Advertisement

ನಾನು ಜೆಡಿಎಸ್‌ ಅಭ್ಯರ್ಥಿ: ಅಪ್ಪಯ್ಯಣ್ಣ

03:13 PM Feb 14, 2018 | |

ದೊಡ್ಡಬಳ್ಳಾಪುರ: ಜೆಡಿಎಸ್‌ ಜಿಲ್ಲಾಧ್ಯಕ್ಷರು ಪಕ್ಷ ಸಂಘಟನೆ ವಿಚಾರದಲ್ಲಿ ವರಿಷ್ಠರ ಮಾತನ್ನು ಧಿಕ್ಕರಿಸಿ, ತಮ್ಮಿಷ್ಟ ಬಂದಂತೆ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ತಮಗೆ ನೀಡಿದ್ದ ಸ್ಥಾನಕ್ಕೆ ಚ್ಯುತಿ ತಂದಿದ್ದಾರೆ. ಇದರಿಂದಾಗಿ ತಾವು ಜೆಡಿಎಸ್‌ ಪಕ್ಷದಿಂದ ಟಿಕೆಟ್‌ ಆಕಾಂಕ್ಷಿ ಯಾಗಿದ್ದು, ಈ ಬಗ್ಗೆ ವರಿಷ್ಠರಿಗೆ ಮನವಿ ಮಾಡಿಕೊಡಲಾಗಿದೆ ಎಂದು ಬಮೂಲ್‌ ಅಧ್ಯಕ್ಷ ಎಚ್‌.ಅಪ್ಪಯ್ಯಣ್ಣ ಹೇಳಿದ್ದಾರೆ. ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ತಾಲೂಕಿನ ಜೆಡಿಎಸ್‌ ಪಕ್ಷದಲ್ಲಿ ಭಿನ್ನಮತ ಭುಗಿಲೆದ್ದಿದೆ.

Advertisement

ಇತ್ತೀಚೆಗಷ್ಟೇ ನಡೆದ ಜೆಡಿಎಸ್‌ ಯುವ ಘಟಕದ ಜಿಲ್ಲಾ ಸಮಾವೇಶದಲ್ಲಿ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಕುಮಾರಸ್ವಾಮಿ ಅವರು ಬಿ.ಮುನೇಗೌಡ ಅವರನ್ನು ದೊಡ್ಡ ಬಳ್ಳಾಪುರ ವಿಧಾನಸಭಾ ಕ್ಷೇತ್ರದ ಅಧಿಕೃತ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದರು. ಆದರೆ, ಹೈಕಮಾಂಡ್‌ ಆದೇಶದಂತೆ ಜೆಡಿಎಸ್‌ ಜಿಲ್ಲಾ ಅಧ್ಯಕ್ಷ ಬಿ.ಮುನೇಗೌಡ ಅವರು ಎಲ್ಲ ಮುಖಂಡರನ್ನು ಒಳಗೊಂಡು ಪಕ್ಷ ಸಂಘಟನೆ ಮಾಡುತ್ತಿಲ್ಲ. ಹೀಗಾಗಿ ಪಕ್ಷಕ್ಕೆ ಆಗುತ್ತಿರುವ ಹಾನಿ ತಪ್ಪಿಸಲು ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಪಕ್ಷದ ಮುಖಂಡರಿಗೂ ಮನವರಿಕೆ ಮಾಡಿಕೊಡಲಾಗಿದೆ ಎಂದರು.

