Advertisement
“ನಾನು ಲವ್ವರ್ ಆಫ್ ಜಾನು’ ಚಿತ್ರದ ಮೂಲಕ ಬಾರಿಗೆ ಸುರೇಶ್ ಜಿ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರಾದರೂ, ಸಾಕಷ್ಟು ಅನುಭವ ಪಡೆದುಕೊಂಡೇ ಚಿತ್ರ ನಿರ್ದೇಶನಕ್ಕಿಳಿದಿದ್ದಾರೆ. ಕಳೆದ ಆರೇಳು ವರ್ಷಗಳಿಂದಲೂ ಚಿತ್ರರಂಗದಲ್ಲಿರುವ ಅವರು, “ಗೊಂಬೆಗಳ ಲವ್’ ಮತ್ತು ‘ಪಯಣ’ ಚಿತ್ರಗಳಿಗೆ ಕೆಲಸ ಮಾಡಿದ್ದಾರೆ. ಆ ಬಳಿಕ ಒಂದಷ್ಟು ಚಿತ್ರಗಳಿಗೆ ಸ್ಕ್ರಿಪ್ಟ್ ಕೆಲಸವನ್ನೂ ಮಾಡಿದ್ದಾರೆ.
Related Articles
Advertisement
ಈಗಾಗಲೇ ಚಿತ್ರದ ಟೀಸರ್‌ವೊಂದನ್ನು ಬಿಡುಗಡೆ ಮಾಡಿರುವ ಚಿತ್ರತಂಡ, ಅದಕ್ಕೆ ಸಿಕ್ಕಿರುವ ಪ್ರತಿಕ್ರಿಯೆ ನೋಡಿ ಫುಲ್ ಖುಷಿಯ ಮೂಡ್‌ನಲ್ಲಿದೆ. ಅಂದಹಾಗೆ, ಜಯಣ್ಣ ಮತ್ತು ಭೋಗೇಂದ್ರ ಟೀಸರ್ ಬಿಡುಗಡೆ ಮಾಡಿದ್ದಾರೆ. ಬಿಡುಗಡೆಯಾಗಿರುವ ಟೀಸರ್‌ಗೊಂದು ವಿಶೇಷವೂ ಇದೆ. ಆ ಟೀಸರ್‌ನಲ್ಲೂ ನಾಯಕ ಮತ್ತು ನಾಯಕಿಯನ್ನೆಲ್ಲಿ ತೋರಿಸಿಲ್ಲ. ಟೀಸರ್‌ನಲ್ಲಿ ನಾಯಕ-ನಾಯಕಿ ಇದ್ದರೂ ಸಹ, ಅವರು ಸ್ಪಷ್ಟವಾಗಿ ಗೋಚರಿಸುವುದಿಲ್ಲ.
ಅಂಥದ್ದೊಂದು ಟೀಸರ್ ಬಿಡುಗಡೆ ಮಾಡಿ, ಒಂದಷ್ಟು ಕುತೂಹಲ ಮೂಡಿಸಿದ್ದಾರೆ ನಿರ್ದೇಶಕರು. ಈ ಟೀಸರ್‌ನ ಮತ್ತೂಂದು ವಿಶೇಷವೆಂದರೆ, ಟೀಸರ್‌ಗೆ ನಿರ್ದೇಶಕ ಯೋಗರಾಜ್‌ಭಟ್ ಅವರು ಹಿನ್ನೆಲೆ ಧ್ವನಿ ಕೊಟ್ಟಿದ್ದಾರೆ. ಅವರ ಹಿನ್ನೆಲೆ ಧ್ವನಿಯಲ್ಲಿ ಮೂಡಿಬಂದಿರುವ ಟೀಸರ್ ಸಾಕಷ್ಟು ಸದ್ದು ಮಾಡಿರುವುದರಿಂದ ಚಿತ್ರತಂಡಕ್ಕೆ ಇನ್ನಷ್ಟು ಉತ್ಸಾಹ ಬಂದಿದೆ.
ಹಾಗಾದರೆ, ಇದರ ಕಥೆ ಏನು? “ಕ್ರಾಂತಿ ಮತ್ತು ಪ್ರೀತಿ’ ಎಂದು ಒನ್‌ಲೈನ್ ಹೇಳಿ ಸುಮ್ಮನಾಗುತ್ತಾರೆ ನಿರ್ದೇಶಕ ಸುರೇಶ್. ಒಂದು ಪ್ರೀತಿ ಇದೆ ಅಂದಮೇಲೆ, ಅಲ್ಲಿ ದ್ವೇಷವೂ ಇರುತ್ತೆ. ಇಲ್ಲೂ ಅದೆಲ್ಲಾ ಇದ್ದರೂ, ಸಮಾಜದೊಳಗಿನ ಕ್ರಾಂತಿ ನಡುವೆ ಪ್ರೀತಿ ಗೆಲ್ಲುತ್ತಾ ಅನ್ನುವುದನ್ನು ಸೂಕ್ಷ್ಮವಾಗಿ ಹೇಳಿದ್ದಾರಂತೆ ನಿರ್ದೇಶಕರು. ಚಿತ್ರದಲ್ಲಿ ಚಿಕ್ಕಣ್ಣ, ಸುಚೇಂದ್ರ ಪ್ರಸಾದ್, ರಾಕ್‌ಲೈನ್ ವೆಂಕಟೇಶ್, ಹರಿಣಿ ಸೇರಿದಂತೆ ಇತರೆ ಕಲಾವಿದರು ನಟಿಸಿದ್ದಾರೆ.
ಶ್ರೀನಾಥ್ ವಿಜಿ ಸಂಗೀತ ನೀಡಿದ್ದಾರೆ. ಶಿವು ಕ್ಯಾಮೆರಾ ಹಿಡಿದರೆ, ರಾಜ್‌ಶಿವ ಸಂಕಲನ ಮಾಡಿದ್ದಾರೆ. ಕಲಾತಪಸ್ವಿ ಬ್ಯಾನರ್‌ನಲ್ಲಿ ಐವರು ಗೆಳೆಯರು ಸೇರಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಂದ್ರು, ರಾಜು ಕಲ್‌ಕುಣಿಕೆ, ವಿಷ್ಣು ಭಂಡಾರಿ,ರವಿಶಂಕರ್ ಮತ್ತು ಮೂಡ್ಲಿರಾಮ್ ಚಿತ್ರದ ನಿರ್ಮಾಪಕರು. ಚಿತ್ರದಲ್ಲಿ ಹಾಡು ಮತ್ತು ಫೈಟ್, ಚೇಸಿಂಗ್ ಹೈಲೈಟ್. ವಿಕ್ರಂ ಫೈಟ್ ಮಾಡಿಸಿದ್ದಾರೆ.
ಇನ್ನು, ನಾಗೇಂದ್ರಪ್ರಸಾದ್ ಅವರೇ ನಾಲ್ಕು ಹಾಡುಗಳನ್ನು ರಚಿಸಿದ್ದಾರೆ. ವಿಜಯಪ್ರಕಾಶ್, ಶ್ರೇಯಾ ಘೋಷಾಲ್, ಕಾರ್ತಿಕ್, ಚಿನ್ಮಯಿ, ಹರಿಚರಣ್ ಹಾಡಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ಶುರುವಾಗಿದ್ದ ಈ ಚಿತ್ರ ಈಗ ಬಿಡುಗಡೆಗೆ ರೆಡಿಯಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಹೊಸ ವರ್ಷಕ್ಕೆ ಪ್ರೇಕ್ಷಕರ ಮುಂದೆ ಬರಲಿದೆ.