Advertisement
“ಆಜೀವ ನಿಷೇಧದ ವೇಳೆ ನನ್ನ ಮುಂದೆ ಬರೀ ಅಂಧಕಾರವೇ ತುಂಬಿತ್ತು. ಕೋಣೆ ಯೊಂದರಲ್ಲಿ ಕುಳಿತು ಕಣ್ಣೀರು ಸುರಿಸುವುದೇ ಕೆಲಸವಾಗಿತ್ತು. ಹೊರಗೆ ಹೋಗಲು ಭಯ. ಹೆತ್ತವರಿಗೋ, ಇದನ್ನು ಎದುರಿಸುವ ಸಾಮರ್ಥ್ಯ ಇರಲಿಲ್ಲ. ಖಿನ್ನತೆಗೊಳಗಾದಾಗ ಆತ್ಮಹತ್ಯೆಗೂ ಯೋಚಿಸಿದ್ದೆ. ಆದರೆ ಕುಟುಂಬಕ್ಕೆ ನಾನು ಬೇಕಿದ್ದೆ ಎಂಬ ಒಂದೇ ಕಾರಣದಿಂದ ಸಾಯುವ ನಿರ್ಧಾರದಿಂದ ಹಿಂದೆ ಸರಿದೆ…’ ಎಂದಿದ್ದಾರೆ ಶ್ರೀಶಾಂತ್.
“ಗೆಳೆಯ ಸುಶಾಂತ್ ಸಿಂಗ್ ಆತ್ಮಹತ್ಯೆ ನನ್ನನ್ನು ತೀವ್ರವಾಗಿ ಕಾಡುತ್ತಿದೆ. ಖನ್ನತೆಯೇ ಇದಕ್ಕೆ ಕಾರಣ. ಒಮ್ಮೆ ನಾನೂ ಈ ಸ್ಥಿತಿ ತಲುಪಿದ್ದೆ ಎಂದು ಯೋಚಿಸುವಾಗ ಭಯವಾಗುತ್ತದೆ, ಆದರೆ ಆ ಕಠಿನ ನಿರ್ಧಾರದಿಂದ ಹಿಂದೆ ಸರಿದುದಕ್ಕೆ ಸಮಾಧಾನವಾಗುತ್ತಿದೆ. ಇದನ್ನೆಲ್ಲ ಸಣ್ಣದೊಂದು ಪುಸ್ತಕ ರೂಪದಲ್ಲಿ ಹೊರತರಲಿದ್ದೇನೆ’ ಎಂದು ಶ್ರೀಶಾಂತ್ ಹೇಳಿದರು.