ಮುನೇಗೌಡ ಜೆಡಿಎಸ್‌ ಜಿಲ್ಲಾ ಅಧ್ಯಕ್ಷ ಸ್ಥಾನ ಬಿಡಲಿ: ವಿಧಾನಸಭಾ ಚುನಾವಣೆ ಒಂದೆ ರಡು ತಿಂಗಳು ಇರುವ ಈ ಸಂದರ್ಭದಲ್ಲಿ ಪಕ್ಷದ ನೂತನ ಪದಾಧಿಕಾರಿಗಳ ಆಯ್ಕೆಯಲ್ಲಿ ಮೂಲ ಜೆಡಿಎಸ್‌ ಪಕ್ಷದ ಕಾರ್ಯಕರ್ತರನ್ನು ಕಡೆಗಣಿಸಲಾಗಿದೆ. ತಮಗೆ ಇಷ್ಟ ಬಂದವರನ್ನು ಆಯ್ಕೆ ಮಾಡುತ್ತಿದ್ದಾರೆ. ಇದರಿಂದ ಪಕ್ಷದಲ್ಲಿ ಸಾಕಷ್ಟು ವರ್ಷಗಳಿಂದ ದುಡಿದುಕೊಂಡು ಬಂದವರಿಗೆ ಅನ್ಯಾಯವಾಗಿದೆ. ಮುನೇಗೌಡ ಜೆಡಿಎಸ್‌ ಜಿಲ್ಲಾ ಅಧ್ಯಕ್ಷ ಸ್ಥಾನ ಬಿಟ್ಟು ಬೇರೆಯವರಿಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

ದುರಂಹಕಾರದಿಂದ ವರ್ತನೆ: ಜೆಡಿಎಸ್‌ ರಾಜ್ಯ ಕಾರ್ಯದರ್ಶಿ ಎ.ನರಸಿಂಹಯ್ಯ ಮಾತನಾಡಿ, ಕ್ಷೇತ್ರದಲ್ಲಿ ಮುನೇಗೌಡ
ಗುಂಪುಗಾರಿಕೆ ಮಾಡುವ ಮೂಲಕ ಪಕ್ಷ ಹಾಳುಮಾಡುತ್ತಿದ್ದಾರೆ. ದುರಂಹಕಾರದಿಂದ ವರ್ತಿಸುತ್ತಿದ್ದಾರೆ. ಹೀಗಾಗಿ ಈ ಬಾರಿ ಎಚ್‌. ಅಪ್ಪಯ್ಯಣ್ಣ ಅವ ರನ್ನು ಜೆಡಿಎಸ್‌ ಪಕ್ಷದ ಅಧಿಕೃತ ಅಭ್ಯರ್ಥಿ ಯನ್ನಾಗಿ ಘೋಷಣೆ ಮಾಡುವಂತೆ ಹೈಕಮಾಂಡ್‌ಗೆ ಮನವಿ
ಮಾಡಲಾಗಿದೆ ಎಂದರು.

ಜೆಡಿಎಸ್‌ ಕಾರ್ಮಿಕ ಘಟಕದ ರಾಜ್ಯ ಘಟಕದ ಅಧ್ಯಕ್ಷ ಜಿ.ಶ್ರೀರಾಮಯ್ಯ ಮಾತನಾಡಿ, ಬಿ.ಮುನೇಗೌಡ ಅವರು ದೇವನಹಳ್ಳಿ ತಾಲೂಕಿನವರು. ಹೀಗಾಗಿ ಇಲ್ಲಿ ಎರಡು ಬಾರಿ ವಿಧಾನ ಸಭೆಗೆ ಸ್ಪರ್ಧಿಸಿ ಸೋಲು ಕಂಡಿದ್ದಾರೆ. ಮತದಾರರಲ್ಲೂ ಅಸಮಾಧಾನ ಮೂಡಿದೆ. ಪಕ್ಷದ ವರಿಷ್ಠರ ಮಾತಿಗೆ ಗೌರವ ನೀಡದೆ ನಡೆಯುತ್ತಿದ್ದಾರೆ. ಹೀಗಾಗಿ ಈ ಬಾರಿ ಅಭ್ಯರ್ಥಿಯನ್ನು ಬದಲಾವಣೆ ಮಾಡಲೇ ಬೇಕು. ಪಕ್ಷದ ಕೋರ್‌ಕಮಿಟಿಗೂ ದೂರು ನೀಡಲಾಗು ವುದು. ನಮ್ಮ ತಾಲೂಕಿನವರೇ ಈ ಬಾರಿ ಜೆಡಿಎಸ್‌ನಿಂದ ಅಭ್ಯರ್ಥಿ ಯಾಗಬೇಕು. ಮುನೇಗೌಡ ಅವರು ಜೆಡಿಎಸ್‌ ಪಕ್ಷದ ಹೆಸರು ಹೇಳದೆ ಪಕ್ಷೇತರ ಅಭ್ಯರ್ಥಿಯಂತೆ ವರ್ತಿಸುತ್ತಿದ್ದಾರೆ ಎಂದರು. 

