ಹೈದರಾಬಾದ್: ವಿದ್ಯುತ್‌ಚಾಲಿತ ವಾಹನ ಗಳ ಉತ್ಪಾದನೆಗೆ ಪ್ರೋತ್ಸಾಹ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿರುವ ಮಧ್ಯೆಯೇ, ಹೈಡ್ರೋಜನ್ ಆಧರಿತ ಇಂಧನ ವ್ಯವಸ್ಥೆ ಉತ್ತಮ ಆಯ್ಕೆ ಎಂದು ಇಸ್ರೋದ ಮಾಜಿ ಮುಖ್ಯಸ್ಥ ಜಿ ಮಾಧವನ್ ನಾಯರ್ ಹೇಳಿದ್ದಾರೆ. ಅಲ್ಲದೆ ಟಾಟಾ ಮೋಟಾರ್ಸ್ ಹಾಗೂ ಇಸ್ರೋ ಜಂಟಿಯಾಗಿ ಈ ಹಿಂದೆ ಹೈಡ್ರೋ ಜನ್ ಇಂಧನದ ಬಸ್ ಅಭಿವೃದ್ಧಿಪಡಿಸಿ ಪರಿಚಯಿಸಿದ್ದ ಬಗ್ಗೆ ಅವರು ಈ ವೇಳೆ ಉಲ್ಲೇಖೀಸಿದ್ದಾರೆ.
ದೀರ್ಘಾವಧಿಯಲ್ಲಿ ಹೈಡ್ರೋಜನ್ ಆಧರಿತ ಬಸ್ ಹೆಚ್ಚು ಸೂಕ್ತ. ಇದು ಮುಂದಿನ ತಲೆಮಾರಿನ ಇಂಧನವಾಗಿರಲಿದೆ. ಆದರೆ ಸದ್ಯ ಈ ತಂತ್ರಜ್ಞಾನ ವೆಚ್ಚದಾಯಕ. ಹೈಡ್ರೋಜನ್ ಹಾಗೂ ಇಂಧನ ಕೋಶಗಳನ್ನು ಕಡಿಮೆ ವೆಚ್ಚದಲ್ಲಿ ಉತ್ಪಾದಿಸುವುದು ನಮ್ಮ ಮುಂದಿ ರುವ ಸವಾಲು. ಇದಕ್ಕಾಗಿ ಹೆಚ್ಚಿನ ಸಂ ಶೋಧನೆ ಮತ್ತು ಅಭಿವೃದ್ಧಿ ಕಾರ್ಯಕ್ರಮ ಹಮ್ಮಿ ಕೊಳ್ಳಬೇಕಿದೆ ಎಂದು ಅವರು ಹೇಳಿದ್ದಾರೆ.
ಲೀಥಿಯಂ ಬ್ಯಾಟರಿಯಿಂದ ಪರಿಸರ ನಾಶ: ಪ್ರಸ್ತುತ ಎಲೆಕ್ಟ್ರಿಕ್ ವಾಹನಗಳಲ್ಲಿ ಬಳಸಲಾಗು ತ್ತಿರುವ ಲೀಥಿಯಮ್ ಅಯಾನ್ ಬ್ಯಾಟರಿ ಗಳು ಪರಿಸರ ಸ್ನೇಹಿಯಲ್ಲ. ಅವುಗಳ ಬಾಳಿಕೆ 5 ರಿಂದ ಗರಿಷ್ಠ 10 ವರ್ಷಗಳು ಮಾತ್ರ. ನಂತರ ಅವುಗಳನ್ನು ವಿಲೇವಾರಿ ಮಾಡಲು ಸೂಕ್ತ ವಿಧಾನಗಳಿಲ್ಲ. ಇದರಿಂದ ಪರಿಸರ ಮಾಲಿನ್ಯವಾಗುತ್ತದೆ. ತೇವಾಂಶ ವಿಲ್ಲದ ವಾ ತಾ ವರಣದಲ್ಲಿ ಇವುಗಳ ಕಾರ್ಯನಿರ್ವಹಣೆ ಉತ್ತಮವಾಗಿ ರುವುದಿಲ್ಲ ಎಂದಿದ್ದಾರೆ.
ಹೈಡ್ರೋಜನ್‌ನಿಂದ ಇಂಧನ ಉತ್ಪಾದನೆ ಹೇಗೆ?
ಹೈಡ್ರೋಜನ್‌ಅನ್ನು ವಿವಿಧ ಮೂಲ ಗಳಿಂದ ಉತ್ಪಾದಿಸಿ ಸಂಕುಚಿತಗೊಳಿಸಿದ ರೂಪದಲ್ಲಿ ಸಂಗ್ರಹಿಸಲಾಗುತ್ತದೆ. ಇದು ವಾತಾವರಣದಲ್ಲಿರುವ ಆಮ್ಲಜನಕ ದೊಂದಿಗೆ ಘರ್ಷಣೆ ಹೊಂದಿ, ಇಂಧನ ಕೋಶಗಳನ್ನು ಚಾರ್ಜ್ ಮಾಡುತ್ತದೆ. ಈ ಕೋಶಗಳು ಮೋಟಾರ್‌ಗೆ ವಿದ್ಯುತ್ ಒದಗಿಸುತ್ತವೆ.