Advertisement

ನಾನೂ ಹನುಮಂತನ ಭಕ್ತ.. ಪ್ರಧಾನಿ ಆಗಮನಕ್ಕೆ ಮಾಡಿದ ಖರ್ಚೆಷ್ಟು?:ದೇಶಪಾಂಡೆ

02:52 PM May 05, 2023 | Team Udayavani |

ಕಾರವಾರ: ಬಜರಂಗ ಬಲಿ ಅಂದರೆ ಹನುಮಾನ್.ನಾನೂ ಹನುಮಂತನ ಭಕ್ತ. ನಾವೇನು ಬಜರಂಗ ಬಲಿ ಎಂಬುದಕ್ಕೆ ಆಕ್ಷೇಪ ಮಾಡಿದ್ದೇವಾ? ಇಲ್ಲ‌ವಲ್ಲ .ಆದರೆ ಯಾವುದೇ ಸಂಘಟನೆಗಳು ಕಾನೂನು ಕೈಗೆ ತೆಗೆದುಕೊಂಡರೆ ಅದಕ್ಕೆ ಸಂವಿಧಾನದಲ್ಲಿ ಅವಕಾಶ ಇಲ್ಲ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಆರ್.ವಿ.ದೇಶಪಾಂಡೆ ಹೇಳಿದರು.

Advertisement

ಕಾರವಾರದ ಪತ್ರಿಕಾಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಮಾಡಿದ ಅವರು ಕರ್ನಾಟಕದಲ್ಲಿ ಸರ್ಕಾರ ಇದ್ದರೂ ಇಲ್ಲವಾಗಿದೆಬಿಜೆಪಿಯ ಭ್ರಷ್ಟಾಚಾರ, ದುರಾಡಳಿತ ಕಾರಣ ಜನ ನಮ್ಮ ಕಡೆ ಇದ್ದಾರೆ ಎಂದರು.

ಜೆಡಿಎಸ್ ಕುಟುಂಬದ ಪಕ್ಷ, ಅವರು ಎಷ್ಟೇ ಪ್ರಯತ್ನ ಮಾಡಿದರೂ, 28 ಸೀಟು ದಾಟಲ್ಲ. ಅದು ದಕ್ಷಿಣ ಕರ್ನಾಟಕದಲ್ಲಿ ಕೆಲ ಕ್ಷೇತ್ರಗಳಲ್ಲಿ ಅವರ ಪ್ರಾಭಲ್ಯ ಇದೆ‌ . ಆದರೆ ಸರ್ಕಾರ ರಚಿಸಲು 113 ಸ್ಥಾನ ಬೇಕು. ಆ ಗುರಿ ಮುಟ್ಟಿಲು ಅವರಿಗೆ ಸಾಧ್ಯವಿಲ್ಲ ಎಂದು ಅವರಿಗೂ ಗೊತ್ತು.
ಕಾಂಗ್ರೆಸ್ ಮತ್ತು ಬಿಜೆಪಿಗೆ ಬಹುಮತ ಸಿಗಬಾರದು ಎಂಬುದು ಅವರ ನಿಲುವು. ಅವರ ಇಂತಹ ಉದ್ದೇಶಗಳು ಈಡೇರುವುದಿಲ್ಲ ಎಂದು ಮಾಜಿ ಸಚಿವರೂ ಆದ ದೇಶಪಾಂಡೆ ನುಡಿದರು.

ಶಾಸನ ಸಭೆಗಳಲ್ಲಿ ಚರ್ಚೆಗಳು ಅರ್ಥಪೂರ್ಣ ಆಗುತ್ತಿಲ್ಲ. ಅಲ್ಲಿ ಆದ ನಿರ್ಣಯಗಳು ಜನರನ್ನು ಮುಟ್ಟಲ್ಲ. ಇತ್ತ ಉತ್ತರ ಕನ್ನಡದಲ್ಲಿ ಜಿಲ್ಲಾಧಿಕಾರಿ, ಎಸ್ಪಿ, ಸಿಇಒ ಬಿಟ್ಟರೆ ಅಧಿಕಾರಿಗಳೇ ಇಲ್ಲ. ಉತ್ತರ ಕನ್ನಡ ಜಿಲ್ಲೆ ಅನಾಥವಾಗಿದೆ. ಅಭಿವೃದ್ಧಿ ಕುಂಠಿತವಾಗಿದೆ‌ ಎಂದರು . ನಮ್ಮ ಸರ್ಕಾರ ಇದ್ದಾಗ ಪ್ರಾರಂಭವಾದ ಉಳಗಾ ಕೆರವಡಿ ಬ್ರಿಜ್ ಇನ್ನೂ ಪೂರ್ಣವಾಗಿಲ್ಲ. ಗೋಕರ್ಣ ಮಂಜುಗುಣಿ ಬ್ರಿಜ್ ಸಹ ಆಗಿಲ್ಲ. ಪ್ರವಾಸೋದ್ಯಮ ಬೆಳವಣಿಗೆ ನಿಂತು ಹೋಗಿದೆ. ನಮ್ಮ ಕಾಲದಲ್ಲಿ ನಡೆದ ಉತ್ಸವಗಳು ಸಹ ನಡೆಯುತ್ತಿಲ್ಲ ಎಂದು ದೇಶಪಾಂಡೆ ವಿಷಾಧಿಸಿದರು.