Advertisement

ಸಮಾವೇಶಕ್ಕೆ ಸಿದ್ಧತೆ: ನಗರಸಭೆ ಅಧ್ಯಕ್ಷ ಟಿ.ಎನ್‌.ಪ್ರಭುದೇವ್‌ ಮಾತನಾಡಿ, ಈ ಬಾರಿ ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬರುವ ದೃಷ್ಟಿಯಿಂದ ಬಿಎಸ್‌ಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವುದು ಸ್ವಾಗ ತಾರ್ಹ. ಫೆಬ್ರವರಿ 17 ರಂದು ಬೆಂಗಳೂರಿನಲ್ಲಿ
ನಡೆಯುವ ಸಮಾವೇಶಕ್ಕೆ ಸಿದ್ಧತೆ ನಡೆಸಲಾಗುತ್ತಿದೆ ಎಂದರು. 

ಪತ್ರಿಕಾಗೋಷ್ಠಿಯಲ್ಲಿ ಪಿಕಾರ್ಡ್‌ ಬ್ಯಾಂಕ್‌ ಉಪಾಧ್ಯಕ್ಷ ಪುಟ್ಟ ಬಸವರಾಜು, ಓಬದೇನಹಳ್ಳಿ ಮುನಿಯಪ್ಪ, ಟಿಎಪಿಎಂಸಿಎಸ್‌ ಅಧ್ಯಕ್ಷ ಬಿ.ಅಶ್ವತ್ಥನಾರಾಯಣ, ನಿರ್ದೇಶಕರಾದ ವೆಂಕಟೇಶ್‌ಬಾಬು, ಆನಂದ್‌, ನಗರಸಭೆ ಸದಸ್ಯ ಎಂ.ಮಲ್ಲೇಶ್‌, ಪ್ರಕಾಶ್‌, ಮುಖಂಡರಾದ ರಾ.ಬೈರೇಗೌಡ, ಡಿ.ಸಿ.ಚೌಡರಾಜ್‌, ಮೋಹನ್‌, ಸುಬ್ರಮಣಿ, ಎಚ್‌. ನಾರಾಯಣಪ್ಪ ಇದ್ದರು.

ಜೆಡಿಎಸ್‌ ರಾಜ್ಯ ಅಧ್ಯಕ್ಷ ಕುಮಾರ ಸ್ವಾಮಿ ಅವರ ವಿರುದ್ಧವೇ ಹಣಕ್ಕೆ ಬೇಡಿಕೆ ಇಟ್ಟಿದ್ದರೂ ಎನ್ನುವ ಆರೋಪ ಮಾಡಿದ್ದವರು
ಮುನೇಗೌಡ. ಇಂಥವರು ಜಿಲ್ಲಾ ಅಧ್ಯಕ್ಷರ ಸ್ಥಾನದಲ್ಲಿದ್ದಾರೆ. ಪಕ್ಷದಲ್ಲಿ ಗೊಂದಲಗಳು ನಿವಾರಣೆಯಾಗಬೇಕಾದರೆ ಜಿಲ್ಲಾ ಅಧ್ಯಕ್ಷ ಸ್ಥಾನದಿಂದ ಮುನೇಗೌಡ ಅವರನ್ನು ಬದಲಾವಣೆ ಮಾಡಬೇಕು. 
ಟಿ.ಎನ್‌.ಪ್ರಭುದೇವ್‌, ನಗರಸಭೆ ಅಧ್ಯಕ್ಷ 

Advertisement

Udayavani is now on Telegram. Click here to join our channel and stay updated with the latest news.

Next