ಯುಟಿಲಿಟಿ ವೆಹಿಕಲ್ಸ್ ವಿಭಾಗವನ್ನು ಮಾತ್ರ ಗಮನಿಸಿದರೆ ಮಾರುತಿ ಸುಜುಕಿ ಮಾರಾಟ ಮಾಡಿದ್ದು ಕೇವಲ 6,355 ವಾಹನಗಳು. ಹ್ಯುಂಡೈ 13,808, ಕಿಯಾ 11,050 ವಾಹನಗಳನ್ನು ಮಾರಾಟ ಮಾಡಿದೆ. ಈ ಅಂಶವನ್ನು ಗಮನಿಸಿದಾಗ ಯುಟಿಲಿಟಿ ವಾಹನಗಳ ಮಾರಾಟ ಕ್ಷೇತ್ರದಲ್ಲಿ ಅವೆರಡು ಕಂಪೆನಿಗಳು ಮಾರುಕಟ್ಟೆಯಲ್ಲಿ ದಾಪುಗಾಲು ಇಡುತ್ತಿರುವುದು ಕಂಡುಬರುತ್ತಿದೆ ಎಂದು “ದ ಫೈನಾನ್ಶಿಯಲ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.
Advertisement
ಎಸ್‌ಯುವಿಗೆ ಹೋಲಿಕೆ ಮಾಡಿದರೆ ಪ್ರಸಕ್ತ ವರ್ಷದ ಮೊದಲಿನ 5 ತಿಂಗಳಲ್ಲಿ 4,67,771 ವಾಹನಗಳು ಮಾರಾಟವಾಗಿವೆ. ಈ ಪೈಕಿ ಹ್ಯುಂಡೈ ಕಂಪೆನಿಯದ್ದೇ 1,09,172 ವಾಹನಗಳು ಮಾರಾ ಟವಾಗಿವೆ. ಈ ಪೈಕಿ 57,342 ಕ್ರೇಟಾ ಮತ್ತು 50 ಸಾವಿರ ವೆನ್ಯು ಪಾಲು ಇದೆ. 2015ರಲ್ಲಿ ಕ್ರೆಟಾ ಮಾರುಕಟ್ಟೆಗೆ ಬಿಡುಗಡೆಯಾದ ಬಳಿಕ ಅದರ ಪ್ರಭಾವ ಹೆಚ್ಚಾಗುತ್ತಿದೆ ಎಂದು ಹ್ಯುಂಡೈ ಮೋಟರ್ ಇಂಡಿಯಾದ ಸೇಲ್ಸ್ ಮತ್ತು ಮಾರ್ಕೆಟಿಂಗ್ ವಿಭಾಗದ ಉಪಾಧ್ಯಕ್ಷ ತರುಣ್ ಗರ್ಗ್ ಹೇಳಿದ್ದಾರೆ. 2015ರಲ್ಲಿ ಶೇ.11.3 ಇದ್ದದ್ದು, 2019ರಲ್ಲಿ ಶೇ.22.7, 2020ರಲ್ಲಿ ಶೇ.25.5ಕ್ಕೆ ಏರಿಕೆಯಾಗಿದೆ.