕಾಶ ಕೊಟ್ಟರೆ ನಿಸ್ಸಂದೇಹವಾಗಿಯೂ ಕಾಪು ಕ್ಷೇತ್ರವನ್ನು ಜಗತ್ತಿನ ಭೂಪಟದಲ್ಲಿ ಗುರುತಿಸುವಂತೆ ಮಾಡುತ್ತೇನೆ ಎಂದು ವಾಗ್ದಾನ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next