ಕೈಟ್ ಉತ್ಸವ , ವಾಟರ್ ಸ್ಪೋರ್ಟ್ಸ,ಸ್ಕೂಬಾ ಬಂತು. ಮೂಲಭೂತ ಸೌಕರ್ಯ ನಮ್ಮ ಕಾಲದಲ್ಲಿ ಚೆನ್ನಾಗಿತ್ತು. ಫಾಸ್ಟ್ ಫುಡ್ ಸ್ಟಾಲ್ ಹೆಚ್ಚಿದವು. ಈಗ ಹೋಮ್ ಸ್ಟೇದವರು ಸಹ ಕಷ್ಟದಲ್ಲಿದ್ದಾರೆ. ಬಿಜೆಪಿ ಜನಪ್ರತಿನಿಧಿಗಳಿಗೆ ಅಭಿವೃದ್ದಿಯಲ್ಲಿ ಆಸಕ್ತಿ ಸಹ ಇಲ್ಲ‌. ಉದ್ಯೋಗ ಸೃಷ್ಟಿಸಲಿಲ್ಲ ಎಂದರು.

Advertisement

ಈಗಿನವರಿಗೆ ಮುಂದಾಲೋಚನೆ ಸಹ ಇಲ್ಲ. ಪ್ರವಾಸೋದ್ಯಮ ಬೆಳಸಲೇ ಇಲ್ಲ. ನಾವಿದ್ದಾಗ ಲೈಫ್ ಗಾರ್ಡ್ಸ ತರಬೇತಿ ಸಹ ಕೊಟ್ಟೆವು. ಈಗ ಬೀಚ್ ಕಾಯಲು ಯಾರೂ ಇಲ್ಲವಾಗಿದೆ. ಬೀಚ್ ನಲ್ಲಿ ಪ್ರವಾಸಿಗರ ಸಾವು ಆಗುತ್ತಿದೆ. ನಮ್ಮ ಸರ್ಕಾರ ಇದ್ದಾಗ 15 ಲಕ್ಷ ಆಶ್ರಯ ಮನೆ ಕೊಟ್ಟಿದ್ದೆವು.ಈಗ ಪಂಚಾಯಿತಿಗೆ ನಾಲ್ಕು ಮನೆ ಕೊಡಲಾಗಿಲ್ಲ. ಒಬಿಸಿ, ಎಸ್ಸಿ ಎಸ್ ಟಿ ಯುವಕರಿಗೆ ಟ್ಯಾಕ್ಸಿ ಸಹ ಕೊಟ್ಟಿಲ್ಲ ಎಂದರು. ಬಿಜೆಪಿ ಎಲ್ಲಾ ರಂಗದಲ್ಲಿ ಸೋತಿದೆ. ನಮ್ಮ ಸರ್ಕಾರ ಬಂದರೆ ಹೌಸಿಂಗ್ ಫಾರ್ ಆಲ್ ಯೋಜನೆ ತರುತ್ತೇವೆ‌.ನಮ್ಮ ಸರ್ಕಾರ ಇದ್ದಾಗ ೨೫೦೦ ಕೋಟಿ ರೂ.ಮನೆ ಸಾಲ ಮನ್ನ ಮಾಡಿದೆವು. 50000 ತನಕ ರೈತರ ಸಾಲ ಮನ್ನ ಮಾಡಿದೆವು ಎಂದರು.

