Advertisement

ನಾನೇ ಮುಂದಿನ ಅಧ್ಯಕ್ಷ: ಅಬ್ದುಲ್ಲಾ

12:23 AM Oct 01, 2019 | mahesh |

ಕಾಬೂಲ್‌: ಅಫ್ಘಾನಿಸ್ಥಾನದಲ್ಲಿ ಕಳೆದ ವಾರಾಂತ್ಯಕ್ಕೆ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ತಾವು ಜಯಗಳಿಸಿರುವುದಾಗಿ, ಹಾಲಿ ಅಧ್ಯಕ್ಷ ಅಶ್ರಫ್ ಘನಿ ವಿರುದ್ಧ ಸ್ಪರ್ಧಿಸಿರುವ ಅವರ ರಾಜಕೀಯ ವೈರಿಯಾದ ಅಬ್ದುಲ್ಲಾ ಅಬ್ದುಲ್ಲಾ ಘೋಷಿಸಿ ಕೊಂಡಿದ್ದಾರೆ. ಚುನಾವಣಾ ಫ‌ಲಿತಾಂಶದ ಬಗ್ಗೆ ಅಧಿಕೃತ ಮಾಹಿತಿಗಳು ಹೊರಬೀಳುವ ಮುನ್ನವೇ ಅವರು ಈ ರೀತಿಯಾಗಿ ಘೋಷಣೆ ಮಾಡಿರುವುದು ಆಫ್ಘನ್‌ ರಾಜಕೀಯ ವಲಯದಲ್ಲಿ ಬಿಕ್ಕಟ್ಟಿನ ವಾತಾವರಣ ಸೃಷ್ಟಿಸ ಬಹುದೆಂದು ಅಂದಾಜಿಸಲಾಗಿದೆ. ಸೋಮವಾರದಂದು, ಏಕಾಏಕಿ ಸುದ್ದಿಗೋಷ್ಠಿ ಕರೆದ ಅಬ್ದುಲ್ಲಾ, “ಈ ಬಾರಿಯ ಚುನಾ ವಣೆಯಲ್ಲಿ ಅಧಿಕ ಮತಗಳು ತಮ್ಮ ಪರವಾಗಿಯೇ ಬಂದಿವೆ. ಚುನಾವಣಾ ಫ‌ಲಿತಾಂಶವನ್ನು ಚುನಾವಣಾ ಆಯೋಗ ಘೋಷಿಸುತ್ತದೆ. ಆದರೆ, ನನ್ನ ಪಕ್ಷಕ್ಕೆ ಅತ್ಯಧಿಕ ಮತಗಳು ಬಂದಿರುವುದು ತಿಳಿದುಬಂದಿದೆ. ಈ ಬಾರಿ ಅತಂತ್ರ ಸಂಸತ್‌ ಆಗುವುದಿಲ್ಲ’ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next