ಬೆಂಗಳೂರು: ಜನಪ್ರಿಯ ಕಾರು ತಯಾರಕ ಸಂಸ್ಥೆ ಹ್ಯುಂಡೈ ಮೋಟಾರ್ ಇಂಡಿಯಾ, ಚೆನ್ನೈ ಸಮೀಪದ ಶ್ರೀಪೆರಂಬದೂರಿನ ಉತ್ಪಾದನಾ ಘಟಕದಲ್ಲಿ ಅತ್ಯಾಧುನಿಕ ರೋಬೋಟಿಕ್ ತಂತ್ರಜ್ಞಾನವುಳ್ಳ ಬೃಹತ್ ಸಾಮರ್ಥ್ಯದ ಘಟಕವನ್ನು ತೆರೆದಿದೆ.
ಆಟೋಮೊಬೈಲ್ ಕ್ಷೇತ್ರದಲ್ಲಿ ಮೇಕ್ ಇನ್ ಇಂಡಿಯಾ ಯೋಜನೆಯಡಿ ಸ್ಥಾಪಿಸಿರುವ ಈ ಘಟಕ ಭವಿಷ್ಯದ ತಂತ್ರಜ್ಞಾನವನ್ನು ಒಳಗೊಂಡಿದೆ. 535 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿರುವ ಘಟಕದಲ್ಲಿ ಗುಣಮಟ್ಟದ ಎಂಜಿನ್ ತಪಾಸಣೆ ಮತ್ತು ಉತ್ಪಾದನೆಗೆ 590-ಜನರೇಷನ್‌ನ 4 ರೋಬೋಟ್‌ಗಳನ್ನು ಅಳವಡಿಸಲಾಗಿದೆ.
ಈ ವೇಳೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ವೈ.ಕೆ.ಕೂ ಅವರು ಮಾತನಾಡಿ, ಪ್ರಸ್ತುತ ಶ್ರೀಪೆರಂಬದೂರು ಘಟಕ, ವಾರ್ಷಿಕ ಏಳು ಲಕ್ಷ ಕಾರುಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇಲ್ಲಿ ವ್ಯಾಲ್ಯೂ ಇಂಜಿನಿಯರಿಂಗ್ ವ್ಯವಸ್ಥೆ ಮೂಲಕ 2019ರ ಅಂತ್ಯದೊಳಗೆ 7.5 ಲಕ್ಷ ಕಾರುಗಳನ್ನು ತಯಾರಿಸುವ ಗುರಿ ಹೊಂದಿದ್ದೇವೆ. ಸ್ಯಾಂಟ್ರೋ ಕಾರಿನಿಂದ ಆರಂಭಿಸಿದ ನಮ್ಮ ಪ್ರಯಾಣ ಇಂದು ಮಲ್ಟಿ-ಪಾಯಿಂಟ್ ಪ್ಯುಯೆಲ್ ಇಂಜೆಕ್ಷನ್ ಮತ್ತು ಭರತ್ ಸ್ಟೇಜ್-2 ತಂತ್ರಜ್ಞಾನವುಳ್ಳ ಕಾರುಗಳನ್ನು ತಯಾರಿಸುವ ದೇಶದ ಪ್ರಥಮ ಸಂಸ್ಥೆಯಾಗಿ ಹೊರಹೊಮ್ಮಿದೆ ಎಂದರು.
ಸ್ಮಾರ್ಟ್ ಮ್ಯಾನುಫ್ಯಾಕ್ಚರಿಂಗ್ 4.0 ಪ್ರಾಕೀrಸಸ್ ಜತೆಗೆ ಡಿಜಿಟಲೈಸೇಷನ್, ಬಿಗ್ ಡಾಟಾ ಹಾಗೂ ಡಾಟಾ ಅನಲಿಟಿಕ್ಸ್ ಇಲ್ಲಿ ಇರುವುದರಿಂದ ಉನ್ನತ ಗುಣಮಟ್ಟದ ಶೂನ್ಯ ದೋಷವುಳ್ಳ ಕಾರುಗಳನ್ನು ಉತ್ಪಾದಿಸಲಾಗುತ್ತದೆ. ಕವಚ ನಿರ್ಮಾಣ ಶೇ.100ರಷ್ಟು ವೆಲ್ಡ್ ಆಟೋಮೇಷನ್ ಹಾಗೂ ಏಕಸಾಲಿನಲ್ಲಿ 5 ಮಾದರಿಗಳನ್ನು ಉತ್ಪಾದಿಸುವ ಸಾಮರ್ಥ್ಯದ ಘಟಕ ಇದಾಗಿದೆ. 2020ರೊಳಗೆ ಎಲೆಕ್ಟ್ರಿಕ್ ಎಸ್‌ಯುವಿ ಕಾರು ಸೇರಿದಂತೆ ಎಂಟು ಹೊಸ ಉತ್ಪನ್ನಗಳನ್ನು ಹೊರತರಲಾಗುವುದು ಎಂದು ಸಿಸಿಒ ಹೇಳಿದರು.
ಹ್ಯುಂಡೈ ಇಯಾನ್, ಗ್ರ್ಯಾಂಡ್ ಐ10, ಎಲೈಟ್ ಐ20, ಆ್ಯಕೀrವ್ ಐ20, ಎಕ್ಸ್‌ಸೆಂಟ್, ವರ್ನಾ, ಎಲೆಂತ್ರಾ, ಕ್ರೆಟಾ ಮತ್ತು ಟಕ್ಸನ್, ಸಂಸ್ಥೆಯ ಉತ್ಪನ್ನಗಳಾಗಿವೆ ಎಂದು ಅವರು ವಿವರಿಸಿದರು.