ಪ್ರಧಾನಿ ಬಂದರು
ಪ್ರಧಾನಿ ಬಂದರು, ಅವರ ಪಕ್ಷದ ಕಾರ್ಯಕ್ರಮ ಬರಲಿ. ಆದರೆ ಅವರ ಆಗಮನಕ್ಕೆ ಮಾಡಿದ ಖರ್ಚು ಎಷ್ಟು? ಅವರು ಜಿಲ್ಲೆಯ ಜನರಿಗೆ ಏನು ಮಾಡಿದ್ದೇವೆ ಎಂದು ಹೇಳಬೇಕಿತ್ತು.ಅವರ ಮಾತಿನಲ್ಲಿ ಅದರ ಪ್ರಸ್ತಾಪವೇ ಇಲ್ಲ ಎಂದರು. ಅದರ ಬದಲು ಏರ್ ಪೋರ್ಟ್ ಯಾವಾಗ ಮುಗಿಸುತ್ತೇವೆ ಎಂದು ಹೇಳಬಹುದಿತ್ತು. ಪ್ರವಾಸೋದ್ಯಮಕ್ಕೆ ಏನು ಮಾಡುತ್ತಿದ್ದೇವೆ ಎಂದು ಪ್ರಧಾನಿ ಹೇಳುತ್ತಾರೆಂದು ವಿಶ್ವಾಸ ಇತ್ತು. ಆದರೆ ಅವರ ಭಾಷಣದಲ್ಲಿ ಜಿಲ್ಲೆಗೆ ಏನೂ ದೊರೆಯುವ ಸೂಚನೆ ಸಹ ಕಾಣಲಿಲ್ಲ ಎಂದು ಮಾಜಿ ಸಚಿವ , ಹಳಿಯಾಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದೇಶಪಾಂಡೆ ವಿಷಾಧಿಸಿದರು‌ .೧೫ ಕೋಟಿ ಉದ್ಯೋಗ ಮೋದಿ ಕಾಲದ 9 ವರ್ಷದಲ್ಲಿ ಸೃಷ್ಟಿಯಾಗಬೇಕಿತ್ತು. ಆದರೆ ಎಲ್ಲಿ ಉದ್ಯೋಗ ಸಿಕ್ಕಿದೆ ? ಎಂದು ಪ್ರಶ್ನಿಸಿದರು‌ . ಬೆಲೆ ಏರಿಕೆ ಬಗ್ಗೆ ಪ್ರಧಾನಿ ಮಾತೇ ಆಡಲಿಲ್ಲ ಎಂದರು. ಬಡವರಿಗೆ ಏನು ಮಾಡಿದ್ದೇವೆ ಎಂದು ಅವರು ಹೇಳಬೇಕಿತ್ತು. ಆದರೆ ಅವರ ಸರ್ಕಾರದಲ್ಲಿ ಬಡವರಿಗೆ ಕಾರ್ಯಕ್ರಮಗಳೇ ಇಲ್ಲ ಎಂದರು.

ಮತದಾರರಲ್ಲಿ ವಿನಂತಿ
ಕಾಂಗ್ರೆಸ್ ಗೆಲ್ಲಿಸಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಗೆ ಮತ ನೀಡಿ. ಸರ್ಕಾರದ ಐದು ಗ್ಯಾರಂಟಿಗಳು , ಬಡವರ ಪರವಾಗಿವೆ. ವಿದ್ಯುತ್ ರಿಯಾಯಿತಿ, ಬಡ ಮಹಿಳೆಗೆ ನೆರವು ಬಹಳ ಮುಖ್ಯ ಕಾರ್ಯಕ್ರಮ ಇವೆ ಎಂದರು.

ಚುನಾವಣೆ ಕ್ರಿಕೆಟ್ ಇದ್ದಾಂಗ. ಆದರೆ ಕುಮಾರಸ್ವಾಮಿ ಹಾಗೆ ಆಧಾರ ರಹಿತ ಆರೋಪ ಮಾತಾಡಬಾರದು. ದೇವೇಗೌಡರ ಬಗ್ಗೆ ಅಭಿಮಾನ ಇದೆ. ಕುಮಾರಸ್ವಾಮಿ ಮಿತ್ರ. ರೆವಿನ್ಯೂ ಇರಲಿ, ಅರಣ್ಯ ಇರಲಿ ನಾನು ಒಂದಿಂಚು ಅತಿಕ್ರಮಣ ಮಾಡಿಲ್ಲ. ಹಾಗಾಗಿ ಅವರು ಕ್ಷಮೆ ಕೇಳಬೇಕು ಎಂದು ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.

ಮಾಜಿ ಶಾಸಕ ಜೆ.ಡಿ.ನಾಯ್ಕ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವ್ಕರ್, ದಿಗಂಬರ ಶೇಟ್ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next