Advertisement

20 ಅದೃಷ್ಟಶಾಲಿ ಗ್ರಾಹಕರಿಗೆ ಹುಂಡೈ ಕಾರು

11:13 PM Dec 08, 2019 | Lakshmi GovindaRaj |

ಬೆಂಗಳೂರು: ಪೈ ಇಂಟರ್‌ನ್ಯಾಷನಲ್‌ ಮೆಗಾ ಫೆಸ್ಟಿವಲ್‌ ಸೇಲ್‌ ಲಕ್ಕಿ ಡ್ರಾನಲ್ಲಿ 20 ಅದೃಷ್ಟ ಶಾಲಿ ಗ್ರಾಹಕರು ಬಹುಮಾನವಾಗಿ ಕಾರು ಒಳಗೊಂಡಂತೆ ಸಾವಿರಾರು ಗ್ರಾಹಕರು ಏಳು ಕೋಟಿ ರೂ.ಮೌಲ್ಯದ ಬಹುಮಾನ ಹಾಗೂ ಶಾಪಿಂಗ್‌ ಅವಕಾಶ ಪಡೆದುಕೊಂಡರು.

Advertisement

ಸೆ.1ರಿಂದ ನವೆಂಬರ್‌ ಮಾಸಾಂತ್ಯದವರೆಗೆ ಹಮ್ಮಿಕೊಳ್ಳಲಾಗಿದ್ದ ಮೆಗಾ ಫೆಸ್ಟಿವಲ್‌ ಸಂದರ್ಭದಲ್ಲಿ ಖರೀದಿಸಿದ್ದ ಗ್ರಾಹಕರಿಗೆ ಈ ಬಂಪರ್‌ ಬಹುಮಾನಗಳನ್ನು ನಿಗದಿಪಡಿಸಿ ಕೂಪನ್‌ ವಿತರಿಸಲಾಗಿತ್ತು. ಅದರಂತೆ ಈಗ ಲಕ್ಕಿ ಡ್ರಾ ನಡೆದಿದ್ದು, 88,180 ಗ್ರಾಹಕರಿಗೆ ಏಳು ಕೋಟಿ ರೂ.ಮೌಲ್ಯದ ಬಹುಮಾನ ಗಳನ್ನು ಪೈ ಇಂಟರ್‌ನ್ಯಾಷನಲ್‌ ವಿತರಿಸಿದೆ.

ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಭಾನುವಾರ ನಡೆದ ಲಕ್ಕಿ ಡ್ರಾ ಕಾರ್ಯಕ್ರಮದಲ್ಲಿ ಅದೃಷ್ಟಶಾಲಿ ಕೂಪನ್‌ ಸಂಖ್ಯೆಗಳನ್ನು ಪುಟ್ಟ ಮಕ್ಕಳಿಂದ ಪಾರದರ್ಶಕವಾಗಿ ಬಿಡುಗಡೆ ಮಾಡಲಾಯಿತು. ಅವುಗಳಲ್ಲಿ 5 ಗ್ರಾಹಕರು ಮೆಗಾ ಬಂಪರ್‌ ಕೊಡುಗೆಯಾಗಿ ಹುಂಡೈ ಎಲೀಟ್‌ ಐ20 ಕಾರು, 5 ಗ್ರಾಹಕರು ಸೂಪರ್‌ ಬಂಪರ್‌ ಕೊಡುಗೆಯಾಗಿ ಹುಂಡೈ ಗ್ರಾಂಡ್‌ ಐ10 ಹಾಗೂ 10 ಗ್ರಾಹಕರು ಬಂಪರ್‌ ಕೊಡುಗೆಯಾಗಿ ಹುಂಡೈ ಸ್ಯಾಂಟ್ರೋ ಎರಾ ಎಗ್ಸಿಕ್ಯೂಟಿವ್‌ ಕಾರುಗಳನ್ನು ಪಡೆದಿದ್ದಾರೆ.

ಇದಲ್ಲದೇ ಪ್ರಥಮ ಬಹುಮಾನವಾಗಿ 160 ಅದೃಷ್ಟಶಾಲಿಗಳಿಗೆ ಸುಜುಕಿ ಆಕ್ಸೆÕಸ್‌ 125 ಬೈಕ್‌, ಎರಡನೇ ಬಹುಮಾನವಾಗಿ 8 ಸಾವಿರ ಜನರಿಗೆ 1,000 ರೂ.ಗಳ ಶಾಪಿಂಗ್‌ ಕೂಪನ್‌ ಮತ್ತು 3ನೇ ಬಹುಮಾನವಾಗಿ 80 ಸಾವಿರ ಅದೃಷ್ಟಶಾಲಿ ಗ್ರಾಹಕರಿಗೆ 500 ರೂ.ಗಳ ಶಾಪಿಂಗ್‌ ಕೂಪನ್‌ಗಳನ್ನು ನೀಡಲಾಯಿತು.

