Advertisement
ಒಮ್ಮೆ ಸುರೇಶ ಹೊಲದ ಕಡೆ ಹೊರಟಿದ್ದರು. ಅಪ್ಪನ ಜೊತೆ ತಾನು ಬರುತ್ತೇನೆ ಎಂದು ಶೀಕಂಠನೂ ಹಠ ಮಾಡಿದ. ಅಪ್ಪ ಮಗ ಇಬ್ಬರೂ ಹೊಲದ ಕಡೆ ಹೊರಟರು. ಹೊಲದಲ್ಲಿ ಬಹಳಷ್ಟು ಕೆಲಸಗಳು ಬಾಕಿ ಉಳಿದಿದ್ದವು. ಸುರೇಶ ಪಂಚೆಯನ್ನು ಎತ್ತಿಕಟ್ಟಿ ಹೊಲದಲ್ಲಿ ಬೆಳೆದಿದ್ದ ಕಳೆಯನ್ನು ಕೀಳಲು ಶುರುಮಾಡಿದ. ಶೀಕಂಠನಿಗೂ ಒಂದು ಕೆಲಸ ಹಚ್ಚಿದರು. ಇಬ್ಬರೂ ಬಿಸಿಲಿನಲ್ಲಿ ಕೆಲಸ ಮಾಡಿ ದಣಿದರು. ಅದೇ ಸಮಯಕ್ಕೆ ಮಕ್ಕಳು ಆಡಿ ನಲಿಯುವ ದನಿ ಕೇಳಿಸಿತು. ಶೀಕಂಠನಿಗೆ ಅಚ್ಚರಿಯಾಗಿ ದನಿ ಬಂದ ಕಡೆ ನಡೆದುಹೋದನು. ಹೊಲದಿಂದ ಸ್ವಲ್ಪ ದೂರದಲ್ಲಿ ಒಂದು ಶಾಲೆಯಿತ್ತು. ಅದರ ಮುಂದಿದ್ದ ಮೈದಾನದಲ್ಲಿ ಕೆಲ ಮಕ್ಕಳು ಆಟವಾಡುತ್ತಿದ್ದರು. ಕೆಲವರು ಚಿತ್ರ ಬಿಡಿಸುತ್ತಿದ್ದರು, ಇನ್ನು ಕೆಲವರು ಮೇಸ್ಟ್ರೆ ಹೇಳುವ ಕಥೆಗಳನ್ನು ಕೇಳುವುದರಲ್ಲಿ ಮಗ್ನರಾಗಿದ್ದರು. ಅದನ್ನು ನೋಡಿ ಶೀಕಂಠನಿಗೆ ಶಾಲೆ ಎಂದರೆ ಏನು ಅನ್ನೋದು ಅರ್ಥವಾಯಿತು. ಅವನಿಗೂ ಶಾಲೆಗೆ ಹೋಗುವ ಮನಸ್ಸಾಯಿತು. ಶೀಕಂಠ ಮನೆಗೆ ಬಂದವನೇ “ನಾನು ನಾಳೆಯಿಂದ ಶಾಲೆಗೆ ಹೋಗುತ್ತೇನೆ’ ಎಂದನು. ಈ ಮಾತನ್ನು ಕೇಳಿ ಅಪ್ಪ ಅಮ್ಮಂದಿರಿಬ್ಬರಿಗೂ ಖುಷಿಯಾಯಿತು. ಆದರೆ ಪಟೇಲರ ಮುಖ ಸಣ್ಣದಾಯಿತು. ಶೀಕಂಠ “ತಾತ, ನಾನು ಓದಿ ದೊಡ್ಡವನಾಗಿ ನಮ್ಮ ಜಮೀನಿನಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡ್ತೀನಿ’ ಎಂದಾಗ ಪಟೇಲರಿಗೂ ಖುಷಿಯಾಯಿತು.
Advertisement
ನಾನು ಶಾಲೆಗೆ ಹೋಗ್ತೀನಿ
08:05 PM Aug 21, 2019 | mahesh |
Advertisement
Udayavani is now on Telegram. Click here to join our channel and stay updated with the latest news.