ಲಕ್ಕಿ ಡ್ರಾಗೂ ಮುನ್ನ ಮಾತನಾಡಿದ ಪೈ ಇಂಟರ್‌ ನ್ಯಾಷನಲ್‌ ಎಲೆಕ್ಟ್ರಾನಿಕ್‌ ಲಿಮಿಟೆಡ್‌ನ‌ ವ್ಯವಸ್ಥಾಪಕ ನಿರ್ದೇಶಕ ರಾಜ್‌ಕುಮಾರ್‌ ಪೈ, ಬೆಂಗಳೂರಿನಲ್ಲಿ 1 ಮಳಿಗೆಯೊಂದಿಗೆ ಸಂಸ್ಥೆ ಆರಂಭಗೊಂಡಿತ್ತು. ಇಂದು ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ 225 ಪೈ ಇಂಟರ್‌ನ್ಯಾಷನಲ್‌ನ ಮಳಿಗೆಗಳಿವೆ. ಮುಂದಿನ ದಿನದಲ್ಲಿ ವಹಿವಾಟು ಮತ್ತಷ್ಟು ವಿಸ್ತರಣೆಗೊಳ್ಳಲಿದೆ.

Advertisement

ಈವರೆಗೆ 264 ಜನರಿಗೆ ಕಾರುಗಳನ್ನು ವಿತರಿಸಲಾಗಿದೆ. ಚಿನ್ನ, ನಗದು ಬಹುಮಾನಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ವಿತರಿಸಲಾಗಿದೆ ಎಂದು ತಿಳಿಸಿದರು. ಈ ಬಾರಿ ಫೆಸ್ಟಿವಲ್‌ ಸೇಲ್‌ನಲ್ಲಿ 7 ಕೋಟಿ ರೂ.ಗಳ ಮೊತ್ತದ ಬಹುಮಾನಗಳನ್ನು ನಿಗದಿ ಪಡಿಸಿ ಒಟ್ಟು 16 ಲಕ್ಷ ಕೂಪನ್‌ಗಳನ್ನು ಮುದ್ರಿಸಲಾಗಿದೆ. ಪಾರದರ್ಶಕ ರೀತಿಯಲ್ಲಿ ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಈ ಲಕ್ಕಿ ಡ್ರಾ ಮುಂದುವರಿಯಲಿದ್ದು, ಹೊಸ ವರ್ಷದ ಸಂದರ್ಭದಲ್ಲಿಯೂ ಮಾರಾಟ ಮೇಳ ನಡೆಯಲಿದೆ. ಗ್ರಾಹಕರು ಸದುಪ ಯೋಗ ಪಡೆಯಬೇಕು. ಇನ್ನು ಈ ಬಾರಿ ಲಕ್ಕಿ ಡ್ರಾ ವಿಜೇತರ ಹೆಸರು, ವಿಳಾಸ ಹಾಗೂ ಬಹುಮಾನದ ಮಾಹಿತಿಯನ್ನು ಎಲ್ಲ ಪೈ ಇಂಟರ್‌ನ್ಯಾಷನಲ್‌ ಮಳಿಗೆಗಳಲ್ಲಿ ಪ್ರಕಟಿಸ ಲಾಗುತ್ತಿದ್ದು, ವಿಜೇತರಿಗೆ ಬಹುಮಾನ ತಲುಪಿ ಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದರು.

ನಮ್ಮ ಸಂಸ್ಥೆಯು ಸಾಮಾಜಿಕ ಕಾರ್ಯಗಳಲ್ಲಿಯೂ ತೊಡಗಿಕೊಂಡಿದ್ದು, ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳಿಗೆ 1 ಲಕ್ಷ ನೋಟ್‌ಬುಕ್‌ಗಳನ್ನು ವಿತರಿಸಲಾ ಗುತ್ತದೆ. ಪೈ ಇಂಟರ್‌ ನ್ಯಾಷನಲ್‌ ಐದು ಸಾವಿರ ಜನರಿಗೆ ಉದ್ಯೋಗ ನೀಡಿದೆ.
-ರಾಜ್‌ಕುಮಾರ್‌ ಪೈ, ಪೈ ಇಂಟರ್‌ ನ್ಯಾಷನಲ್‌ ವ್ಯವಸ್ಥಾಪಕ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next